ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ವರ್ಗಾವಣೆ; ವೀರಚಕ್ರ ಪ್ರಶಸ್ತಿಗೂ ಶಿಫಾರಸು

ಮಿಗ್​ 21 ಯುದ್ಧ ವಿಮಾನದಿಂದ ಎಫ್​ 16 ಜೆಟ್​ ವಿಮಾನವನ್ನು ಹೊಡೆದುರುಳಿಸಿ ಪಾಕಿಸ್ತಾನ ವಾಯುನೆಲೆಯೊಳಗೆ ಸೆರೆಯಾಗಿದ್ದ ಅಭಿನಂದನ್​ ಅವರನ್ನು 2 ದಿನಗಳವರೆಗೆ ವಶದಲ್ಲಿರಿಸಿಕೊಂಡಿತ್ತು. ನಂತರ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರ ಮಾಡಿತ್ತು.

Sushma Chakre | news18
Updated:April 20, 2019, 10:40 PM IST
ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ವರ್ಗಾವಣೆ; ವೀರಚಕ್ರ ಪ್ರಶಸ್ತಿಗೂ ಶಿಫಾರಸು
ಅಭಿನಂದನ್​ ವರ್ತಮಾನ್
Sushma Chakre | news18
Updated: April 20, 2019, 10:40 PM IST
ನವದೆಹಲಿ (ಏ. 20): ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿ ಬಳಿಕ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ಪಾಕಿಸ್ತಾನದ ಗಡಿಯ ಬಳಿ ಇರುವ ಪ್ರಮುಖ ವಾಯುನೆಲೆಗೆ ವರ್ಗಾವಣೆ ಮಾಡಲಾಗಿದೆ.

ಈಗಾಗಲೇ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ಸದ್ಯದಲ್ಲೇ ಅಭಿನಂದನ್ ಶ್ರೀನಗರ ವಾಯುನೆಲೆಯಿಂದ ಅಲ್ಲಿಗೆ ತೆರಳಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಭದ್ರತಾ ದೃಷ್ಟಿಯಿಂದ ಹೊಸ ವಾಯುನೆಲೆಯ ಹೆಸರನ್ನು ಗೌಪ್ಯವಾಗಿಡಲಾಗಿದೆ. ಪಾಕಿಸ್ತಾನದ ಗಡಿಗೆ ಅಂಟಿಕೊಂಡಿರುವ ವಾಯುನೆಲೆಗೆ ಅಭಿನಂದನ್​ ಅವರನ್ನು ವರ್ಗಾಯಿಸಲಾಗಿದೆ ಎಂಬ ಮಾಹಿತಿಯಷ್ಟೇ ಸಿಕ್ಕಿದೆ.

ಪ್ರಧಾನಿ ಮೋದಿ ಜೀವನ ಕುರಿತ ವೆಬ್​ ಸೀರೀಸ್​ ಬ್ಯಾನ್​ ಮಾಡಿದ ಚುನಾವಣಾ ಆಯೋಗ

ವರ್ಗಾವಣೆಯ ಜೊತೆಯಲ್ಲಿ ವಿಂಗ್​ ಕಮಾಂಡರ್​ ಅಭಿನಂದನ್​ ಅವರ ಹೆಸರನ್ನು ವೀರಚಕ್ರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂಬ ಸುದ್ದಿಯೂ ದೊರಕಿದೆ. ಯುದ್ಧದ ಸಮಯದಲ್ಲಿ ನೀಡಲಾಗುವ ಸೇನೆಯ 3ನೇ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ವೀರ ಯೋಧರಿಗೆ ನೀಡುವ ಪ್ರಶಸ್ತಿಗೆ ಅಭಿನಂದನ್​ ಹೆಸರನ್ನು ಶಿಫಾರಸು ಮಾಡಲಾಗಿದೆ.

ಫೆ. 27ರಂದು ಮಿಗ್​ 21 ಯುದ್ಧ ವಿಮಾನದಿಂದ ಎಫ್​ 16 ಜೆಟ್​ ವಿಮಾನವನ್ನು ಹೊಡೆದುರುಳಿಸಿ ಪಾಕಿಸ್ತಾನ ವಾಯುನೆಲೆಯೊಳಗೆ ಸೆರೆಯಾಗಿದ್ದ ಅಭಿನಂದನ್​ ಅವರನ್ನು 2 ದಿನಗಳವರೆಗೆ ವಶದಲ್ಲಿರಿಸಿಕೊಂಡಿತ್ತು. ನಂತರ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರ ಮಾಡಿತ್ತು.

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...