ಪಾಕ್​ ಸೆರೆಯಿಂದ ಬಿಡುಗಡೆಯಾಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​​ಗೆ ವೀರ ಚಕ್ರ ಪ್ರಶಸ್ತಿ

ಪಾಕ್​ ವಶದಲ್ಲಿದ್ದಾಗ ಅವರು ಮಾನಸಿಕ ಹಿಂಸೆ ನೀಡಿದರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಅಭಿನಂದನ್​ ದೇಶದ ಹೀರೋ ಆಗಿದ್ದರು.

Seema.R | news18-kannada
Updated:August 14, 2019, 11:16 AM IST
ಪಾಕ್​ ಸೆರೆಯಿಂದ ಬಿಡುಗಡೆಯಾಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​​ಗೆ ವೀರ ಚಕ್ರ ಪ್ರಶಸ್ತಿ
ಅಭಿನಂದನ್​ ವರ್ತಮಾನ್
  • Share this:
ನವದೆಹಲಿ (ಆ.14): ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನ ವಶದಲ್ಲಿ ಸಿಲುಕಿ ಸುರಕ್ಷಿತವಾಗಿ ದೇಶಕ್ಕೆ ಮರಳಿದ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​​ ಅವರಿಗೆ  ವೀರ ಚಕ್ರ ಗೌರವ ಸಿಕ್ಕಿದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್, ​ ಪೈಲಟ್​ ಅಭಿನಂದನ್​ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ವಾಯುಗಡಿ ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕ್​ ಯುದ್ಧ ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಹೊಡೆದುರುಳಿಸಿದ್ದರು. ಈ ವೇಳೆ ಪಾಕ್​ ವಿಮಾನ ಬೆನ್ನತ್ತಿ ಹೋದ ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದಿತ್ತು. ಎರಡು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದರು. ಇವರ ಸಾಹಸಕ್ಕೆ ಮೆಚ್ಚಿ ಕೇಂದ್ರ ಸರ್ಕಾರ ಇವರಿಗೆ ಈಗ ಈ ಗೌರವ ನೀಡುತ್ತಿದೆ.

ಇದನ್ನು ಓದಿ: ಪ್ರವಾಹ ರೌದ್ರತೆ: ಕರ್ನಾಟಕದ 54 ಸೇರಿ ದೇಶಾದ್ಯಂತ 200ರ ಗಡಿ ದಾಟಿದ ಸಾವಿನ ಪ್ರಮಾಣ

ಪಾಕ್​ ವಶದಲ್ಲಿದ್ದಾಗ ಅವರು ಮಾನಸಿಕ ಹಿಂಸೆ ನೀಡಿದರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಅಭಿನಂದನ್​ ದೇಶದ ಹೀರೋ ಆಗಿದ್ದರು. ತಮಿಳುನಾಡು ಮೂಲದ ಅಭಿನಂದನ್​ ತೋರಿದ ಸಾಹಸಕ್ಕೆ ಇಡೀ ದೇಶವೇ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿತು.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ