Agnipath: ವಿರೋಧದ ನಡುವೆಯೇ ಹೆಜ್ಜೆ ಮುಂದಿಟ್ಟ ಭಾರತೀಯ ವಾಯು ಸೇನೆ! ಅಗ್ನಿಪಥ್ ನೇಮಕಾತಿ ಆರಂಭಿಸಿದ IAF

ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರಿಗೆ ಪ್ರಮುಖ ದಿನಾಂಕಗಳ ಸೂಚನೆಯನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆಯ (Agnipath Scheme) ಪರ ಹಾಗೂ ವಿರೋಧ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಅಗ್ನಿಪಥ್ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ (Protest) ಮುಂದುವರೆದಿದೆ. ಈ ನಡುವೆಯೇ ಭಾರತೀಯ ವಾಯು ಸೇನೆ (IAF) ಅಗ್ನಿಪಥ್ ಯೋಜನೆಗಾಗಿ ಅಗ್ನಿವೀರರ (Agniveer) ನೇಮಕಾತಿ ಪ್ರಕ್ರಿಯೆಗೆ (Recruitment) ನಿನ್ನೆಯಿಂದ ಚಾಲನೆ ನೀಡಿದೆ. ಭಾರತೀಯ ವಾಯುಪಡೆ ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ನೋಂದಣಿ (Registration) ಆರಂಭಿಸುವ ಮೂಲಕ ಹೊಸ ನೇಮಕಾತಿ ಪ್ರಕ್ರಿಯೆಗೆ ನಿನ್ನೆ ಚಾಲನೆ ನೀಡಿದೆ. ಅಗ್ನಿವೀರ್‌ಗೆ ಅರ್ಜಿ (Apply) ಸಲ್ಲಿಸಲು ನೋಂದಣಿ ವಿಂಡೋ ತೆರೆಯಲಾಗಿದ್ದು, ಶುಕ್ರವಾರ ಬೆಳಗ್ಗೆ 10 ರಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಐಎಎಫ್ (IAF) ಟ್ವಿಟ್ (Tweet) ಮಾಡಿದೆ.

 ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ಆರಂಭ

ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರಿಗೆ ಪ್ರಮುಖ ದಿನಾಂಕಗಳ ಸೂಚನೆಯನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದೆ.

ಎಎಎಫ್‌ನಿಂದ ಟ್ವೀಟ್

"#Agniveervayuಗೆ ಅರ್ಜಿ ಸಲ್ಲಿಸಲು ನೋಂದಣಿ ವಿಂಡೋ ತೆರೆಯಲಾಗಿದ್ದು, ಶುಕ್ರವಾರ ಬೆಳಗ್ಗೆ 10 ರಿಂದ ಕಾರ್ಯನಿರ್ವಹಿಸುತ್ತಿದೆ" ಎಂದು ಐಎಎಫ್ ಟ್ವಿಟ್ ಮಾಡಿದೆ. ಇದೇ ಜೂನ್ 14 ರಂದು ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿದ ಸರ್ಕಾರವು 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇರಿಸಲಾಗುವುದು ಮತ್ತು ಅವರಲ್ಲಿ 25 ಪ್ರತಿಶತವನ್ನು ನಂತರ ನಿಯಮಿತ ಸೇವೆಗೆ ಸೇರಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?

ಗರಿಷ್ಠ ವಯಸ್ಸಿನ ಮಿತಿ ಹೆಚ್ಚಳ

ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಂಡವರನ್ನು ' ಅಗ್ನಿವೀರ್ ' ಎಂದು ಕರೆಯಲಾಗುತ್ತದೆ. ಜೂನ್ 16 ರಂದು ಸರ್ಕಾರವು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ.

ಭಾರತೀಯ ವಾಯು ಸೇನೆ ವೆಬ್‌ಸೈಟ್‌ನಲ್ಲಿ ಅರ್ಜಿ

ಆಸಕ್ತ ಅಭ್ಯರ್ಥಿಗಳು ಭಾರತೀಯ ವಾಯು ಸೇನೆಯ ಅಧಿಕೃತ ವೆಬ್‌ಸೈಟ್ - careerindianairforce.cdac.in ಮೂಲಕ ನೇರವಾಗಿ ಈ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು . ಅಗ್ನಿಪಥ್ ಯೋಜನೆ 2022 ನೋಂದಣಿಗಳ ಮೂಲಕ IAF ನೇಮಕಾತಿಯು ಸೂಚನೆಯ ಪ್ರಕಾರ ಜುಲೈ 5, 2022 ರಂದು ಕೊನೆಗೊಳ್ಳುತ್ತದೆ.

ಅಗ್ನಿಪಥ್ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ

ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಏತನ್ಮಧ್ಯೆ ಸೋಮವಾರ ಅಗ್ನಿಪಥ್ ಯೋಜನೆ ಮರುಪರಿಶೀಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಲಾಗಿದೆ. ವಕೀಲ ಹರ್ಷ್ ಅಜಯ್ ಸಿಂಗ್ ಅವರು ಅಗ್ನಿಪಥ್ ಯೋಜನೆ ವಿರುದ್ಧ ಪಿಐಎಲ್ ಸಲ್ಲಿಸಿದ್ದು, ಅಗ್ನಿಪಥ್ ಯೋಜನೆ, ರಾಷ್ಟ್ರೀಯ ಭದ್ರತೆ ಮತ್ತು ಸೇನೆಯ ಮೇಲೆ ಅದರಿಂದಾಗುವ ಪರಿಣಾಮದ ಕುರಿತು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಮತ್ತೊಂದು ಅರ್ಜಿ ಸಲ್ಲಿಸಿರುವ ವಕೀಲ

ಪಿಐಎಲ್‌ನಲ್ಲಿ ವಕೀಲ ಎಂ.ಎಲ್‌. ಶರ್ಮಾ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.  ‘ಅಗ್ನಿಪಥ’ ಯೋಜನೆಯ ಮೂಲಕ ಶತಮಾನದಷ್ಟು ಹಳೆಯದಾದ ಸೇನಾ ನೇಮಕಾತಿ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಂಸತ್ತಿನ ಅನುಮೋದನೆ ಇಲ್ಲದ ಈ ಕ್ರಮ ಸಂವಿಧಾನಬಾಹಿರ’ ಎಂದಿದ್ದಾರೆ.

ಇದನ್ನೂ ಓದಿ: Explained: ಅಗ್ನಿಪಥ್‌ ಯೋಜನೆಯ ಲಾಭವೇನು? ಅಗ್ನಿವೀರರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಕೇವಿಯೆಟ್

ಇನ್ನು ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸುವ ಮೊದಲು ತನ್ನ ವಾದವನ್ನು ಆಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ ಗೆ ಕೇವಿಯೆಟ್ ಸಲ್ಲಿಸಿದೆ.
Published by:Annappa Achari
First published: