ಫಲಿಸಲಿಲ್ಲ ಕೋಟ್ಯಾಂತರ ಜನರ ಪ್ರಾರ್ಥನೆ: ಬೆ.10 ಗಂಟೆಗೆ ಕ್ಯಾಪ್ಟನ್ ವರುಣ್ ಸಿಂಗ್ ಪಾರ್ಥಿವ ಶರೀರ ರವಾನೆ

ಇಂದು ಬೆಳಗ್ಗೆ10 ಗಂಟೆಗೆ ಕಮಾಂಡೋ ಆಸ್ಪತ್ರೆಯಿಂದ ಯಲಹಂಕ ಏರ್​ ಬೇಸ್​​ಗೆ ಪಾರ್ಥೀವ ಶರೀರ ರವಾನೆಯಾಗಲಿದೆ. ಬಳಿಕ ಅಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತೆ. ಇದಾದ ಬಳಿಕ ಯಲಹಂಕದಿಂದ ಭೂಪಾಲ್ ಗೆ ಪಾರ್ಥಿರ ಶರೀರ ರವಾನೆಯಾಗಲಿದೆ.

ಕ್ಯಾಪ್ಟನ್​ ವರುಣ್​ ಸಿಂಗ್​

ಕ್ಯಾಪ್ಟನ್​ ವರುಣ್​ ಸಿಂಗ್​

  • Share this:
ತಮಿಳುನಾಡಿನ (Tamil Nadu ) ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನ (IAF Chopper Crash) ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್ (Group Captain Varun Singh) ನಿನ್ನೆ ನಿಧನರಾಗಿದ್ದಾರೆ. ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ (Bipin Rawat), ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ಒಂದು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ  ಕ್ಯಾಪ್ಟನ್​ ವರುಣ್​ ಸಿಂಗ್​(Varun Singh) ಹುತಾತ್ಮರಾಗಿದ್ದಾರೆ. ಕೊಟ್ಯಾಂತರ ಜನರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಕ್ಯಾಪ್ಟನ್​ ವರುಣ್​ ಸಿಂಗ್​ ಇಹಲೋಕ ತ್ಯಜಿಸಿದ್ದಾರೆ. ಶೇ.45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಕ್ಯಾಪ್ಟನ್​ ವರುಣ್​ ಸಿಂಗ್​ ಅವರಿಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ (Commando Hospital) ಅಂದಿನಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲು ವೆಲ್ಲಿಂಗ್ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು.ಇಂದು ಬೆಳಗ್ಗೆ 10 ಗಂಟೆಗೆ  ಆಸ್ಪತ್ರೆಯಿಂದ ಯಲಹಂಕ ಏರ್ ಬೇಸ್​​​(Air Base)ಗೆ ಕ್ಯಾಪ್ಟನ್​ ವರುಣ್​ ಸಿಂಗ್​ ಪಾರ್ಥೀವ ಶರೀರ ರವಾನೆಯಾಗಲಿದೆ. ಬಳಿಕ ಯಲಹಂಕದಿಂದ ಭೂಪಾಲ್ ಗೆ ಪಾರ್ಥಿರ ಶರೀರ ರವಾನೆಯಾಗಲಿದೆ.

ಯಲಹಂಕ ಏರ್​​ಬೇಸ್​ನಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​ಗೆ ನಮನ!

ದುರಂತದಲ್ಲಿ ಒಟ್ಟು 14 ಜನರ ಪೈಕಿ ವರುಣ್ ಸಿಂಗ್ (Varun singh) ಮಾತ್ರ ಜೀವಂತವಾಗಿದ್ದರು. ಅವರ ದೇಹ ಶೇಕಡಾ 80ರಷ್ಟು ಸುಟ್ಟುಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ವರುಣ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇವರೊಬ್ಬರು ಬದುಕಿದರು ಅಂದುಕೊಳ್ಳುವಷ್ಟರಲ್ಲಿ ಇವರು ಅಸುನೀಗಿದ್ದಾರೆ. ಇಂದು ಬೆಳಗ್ಗೆ10 ಗಂಟೆಗೆ ಕಮಾಂಡೋ ಆಸ್ಪತ್ರೆಯಿಂದ ಯಲಹಂಕ ಏರ್​ ಬೇಸ್​​ಗೆ ಪಾರ್ಥೀವ ಶರೀರ ರವಾನೆಯಾಗಲಿದೆ. ಬಳಿಕ ಅಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತೆ. ಇದಾದ ಬಳಿಕ ಯಲಹಂಕದಿಂದ ಭೂಪಾಲ್ ಗೆ ಪಾರ್ಥಿರ ಶರೀರ ರವಾನೆಯಾಗಲಿದೆ. ಸರ್ವೀಸ್ ಏರ್ ಕ್ರಾಫ್ಟ್ ಮೂಲಕ ಪಾರ್ಥೀವ ಶರೀರ ತೆಗೆದುಕೊಂಡು ಅಧಿಕಾರಿಗಳು ತೆರಳಲಿದ್ದಾರೆ.

ಇದನ್ನು ಓದಿ : ತಮಿಳುನಾಡಿನ ಹೆಲಿಕಾಪ್ಟರ್ ದುರಂತ: ಕೊನೆಗೂ ಬದುಕುಳಿಯದ ಕ್ಯಾಪ್ಟನ್ ವರುಣ್ ಸಿಂಗ್

ಇಂದು ಸಂಜೆ ಅಂತ್ಯಕ್ರಿಯೆ ಸಾಧ್ಯತೆ

ಕ್ಯಾಪ್ಟನ್ ವರುಣ್​ ಸಿಂಗ್​ ಅವರ ಪಾರ್ಥಿವ ಶರೀರ ಮಧ್ಯಾಹ್ನದ ವೇಳೆಗೆ ಬೋಪಾಲ್​ ತಲುಪಲಿದೆ. ಸೇನಾ ಅಧಿಕಾರಿಗಳು ಕುಟುಂಬಸ್ಥರಿಗೆ ಕ್ಯಾಪ್ಟನ್​ ವರುಣ್​ ಸಿಂಗ್​ ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಿದ್ದಾರೆ. ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರೆಲ್ಲ ಅಂತಿಮ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನು ಓದಿ : 17ಗನ್​ ಸೆಲ್ಯೂಟ್​​ ಗೌರವಗಳೊಂದಿಗೆ ಸಿಡಿಎಸ್​ ರಾವತ್​ ಅಂತ್ಯಕ್ರಿಯೆ

ಕಳೆದ ವರ್ಷ ತೇಜಸ್​ ಯುದ್ಧ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ನಡುವೆಯೂ ಅವರು ಧೈರ್ಯವಾಗಿ ಎಚ್ಚರಿಕೆಯಿಂದ ಧೃತಿಗೆಡದೇ ಸುರಕ್ಷಿತಾಗಿ ವಿಮಾನವನ್ನು ಕೆಳಗಿಳಿಸಿದ್ದರು.ಕಳೆದ ಆಗಸ್ಟ್ 15ರಂದು ವಿಂಗ್ ಕಮಾಂಡರ್​ ವರುಣ್ ಸಿಂಗ್ ಅವರು ಹಗುರ ಯುದ್ಧ ವಿಮಾನ (Light Combat Aircraft – LCA) ಸ್ಕ್ವಾರ್ಡನ್​ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು. ಆದರೆ ಇಂದು ಅವರು ನಮ್ಮ ಜೊತೆ ಇಲ್ಲ. ಇದನ್ನು ಕಂಡು ಇಡೀ ದೇಶವೇ ಕಣ್ಣೀರಿಡುತ್ತಿದೆ.
Published by:Vasudeva M
First published: