ನವದೆಹಲಿ(ಸೆ. 15): ನ್ಯಾಯಾಂಗ ನಿಂದನೆ ಪ್ರಕರಣದ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಪ್ರಶಾಂತ್ ಭೂಷಣ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. 2014ಕ್ಕೆ ಮುಂಚೆ ಅಣ್ಣಾ ಹಜಾರೆ ನೇತೃತ್ವದಲ್ಲಿ ದೇಶವ್ಯಾಪಿ ನಡೆದಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿಂದಿನ ಶಕ್ತಿ ಆರೆಸ್ಸೆಸ್ ಎಂದು ಅವರು ಹೇಳಿದ್ದಾರೆ. ಯುಪಿಎ ಸರ್ಕಾರವನ್ನು ಬೀಳಿಸಲು ಭ್ರಷ್ಟಾಚಾರ ವಿರೋಧಿ ಆಂದೋಲನ ರೂಪಿಸಿದ್ದ ಇಂಡಿಯಾ ಎಗೇಂಸ್ಟ್ ಕರಪ್ಷನ್ (ಐಎಸಿ) ಅನ್ನು ಹುಟ್ಟು ಹಾಕಿದ್ದೇ ಬಿಜೆಪಿ ಮತ್ತು ಆರೆಸ್ಸೆಸ್ ಎಂದು ಭೂಷಣ್ ಹೇಳಿದ್ಧಾರೆ. ಅಚ್ಚರಿ ಎಂದರೆ ಪ್ರಶಾಂತ್ ಭೂಷಣ್ ಅವರು ಇದೇ ಐಎಸಿಯ ಒಬ್ಬ ಕೋರ್ ಮೆಂಬರ್ ಆಗಿದ್ದವರು. ಮುಂದೆ ಇದೇ ಐಎಸಿಯನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷವಾಗಿ ಪರಿವರ್ತನೆ ಮಾಡಲಾಯಿತು. 2015ರಲ್ಲಿ ಇವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಅಣ್ಣಾ ಹಜಾರೆ ಆಂದೋಲನ ಬಿಜೆಪಿಯ ಪಿತೂರಿ ಎಂದು ಈ ಹಿಂದೆ ಹಲವರು ಆರೋಪ ಮಾಡಿದ್ದರು. ಇದೀಗ ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಅವರು ಆ ಆರೋಪವನ್ನು ದೃಢಪಡಿಸಿದ್ದಾರೆ. ಆದರೆ, ಪ್ರಶಾಂತ್ ಭೂಷಣ್ ಮಾತುಗಳನ್ನ ನಂಬುವುದಾದರೆ ಐಎಸಿಯಲ್ಲಿ ಬಿಜೆಪಿ ನೇರವಾಗಿ ಪಾಲ್ಗೊಳ್ಳದೆ ಕಣ್ಣಿಗೆ ಕಾಣದ ಶಕ್ತಿಯಾಗಿ ಬಲ ನೀಡಿದಂತಿದೆ.
“ಆ ಆಂದೋಲನದಲ್ಲಿ ಬಿಜೆಪಿ-ಆರೆಸ್ಸೆಸ್ ಪಾತ್ರದ ಬಗ್ಗೆ ಯಾವುದೇ ಸಂಶಯ ಉಳಿದಿಲ್ಲ. ಅಣ್ಣಾ ಹಜಾರೆಗೆ ಅರಿವಿರಲಿಲ್ಲ ಅನಿಸುತ್ತದೆ. ಆದರೆ, ಕೇಜ್ರಿವಾಲ್ ಅವರಿಗೆ ಇದು ಗೊತ್ತಿತ್ತು. ನಾನು ಅರವಿಂದ್ ಅವರ ಗುಣವನ್ನು ಬೇಗ ಅರ್ಥ ಮಾಡಿಕೊಳ್ಳಲು ವಿಫಲನಾಗಿದ್ದಕ್ಕೆ ವಿಷಾದವಾಗುತ್ತಿದೆ. ನನಗೆ ಅರಿವಿಗೆ ಬರುವ ಮುನ್ನ ನಾನು ಅದಾಗಲೇ ಮತ್ತೊಬ್ಬ ಬ್ರಹ್ಮರಾಕ್ಷಸನನ್ನು ಸೃಷ್ಟಿಮಾಡಿಬಿಟ್ಟಿದ್ದೆವು” ಎಂದು ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಸ್ಫೋಟಕ ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ: Alien Life on Venus - ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ; ವಿಜ್ಞಾನಿಗಳಲ್ಲಿ ಗರಿಗೆದರಿದ ಕುತೂಹಲ
What was known to us has been confirmed by a founding AAP member.
The IAC movement & AAP were propped up by the RSS/BJP to subvert democracy and bring down the UPA government.https://t.co/QDYyOOTtw7
— Rahul Gandhi (@RahulGandhi) September 15, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ