ನಿನ್ನ ಕತ್ತನ್ನು ಕತ್ತರಿಸಿಹಾಕುತ್ತೇನೆ ಎಂದು ಪಕ್ಷದ ಕಾರ್ಯಕರ್ತನ ವಿರುದ್ಧ ತಾಳ್ಮೆ ಕಳೆದುಕೊಂಡ ಹರಿಯಾಣ ಸಿಎಂ ಖಟ್ಟರ್​

ಸಾರ್ವಜನಿಕವಾಗಿ ಖಟ್ಟರ್​ ತಾಳ್ಮೆ ಕಳೆದುಕೊಂಡು ವರ್ತಿಸಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಲ್​ ಕಾರ್ಯಕ್ರಮವೊಂದರಲ್ಲಿ ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಪಕ್ಕಕ್ಕೆ ಜೋರಾಗಿ ತಳ್ಳಿ ಸುದ್ದಿಯಾಗಿದ್ದರು.

HR Ramesh | news18-kannada
Updated:September 11, 2019, 9:32 PM IST
ನಿನ್ನ ಕತ್ತನ್ನು ಕತ್ತರಿಸಿಹಾಕುತ್ತೇನೆ ಎಂದು ಪಕ್ಷದ ಕಾರ್ಯಕರ್ತನ ವಿರುದ್ಧ ತಾಳ್ಮೆ ಕಳೆದುಕೊಂಡ ಹರಿಯಾಣ ಸಿಎಂ ಖಟ್ಟರ್​
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
  • Share this:
ನವದೆಹಲಿ: ರ್ಯಾಲಿ ವೇಳೆ ತಾಳ್ಮೆ ಕಳೆದುಕೊಂಡ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​, ಪಕ್ಷದ ಕಾರ್ಯಕರ್ತನಿಗೆ ನಿನ್ನ ಕತ್ತನ್ನು ಕತ್ತರಿಸುವುದಾಗಿ ಬೆದರಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಇನ್ನು ಕೆಲವು ತಿಂಗಳಲ್ಲಿ ಹರಿಯಾನದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಸಿಎಂ ಮನೋಹರ್​ ಲಾಲ್​ ಖಟ್ಟರ್ ಅವರು ಜನ ಆಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಇದರ ಅಂಗವಾಗಿ ನಡೆದ ರ್ಯಾಲಿ ವೇಳೆ ಲಾರಿ ಮೇಲೆ ನಿಂತು ಮಾತನಾಡುತ್ತಿದ್ದ ಮನೋಹರ್​ ಲಾಲ್​ ಖಟ್ಟರ್ ಅವರ ಕೈಗೆ ಖಡ್ಗವನ್ನು ಕೊಡಲಾಯಿತು. ಒಂದು ಕೈಯ್ಯಲ್ಲಿ ಖಡ್ಗ ಹಿಡಿದು, ಮತ್ತೊಂದು ಕೈಯ್ಯಲ್ಲಿ ಮೈಕ್​ ಹಿಡಿದು ಖಟ್ಟರ್ ಮಾತನಾಡುತ್ತಿದ್ದರು. ಈ ವೇಳೆ  ಹಿಂದೆ ನಿಂತಿದ್ದ ಪಕ್ಷದ ಕಾರ್ಯಕರ್ತರೊಬ್ಬರು ಖಟ್ಟರ್ ತಲೆಗೆ ಬೆಳ್ಳಿ ಕಿರೀಟ ತೊಡಿಸಲು ಮುಂದಾದರು. ಇದರಿಂದ ಏಕಾಏಕಿ ಸಿಟ್ಟಿಗೆದ್ದ ಖಟ್ಟರ್​ ಹಿಂದೆ ತಿರುಗಿ, ಕೈಯಲ್ಲಿ ಕತ್ತಿ ಹಿಡಿದು, ಕುತ್ತಿಗೆ ಕತ್ತಿರಿಸಿಬಿಡುತ್ತೇನೆ ಎಂದು ಕೋಪಗೊಂಡು ಹೇಳಿದ್ದಾರೆ. ಇದರಿಂದ ಬೆದರಿದ ಕಾರ್ಯಕರ್ತರ ಕೈಮುಗಿದು, ಕ್ಷಮಾಪಣೆ ಕೋರಿದ್ದಾರೆ.

ಈ ವಿಡಿಯೋವನ್ನು ಹರಿಯಾಣ ಕಾಂಗ್ರೆಸ್​ ತನ್ನಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿ, ಬಿಜೆಪಿ ಸಿಎಂ ಖಟ್ಟರ್​ ನಡೆಯನ್ನು ಖಂಡಿಸಿದೆ.ಕೋಪ ಮತ್ತು ಗರ್ವ ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಟ್ಟರ್​ ಸಾಹೇಬರು ಏಕೆ ಕೋಪಗೊಂಡರು? ಖಡ್ಗವನ್ನು ತೆಗೆದು, ಅವರದೇ ಪಕ್ಷದ ನಾಯಕನ ತಲೆಯನ್ನು ಕತ್ತರಿಸುವುದಾಗಿ ಬೆದರಿಸಿದ್ದಾರೆ ಎಂದು ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದೆ.

ಇದನ್ನು ಓದಿ: ಮದುವೆಗೀಗ ಕಾಶ್ಮೀರದಿಂದ ಕನ್ಯೆ ತರಬಹುದು ಎಂದ ಹರಿಯಾಣ ಸಿಎಂ; ಮಹಿಳೆ ಗಂಡಿನ ಸ್ವತ್ತಲ್ಲ ಎಂದು ರಾಹುಲ್​​ ತಪರಾಕಿ

ತಮ್ಮದೇ ಪಕ್ಷದ ನಾಯಕರಿಗೆ ಹೀಗೆ ಹೇಳುತ್ತಾರೆ ಅಂದರೆ ಇನ್ನು ಸಾರ್ವಜನಿಕರಿಗೆ ಏನು ಮಾಡಬಹುದು? ಎಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಖಟ್ಟರ್, ಇಂದು ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ನನ್ನ ತಲೆಗೆ ಕಿರೀಟ ಇಡಲು ಬಂದರು. ಆ ಕ್ಷಣಕ್ಕೆ ನನಗೆ ತುಂಬಾ ಕೋಪ ಬಂತು ಮತ್ತು ಅದನ್ನು ಸಹಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ನಾವು ಅಧಿಕಾರಕ್ಕೆ ಬಂದಾಗ ಇಂತಹ ಸಂಸ್ಕೃತಿಗೆ ಅಂತ್ಯ ಹಾಡಬೇಕು ಎಂದು ಹೇಳಿದರು. ಜೊತೆಗೆ ನಾನು ಕೋಪಿಸಿಕೊಂಡ ನಾಯಕ ಪಕ್ಷದ ಹಳೇ ಕಾರ್ಯಕರ್ತ. ಇದರಿಂದ ಅವರು ಬೇಜಾರು ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಾರ್ವಜನಿಕವಾಗಿ ಖಟ್ಟರ್​ ತಾಳ್ಮೆ ಕಳೆದುಕೊಂಡು ವರ್ತಿಸಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಲ್​ ಕಾರ್ಯಕ್ರಮವೊಂದರಲ್ಲಿ ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಪಕ್ಕಕ್ಕೆ ಜೋರಾಗಿ ತಳ್ಳಿ ಸುದ್ದಿಯಾಗಿದ್ದರು.

First published: September 11, 2019, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading