ಜಾರ್ಖಂಡ್​ ಸಾಮೂಹಿಕ ಹಲ್ಲೆ ಕೊಲೆ ಪ್ರಕರಣ; ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುವ ಮೃತ ಅನ್ಸಾರಿ ಪತ್ನಿ

ಪೊಲೀಸರ ವಿರುದ್ಧ ಕಿಡಿಕಾರಿರುವ ಶಹಿಸ್ಟಾ ಪರ್ವೀನ್ ನನ್ನ ಗಂಡನ ಹತ್ಯೆಯನ್ನು ಇಡೀ ಜಗತ್ತು ನೋಡಿದೆ. ಆದರೂ, ನನ್ನ ಗಂಡನ ಕೊಲೆಗಾರರನ್ನು ಜಿಲ್ಲಾಡಳಿತವೇ ರಕ್ಷಿಸುತ್ತಿದೆ. ಚಾರ್ಚ್​ಶೀಟ್​ನಲ್ಲಿ ಕೊಲೆಗಾರರ ವಿರುದ್ಧ ಕಲಂ 302ರ ಅಡಿಯಲ್ಲಿ ಕೊಲೆ ಆರೋಪವನ್ನು ಪುನಃ ದಾಖಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

MAshok Kumar | news18-kannada
Updated:September 16, 2019, 7:18 PM IST
ಜಾರ್ಖಂಡ್​ ಸಾಮೂಹಿಕ ಹಲ್ಲೆ ಕೊಲೆ ಪ್ರಕರಣ; ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುವ ಮೃತ ಅನ್ಸಾರಿ ಪತ್ನಿ
ಹಿಂದು ಸಂಘಟಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಯುವಕ ಅನ್ಸಾರಿ.
  • Share this:
ಜಾರ್ಖಂಡ್​ (ಸೆಪ್ಟೆಂಬರ್​.16); ಜೈ ಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ 24 ವರ್ಷದ ರಾಂಚಿ ಇಸ್ಲಾಂ ಸಮುದಾಯದ ಯುವಕ ತಬ್ರೀಜ್ ಅನ್ಸಾರಿ ಅವರನ್ನು ಜಾರ್ಖಂಡ್​ನ ಖರ್ಸವಾನ್ ಜಿಲ್ಲೆಯಲ್ಲಿ ಜೂನ್​.17 ರಂದು  11 ಜನ ಹಿಂದೂ ಸಂಘಟನೆಯವರು ಸಾಮೂಹಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಇದೀಗ ಈ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೃತನ ಪತ್ನಿ ಶಹಿಸ್ಟಾ ಪರ್ವೀನ್ ಜಾರ್ಖಂಡ್ ಪೊಲೀಸರಿಗೆ ಬೆದರಿಕೆ ಹಾಕಿದ್ದಾಳೆ .

ಇಂಡಿಯಾ ಟುಡೆ ವರದಿಯ ಪ್ರಕಾರ ಇಂದು ರಾಂಚಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ಮುಖತಃ ಸಂಪರ್ಕಿಸಿ ಮನವಿ ಸಲ್ಲಿಸಿರುವ ಶಹಿಸ್ಟಾ ಪರ್ವೀನ್ 11 ಜನ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಇವರ ವಿರುದ್ಧ ಐಪಿಸಿ ಕಲಂ 302ರ ಅಡಿಯಲ್ಲಿ ಕೊಲೆ ಆರೋಪ ಹೋರಿಸಿ ಜಾರ್ಚ್​ಶೀಟ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ತನ್ನ ಮನವಿಯನ್ನು ಪೂರೈಸದೆ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಆಕೆ ಪೊಲೀಸರಿಗೆ ಬೆದರಿಕೆ ಹಾಕಿದ್ದಾಳೆ. ಶಹಿಸ್ಟಾ ಪರ್ವೀನ್ ತಬ್ರೀಜ್ ಅನ್ಸಾರಿಯನ್ನು ಮದುವೆಯಾಗಿ ಕೇವಲ 2 ತಿಂಗಳಿನಲ್ಲಿ ಆತನ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರ ಗಾಯಕ್ಕೊಳಗಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ 5 ದಿನಗಳ ನಂತರ ಆತ ಚಿಕಿತ್ಸೆ ಫಲಕಾರಿಯಾಗದೆ ಜೂನ್.22 ರಂದು ಸಾವನ್ನಪ್ಪಿದ್ದ.

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ 11 ಜನ ಹಿಂದೂ ಸಂಘಟನೆಗೆ ಸೇರಿದ ವ್ಯಕ್ತಿಗಳು ತಬ್ರೀಜ್ ಅನ್ಸಾರಿಯ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ಇಡೀ ದೇಶದಾದ್ಯಂತ ವೈರಲ್ ಆಗಿತ್ತು. ಈ ಕುರಿತು ಪೊಲೀಸರು ಸಹ ವಿಚಾರಣೆ ಕೈಗೊಂಡಿದ್ದರು. ಆದರೆ, ಅನ್ಸಾರಿ ಅವರ ಮರಣೋತ್ತರ ವರದಿ ನೀಡಿದ ವೈದ್ಯರು ಆತ ಹಲ್ಲೆಯಿಂದಾಗಿ ಮೃತಪಟ್ಟಿಲ್ಲ ಬದಲಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದರು.

ಈ ವರದಿಯ ಅನ್ವಯ ಪೊಲೀಸರು ಇತ್ತೀಚೆಗೆ ಚಾರ್ಚ್​ಶೀಟ್​ನಲ್ಲಿ ಆರೋಪಿಗಳ ವಿರುದ್ಧ ಕಲಂ 302ರ ಪ್ರಕಾರ ಕೊಲೆ ಪ್ರಕರಣ ಕೈಬಿಟ್ಟು ಕಲಂ 304ರ ಅಡಿಯಲ್ಲಿ ಹಲ್ಲೆ ಪ್ರಕರಣ ಮಾತ್ರ ದಾಖಲಿಸಿದ್ದರು. ಅಲ್ಲದೆ, ಈತನನ್ನು ಕೊಲೆ ಮಾಡುವ ಯಾವ ಇರಾದೆಯೂ ಗ್ರಾಮಸ್ಥರಿಗೆ ಇರಲಿಲ್ಲ ಎಂದು ಉಲ್ಲೇಖಿಸಿ ಕೊಲೆ ಆರೋಪದಿಂದ 11 ಜನರನ್ನೂ ಕೈಬಿಟ್ಟಿದ್ದರು.

ಪೊಲೀಸರು ನೀಡಿರುವ ವರದಿಯ ಪ್ರಕಾರ ಹಲ್ಲೆಯಿಂದಾಗಿ ಮೃತನ ತಲೆಬುರುಡೆ ಒಡೆದಿದೆ. ಎದೆ ಬಾಗದಲ್ಲಿ ಮೂಳೆ ಮುರಿತ ಉಂಟಾದ ಕಾರಣ ಹೃದಯದ ಕೋಣೆಗಳಲ್ಲಿ ರಕ್ತ ತುಂಬಿಕೊಂಡಿದ್ದು ಹೃದಯಸ್ತಂಭನವಾಗಿದೆ ಎಂದು ಹೇಳಲಾಗುತ್ತಿದೆ. ಅನ್ಸಾರಿ ಮೃತಪಟ್ಟ ಎರಡು ದಿನದ ನಂತರ ಆತನ ಸಾವಿನ ಒತ್ತಡ ತಾಳಲಾಗದೆ ಪರ್ವೀನ್​ಗೂ ಸಹ ಗರ್ಭಪಾತವಾಗಿದೆ.

ಪೊಲೀಸರ ವಿರುದ್ಧ ಕಿಡಿಕಾರಿರುವ ಶಹಿಸ್ಟಾ ಪರ್ವೀನ್, “ನನ್ನ ಗಂಡನ ಹತ್ಯೆಯನ್ನು ಇಡೀ ಜಗತ್ತು ನೋಡಿದೆ. ಆದರೂ, ನನ್ನ ಗಂಡನ ಕೊಲೆಗಾರರನ್ನು ಜಿಲ್ಲಾಡಳಿತವೇ ರಕ್ಷಿಸುತ್ತಿದೆ. ಚಾರ್ಚ್​ಶೀಟ್​ನಲ್ಲಿ ಕೊಲೆಗಾರರ ವಿರುದ್ಧ ಕಲಂ 302ರ ಅಡಿಯಲ್ಲಿ ಕೊಲೆ ಆರೋಪವನ್ನು ಪುನಃ ದಾಖಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ.ಭಾರತೀಯ ದಂಡ ಸಂಹಿತೆ ಕಲಂ 302ರ ಪ್ರಕಾರ ಆರೋಪ ಸಾಬೀತಾದರೆ ಆರೋಪಿಗಳಿಗೆ ಜೀವಾವಧಿ ಅಥವಾ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬಹುದು. ಚಾರ್ಚ್​ಶೀಟ್​ನಲ್ಲಿ ಕಲಂ 304ರ ಅಡಿಯಲ್ಲಿ ಪ್ರಕರಣ ದಾಖಲಿಸಿದರೆ ಆರೋಪಿಗಳಿಗೆ ಅಧಿಕ ಎಂದರೆ 10 ವರ್ಷದ ವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಜಾರ್ಖಂಡ್​​ ಸಾಮೂಹಿಕ ಹಲ್ಲೆ ಪ್ರಕರಣ: 11 ಆರೋಪಿಗಳ ವಿರುದ್ದದ ಚಾರ್ಜ್​ಶೀಟ್​ ಕೈ ಬಿಟ್ಟ ಪೊಲೀಸರು

First published: September 16, 2019, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading