• Home
  • »
  • News
  • »
  • national-international
  • »
  • ಗಡಿಯಿಂದ ಚೀನಾ ಸೇನೆ ಹಿಂತೆಗೆತ ಸ್ವಾಗತಾರ್ಹ ಆದರೆ, ಯಾವ ಪ್ರದೇಶದಿಂದ ಹಿಂದೆ ಸರಿದಿದೆ?; ಪಿ. ಚಿದಂಬರಂ ಪ್ರಶ್ನೆ

ಗಡಿಯಿಂದ ಚೀನಾ ಸೇನೆ ಹಿಂತೆಗೆತ ಸ್ವಾಗತಾರ್ಹ ಆದರೆ, ಯಾವ ಪ್ರದೇಶದಿಂದ ಹಿಂದೆ ಸರಿದಿದೆ?; ಪಿ. ಚಿದಂಬರಂ ಪ್ರಶ್ನೆ

ಪಿ. ಚಿದಂಬರಂ

ಪಿ. ಚಿದಂಬರಂ

ಮೋದಿ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಈಡಾಗಿತ್ತು. ಆದರೆ, ಇದೀಗ ಮತ್ತೊಂದು ಮಾಹಿತಿಯನ್ನು ಹೊರ ಹಾಕುತ್ತಿರುವ ಕೇಂದ್ರ ಸರ್ಕಾರ ಚೀನಾ ಸೇನೆ ಭಾರತದ ಭೂ ಭಾಗದಿಂದ ಹಿಂದಕ್ಕೆ ಸರಿದಿದೆ ಎಂದು ಹೇಳುತ್ತಿದೆ.

  • Share this:

ನವ ದೆಹಲಿ (ಜುಲೈ 08); ಭಾರತ-ಚೀನಾ ಗಡಿಯಿಂದ ಡ್ಯ್ರಾಗನ್‌ ಸೇನೆ ಹಿಂದೆ ಸರಿದಿರುವುದು ಸ್ವಾಗತಾರ್ಹ. ಆದರೆ, ಚೀನಾ ಸೇನೆ ಯಾವ ಪ್ರದೇಶದಿಂದ ಹಿಂದೆ ಸರಿದಿದೆ? ಈಗ ಸ್ಥಳ ಯಾವುದು? ಎಂದು ಕೇಂದ್ರ ಸರ್ಕಾರ ದಯವಿಟ್ಟು ಸ್ಪಷ್ಟಪಡಿಸಲಿ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಭಾರತ-ಚೀನಾ ಗಡಿ ಪ್ರದೇಶವಾದ ಗಾಲ್ವಾನ್‌ ಕಣಿವೆಯಲ್ಲಿ ಎರಡೂ ದೇಶದ ಸೈನಿಕರ ನಡುವೆ ಸಂಘರ್ಷ ಉಂಟಾಗಿತ್ತು. ಈ ಸಂಘರ್ಷದಲ್ಲಿ ಭಾರತದ 20 ಜನ ಸೈನಿಕರನ್ನು ಚೀನಾದ  ಸೇನೆ ಹತ್ಯೆ ಮಾಡಿತ್ತು. ಆದರೆ, ಈ ಸಂಘರ್ಷದ ನಂತರ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಭಾರತದ ಭೂಪ್ರದೇಶವನ್ನು ಚೀನಾ ಸೇನೆ ಕಬಳಿಸಿಲ್ಲ. ನಮ್ಮ ನೆಲದಲ್ಲಿ ಡ್ಯ್ರಾಗನ್ ಸೇನೆ ಇಲ್ಲ" ಎಂದಿದ್ದರು.

ಮೋದಿ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಈಡಾಗಿತ್ತು. ಆದರೆ, ಇದೀಗ ಮತ್ತೊಂದು ಮಾಹಿತಿಯನ್ನು ಹೊರ ಹಾಕುತ್ತಿರುವ ಕೇಂದ್ರ ಸರ್ಕಾರ, "ಚೀನಾ ಸೇನೆ ಭಾರತದ ಭೂ ಭಾಗದಿಂದ ಹಿಂದಕ್ಕೆ ಸರಿದಿದೆ" ಎಂದು ಹೇಳುತ್ತಿದೆ.

ಇದೇ ಕಾರಣಕ್ಕೆ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿರುವ ಮಾಜಿ ಕಣಕಾಸು ಸಚಿವ ಪಿ. ಚಿದಂಬರಂ, "ಭಾರತದ ಗಡಿಯಿಂದ ಚೀನಾ ಸೇನೆಗಳ ಹಿಂತಗೆತ ಸ್ವಾಗತಾರ್ಹ. ಆದರೆ, ಚೀನಾದ ಸೈನ್ಯ ಭಾರತದ ಯಾವ ಭೂ ಭಾಗದಿಂದ ಹಿಂದೆ ಸರಿದಿದೆ? ಈಗ ಅವರು ಇರುವ ಸ್ಥಳ ಯಾವುದು? ಅದೇ ರೀತಿ ಭಾರತೀಯ ಪಡೆಗಳನ್ನು ಬೇರ್ಪಡಿಸಿದ ಸ್ಥಳ ಯಾವುದು?" ಎಂದು ಪ್ರಶ್ನೆ ಮಾಡಿದ್ದಾರೆ.


ಅಲ್ಲದೆ, ಮತ್ತೊಂದು ಟ್ವೀಟ್‌ನಲ್ಲಿ "ಜೂನ್ 15 ರಂದು ಏನಾಯಿತು? ಭಾರತ-ಚೀನಾ ಸೈನಿಕರ ನಡುವೆ ಯಾವ ಪ್ರದೇಶದಲ್ಲಿ ಸಂಘರ್ಷ ಉಂಟಾಗಿತ್ತು? ಚೀನಾ ಅಥವಾ ಅಥವಾ ಭಾರತೀಯ ಸೈನಿಕರ ಪೈಕಿ ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋದವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಲಿ. ಏಕೆಂದರೆ ದೇಶದ ಜನ ಇದರ ಬಗ್ಗೆ ಮಾಹಿತಿಯ ನಿರೀಕ್ಷೆಯಲ್ಲಿದ್ದಾರೆ" ಎಂದಿದ್ದಾರೆ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು