ನಾನು ಸತ್ತೇ ಹೋಗಿದ್ದೆ; ಶ್ರೀಲಂಕಾ ರಾಜಕೀಯ ಬಿಕ್ಕಟ್ಟು ಅರ್ಜುನ್ ರಣತುಂಗಾಗೆ ಹೇಗೆ ಕೆಟ್ಟ ದುಸ್ವಪ್ನವಾಗಿದೆ

HR Ramesh | news18
Updated:October 29, 2018, 11:07 AM IST
ನಾನು ಸತ್ತೇ ಹೋಗಿದ್ದೆ; ಶ್ರೀಲಂಕಾ ರಾಜಕೀಯ ಬಿಕ್ಕಟ್ಟು ಅರ್ಜುನ್ ರಣತುಂಗಾಗೆ ಹೇಗೆ ಕೆಟ್ಟ ದುಸ್ವಪ್ನವಾಗಿದೆ
ಪೊಲೀಸ್​ ಸಮವಸ್ತ್ರ ಹೆಲ್ಮೆಟ್​ ತೊಡಿಸಿ, ಶ್ರೀಲಂಕಾ ಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗಾ ಅವರನ್ನು ರಕ್ಷಿಸಲಾಯಿತು.
  • News18
  • Last Updated: October 29, 2018, 11:07 AM IST
  • Share this:
ಡಿ.ಪಿ. ಸತೀಶ್, ನ್ಯೂಸ್ 18 ಕನ್ನಡ

ಬೆಂಗಳೂರು : ಅವರು ಮೈದಾನದಲ್ಲಿ ಹಲವಾರು ಯುದ್ಧಗಳನ್ನು ಎದುರಿಸಿದ್ದಾರೆ ಮತ್ತು ಗೆಲುವುಗಳನ್ನು ಸಾಧಿಸಿದ್ದಾರೆ. ಆದರೆ, ಇದು ಸಂಪೂರ್ಣ ವಿಭಿನ್ನ. ಅರ್ಜುನ್​ ರಣತುಂಗಾ, ಶ್ರೀಲಂಕಾದ ಪೆಟ್ರೋಲಿಯಂ ಸಚಿವ ಮತ್ತು 1996ರ ವರ್ಲ್ಡ್​ಕಪ್​ ವಿಜೇತ ತಂಡದ ನಾಯಕ. ತಮ್ಮ ಕತೆಯನ್ನು ಹಂಚಿಕೊಳ್ಳುವುದಕ್ಕಾಗಿಯೇ ಭಾನುವಾರ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಅಲ್ಲಿನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಿಗೊಳಿಸಿ, ಮಾಜಿ ಅಧ್ಯಕ್ಷ ಮಹೀಂದ್ರಾ ರಾಜಪಕ್ಸ ಅವರನ್ನು ನೂತನ ಪ್ರಧಾನಿಯನ್ನಾಗಿ ಶುಕ್ರವಾರ ನೇಮಕಗೊಳಿಸಿದ್ದರು. ಆ ವೇಳೆ ಅರ್ಜುನ್ ರಣತುಂಗಾ ಲಂಡನ್​ನಲ್ಲಿ ಇದ್ದರು. ಶನಿವಾರ ಬೆಳಗ್ಗೆ ಶ್ರೀಲಂಕಾಗೆ ವಾಪಸ್ಸಾದರು.

ಭಾನುವಾರ ಮಧ್ಯಾಹ್ನ ಅವರು ಡೆಮಾಟಗೊಂಡದಲ್ಲಿನ ಸಿಲೋನ್ ಪೆಟ್ರೋಲಿಯಂ ಕಾರ್ಪೋರೆಷನ್​ (ಸಿಪಿಸಿ) ಕಚೇರಿಗೆ ಬಂದರು. ಆ ವೇಳೆ ಅವರೊಂದಿಗೆ ಕೆಲ ಆಪ್ತ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿ ಇದ್ದರು.

ರಣತುಂಗಾ ಅವರನ್ನು ಕಚೇರಿಯ ಗೇಟ್​ ಬಳಿಯೇ ತಡೆದು ನಿಲ್ಲಿಸಿದ ರಾಜಪಕ್ಸ ಕಡೆಯ ಕೇಂದ್ರದ ನಾಯಕರು, ವಾಪಸ್​ ಹೋಗುವಂತೆ ಆಗ್ರಹಿಸಿದರು. ಕಾನೂನುಬಾಹಿರವಾಗಿ ಸರ್ಕಾರವನ್ನು ವಜಾಗೊಳಿಸಲಾಗಿದೆ. ತಾನು ಈಗಲೂ ಪೆಟ್ರೋಲಿಯಂ ಸಚಿವ ಎಂದು ಹೇಳಿದ ರಣತುಂಗಾ ಕಚೇರಿಯ ಒಳಗೆ ಪ್ರವೇಶಿಸಿದರು.

ಕೆಲ ನಿಮಿಷಗಳ ನಂತರ, ನೂರಾರು ಜನರು ಸಿಪಿಸಿ ಕಟ್ಟಡದ ಮುಂದೆ ಜಮಾಯಿಸಿದರು ಮತ್ತು ರಾಜಪಕ್ಸ ಬೆಂಬಲಿಗರು ಸಚಿವಾಲಯವನ್ನು ಮುತ್ತಿಗೆ ಹಾಕಲು ಮುಂದಾದರು. ಕೆಲ ಬೆಂಬಲಿಗರೊಂದಿಗೆ ನಾಲ್ಕನೇ ಮಹಡಿಯಲ್ಲಿರುವ ಅರ್ಜುನ್​ ರಣತುಂಗಾ ಕಚೇರಿಗೆ ನುಗ್ಗಿದ ರಾಜಪಕ್ಸ ಕಡೆಯ ಕೇಂದ್ರದ ನಾಯಕರು ಗುಂಡು ಹಾರಿಸಲು ಪ್ರಯತ್ನಿಸಿದರು ಎಂದು ಅರ್ಜುನ್​ ಅವರ ಒಬ್ಬ ಸಹಾಯಕರು ಹೇಳುತ್ತಾರೆ.

ಭಯಭೀತರಾದ ಅರ್ಜುನ್​ ರಣತುಂಗಾ ಅವರ ಅಂಗರಕ್ಷಕರು ಸಚಿವರ ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿದರು. ರಾಜಪಕ್ಸ ಕಡೆದ ಕೇಂದ್ರ ನಾಯಕರ ಕೈಯಲ್ಲಿ ಗನ್​ ಇತ್ತು. ಅಂಗರಕ್ಷಕರು ಹಾರಿಸಿದ ಗುಂಡಿಗೆ ಒಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡರು. ಆನಂತರ ಕಚೇರಿಯ ಪ್ರವೇಶ ದ್ವಾರವನ್ನು ಮುಚ್ಚಿದ ಅಂಗರಕ್ಷಕರು, ಕೆಲ ಸುತ್ತು ಗುಂಡುಗಳನ್ನು ಹಾರಿಸಿ, ಗುಂಪನ್ನು ಚದುರಿಸಿದ್ದಾರೆ.ವಿಶೇಷ ಭದ್ರತಾ ಪಡೆ ಮತ್ತು ಶ್ರೀಲಂಕಾ ಪೊಲೀಸ್​ ಕಮಾಂಡೋಗಳು ಸಿಪಿಸಿ ಕಟ್ಟಡ ಸುತ್ತುವರಿದು, ರಣತುಂಗಾ ಮತ್ತು ಅವರ ಆಪ್ತ ಸಹಾಯಕರನ್ನು ಮಾರಕ ಅಸ್ತ್ರಗಳನ್ನು ಹೊಂದಿದ್ದ ರಾಜಪಕ್ಸೆ ಬೆಂಬಲಿಗ ಗುಂಪಿನಿಂದ ರಕ್ಷಿಸಿದ್ದಾರೆ.

"ನಾನು ಅರ್ಜುನ್​ ಜೊತೆಗೆ ಇದ್ದೆ. ಅದು ನಿಜಕ್ಕೂ ಭಯಾನಕ ಸನ್ನಿವೇಶ. ಅರ್ಜುನ್​ ಮತ್ತು ನನ್ನನ್ನು ಕೊಲಲು ಅವರು ಪ್ರಯತ್ನಿಸಿದರು. ನಾವು ನಿಜಕ್ಕೂ ಸತ್ತೆ ಹೋಗಿದ್ದೊ. ಆಗ ಬೇರೆ ದಾರಿಯೇ ಇರಲಿಲ್ಲ. ಅರ್ಜುನ್​ ಅಂಗರಕ್ಷಕರು ತಮ್ಮ ಬಂದೂಕಿನಿಂದ ಗುಂಡು ಹಾರಿಸಿ, ಒಬ್ಬನನ್ನು ಸಾಯಿಸಿದರು," ಎಂದು ಅರ್ಜುನ್​ ರಣತುಂಗಾ ಅವರ ಆಪ್ತರೊಬ್ಬರು ನ್ಯೂಸ್​ 18ನೊಂದಿಗೆ ಮಾತನಾಡಿದರು.

ಅವರೇ ಹೇಳುವಂತೆ, ಅವರು ನಮ್ಮನ್ನು ಆರು ಗಂಟೆಗಳ ಕಾಲ ಒತ್ತೆಯಾಳುಗಳನ್ನಾಗಿ ಇರಿಸಿದ್ದರು. ರಾಜಪಕ್ಸ ಕಡೆಯ ಗೂಂಡಾಗಳು ಅರ್ಜುನ್​ ಮತ್ತು ಅವರ ಸಿಬ್ಬಂದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಕೊನೆಗೆ ಅವರಿಗೆ ಪೊಲೀಸ್​ ಸಮವಸ್ತ್ರ, ಬುಲೆಟ್​ಪ್ರೂಫ್​ ಜಾಕೆಟ್​ ಮತ್ತು ಹೆಲ್ಮೆಟ್​ ಧರಿಸಿ, ಕಟ್ಟಡದಿಂದ ಹೊರಗೆ ಕರೆತರಲಾಯಿತು.

ಈ ನಾಟಕೀಯ ಬೆಳವಣಿಗೆ ನಂತರ ಅರ್ಜುನ್​ ರಣತುಂಗಾ ಪ್ರಧಾನಿ ರಾನಿಲ್​ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ 'ಟೆಂಪಲ್​ ಟ್ರೀ' ಹತ್ತಿರ ಬಂದರು. ಮುಂದಿನ ರಾಜಕೀಯ ತಂತ್ರಗಾರಿಕೆಗಳ ಕುರಿತು ಅವರೊಂದಿಗೆ ಸುದೀರ್ಘ ಚರ್ಚೆಯನ್ನು ನಡೆಸಿದರು.

'ನ್ಯೂಸ್​ 18'ನೊಂದಿಗೆ ಕೊಲಂಬೊದಿಂದ ಫೋನಿನಲ್ಲಿ ಮಾತನಾಡಿದ ಅರ್ಜುನ್​ ರಣತುಂಗಾ, ಪರಿಸ್ಥಿತಿಯನ್ನು ವಿವರಿಸಿದರು. ಮತ್ತು ವಿಕ್ರಮಸಿಂಘೆ ಸರ್ಕಾರವನ್ನು ಪುನರ್​ರಚಿಸಲು ಅಧ್ಯಕ್ಷ ಸಿರಿಸೇನಾ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

"ನಾನು ಈ ದಿನ ಬದುಕಿದ್ದೇನೆ ಎಂದರೆ ಅದು ದೇವರ ದಯೆಯಿಂದ ಮತ್ತು ನನ್ನ ಧೈರ್ಯಶಾಲಿ ಅಂಗರಕ್ಷಕರಿಂದ. ಅವರು ನನ್ನನ್ನು ಸಾಯಿಸಿಬಿಡುತ್ತಿದ್ದರು. ಇನ್ನೇನು ನನ್ನ ಕತೆ ಮುಗಿದೇ ಹೋಗಿತ್ತು. ಎಲ್ಲಿದೆ ಕಾನೂನಿನ ನಿಯಮ. ಎಲ್ಲದೆ ಪ್ರಜಾಪ್ರಭುತ್ವ. ನನ್ನ ಜೀವಕ್ಕೆ ಬೆದರಿಕೆ ಇದೆ. ಶ್ರೀಲಂಕಾದ ಪ್ರತಿಯೊಬ್ಬ ಜನರು ಇದನ್ನು ಖಂಡಿಸುತ್ತಾರೆ," ಎಂದು ಅರ್ಜುನ್​ ರಣತುಂಗಾ ಹೇಳಿದರು.

ಕೆಲವು ದಿನಗಳ ಕಾಲ ಅರ್ಜುನ್​ ಮನೆಯಲ್ಲಿ ಉಳಿದುಕೊಳ್ಳುವುದು ಒಳ್ಳೆಯದು ಎಂದು ಅವರ ಸ್ನೇಹಿತರು ಸಲಹೆ ನೀಡಿದ್ದಾರೆ.

2015ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸ ಸೋಲಲು ಅರ್ಜುನ್​ ರಣತುಂಗಾ ಪಾತ್ರ ಪ್ರಮುಖವಾದದ್ದು. ರಾಜಪಕ್ಸ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಅರ್ಜುನ್​ ಆ ಸ್ಥಾನವನ್ನು ತೊರೆದು, ರಾಜಪಕ್ಸ ಆಡಳಿತದ ವಿರುದ್ಧ ಪ್ರಚಾರ ಮಾಡಿದ್ದರು.

ಆನಂತರ, ಸಿರಿಸೇನಾ- ವಿಕ್ರಮಸಿಂಘೆ ಸರ್ಕಾರ ಸೇರಿ, ಬಂದರು ಮತ್ತು ಹಡಗು ಸಚಿವರಾದರು. ಜೊತೆಗೆ ನಾಗರಿಕ ವಿಮಾನಯಾನದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು. ಒಂದೂವರೆ ವರ್ಷದ ಹಿಂದೆ ಪೆಟ್ರೋಲಿಯಂ ಖಾತೆಗೆ ಅರ್ಜುನ್​ ರಣತುಂಗಾ ವರ್ಗಾವಣೆಗೊಂಡಿದ್ದರು.

ಇದನ್ನು ಓದಿ: ಅಪಹರಣಕ್ಕೆ ಬಂದ ಸಿರಿಸೇನಾ ಬೆಂಬಲಿಗರ ಮೇಲೆ ಸಚಿವ ಅರ್ಜುನ ರಣತುಂಗರ ಅಂಗರಕ್ಷಕರಿಂದ ಗುಂಡಿನ ದಾಳಿ; 1 ಸಾವು, ಇಬ್ಬರಿಗೆ ಗಾಯ

ಇದನ್ನು ಓದಿ: ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ಅಧಿಕೃತ ಪಿಎಂ ನಿವಾಸದಿಂದ ಹೊರಹಾಕಲ್ಪಟ್ಟ ಉಚ್ಚಾಟಿತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ

ಕಳೆದ 18 ವರ್ಷಗಳಿಂದ ಅರ್ಜುನ್​ ರಣತುಂಗಾ ಲೋಕಸಭಾ ಸದಸ್ಯರಾಗಿ ಆರಿಸುತ್ತಾ ಬಂದಿದ್ದಾರೆ. ಅವರ ಇಬ್ಬರು ಸಹೋದರರಾದ ಪ್ರಸನ್ನ ರಣತುಂಗಾ ಮತ್ತು ರುವಾನ್​ ರುಣತುಂಗಾ ಅವರೂ ಸಂಸದರಾಗಿದ್ದಾರೆ.

ಪ್ರಸನ್ನ ರಣತುಂಗಾ ರಾಜಪಕ್ಸ ಅವರ ಅತ್ಯಾಪ್ತರಾಗಿದ್ದು, ಅವರ ಆಡಳಿತಾವಧಿಯಲ್ಲಿ ಪಾಶ್ಚಿಮಾತ್ಯ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದರು. ರಾಜಪಕ್ಸ ಕ್ಯಾಬಿನೆಟ್​ನಲ್ಲಿ ಪ್ರಸನ್ನ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

First published:October 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading