ನನ್ನ ಮಗಳ ಜೊತೆ ನೆಮ್ಮದಿಯಿಂದ ಬದುಕಬೇಕು​; ರಾಜೀವ್ ಗಾಂಧಿ ಹತ್ಯೆ ಆರೋಪಿ ನಳಿನಿಗೆ ಬಿಡುಗಡೆಯ ಕನಸು

news18
Updated:September 8, 2018, 8:25 AM IST
ನನ್ನ ಮಗಳ ಜೊತೆ ನೆಮ್ಮದಿಯಿಂದ ಬದುಕಬೇಕು​; ರಾಜೀವ್ ಗಾಂಧಿ ಹತ್ಯೆ ಆರೋಪಿ ನಳಿನಿಗೆ ಬಿಡುಗಡೆಯ ಕನಸು
  • News18
  • Last Updated: September 8, 2018, 8:25 AM IST
  • Share this:
ಪೂರ್ಣಿಮಾ ಮುರಳಿ, ನ್ಯೂಸ್​ ​18 ಕನ್ನಡ

ಚೆನ್ನೈ (ಸೆ. 8): 'ನನ್ನ ಜೀವನದಲ್ಲಿ ಸಾಕಷ್ಟು ನೋವಿನ ಘಟನೆಗಳೇ ತುಂಬಿಕೊಂಡಿದೆ. ನಾನು ಅವನ್ನೆಲ್ಲ ಮರೆತು ಹೊಸಜೀವನ ನಡೆಸಬೇಕು ಎಂದುಕೊಂಡಿದ್ದೇನೆ. ನನ್ನ ವಿಚಾರದಲ್ಲಿ ಕೇಂದ್ರ ಸರ್ಕಾರ ಉದಾರತೆ ತೋರಿಸಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಮಗಳು ನನಗಾಗಿ ಕಾಯುತ್ತಿದ್ದಾಳೆ. ಅವಳ ಜೊತೆಗೆ ನನ್ನ ಉಳಿದ ಜೀವನವನ್ನು ಕಳೆಯಬೇಕೆಂಬುದು ನನ್ನಾಸೆ'

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಳಿನಿ ಶ್ರೀಹರನ್​ ಮನವಿ ಮಾಡಿಕೊಂಡಿರುವುದು ಹೀಗೆ. ನ್ಯೂಸ್​18 ಜೊತೆಗೆ ಪತ್ರದ ಮೂಲಕ ಈ ವಿಷಯ ತಿಳಿಸಿರುವ ನಳಿನಿ, ನನ್ನ ಮಗಳಿಗೆ ನಾನು ಮತ್ತು ಅವಳ ಅಪ್ಪ ಇಬ್ಬರೂ ಆದಷ್ಟು ಬೇಗ ಮನೆಗೆ ವಾಪಾಸ್​ ಬರುತ್ತೇವೆ ಎಂದು ತಿಳಿಸಬೇಕಿದೆ. ಆಕೆ ನಮಗೋಸ್ಕರ ಕಾಯುತ್ತಿದ್ದಾಳೆ. ಅವಳೊಂದಿಗೆ ನಾವು ನೆಮ್ಮದಿಯ ಜೀವನ ನಡೆಸಬೇಕು ಎಂದು ತನ್ನ ಇಚ್ಛೆಯನ್ನು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಿಂಗಾಪುರದಲ್ಲಿ ಮಾತನಾಡಿದ್ದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ನಾನು ಮತ್ತು ನನ್ನ ಸೋದರಿ ಪ್ರಿಯಾಂಕಾ ನಮ್ಮ ಅಪ್ಪನನ್ನು ಕೊಂದವರನ್ನು ಕ್ಷಮಿಸಿದ್ದೇವೆ. ಅವರನ್ನು ಬಿಡುಗಡೆ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಧನ್ಯವಾದ ಅರ್ಪಿಸಿರುವ ಆರೋಪಿ ನಳಿನಿ ಶ್ರೀಹರನ್, ಅವರು ನಮ್ಮನ್ನು ಕ್ಷಮಿಸಿರುವುದರಿಂದ ಬಹಳ ಸಂತೋಷವಾಗಿದೆ ಎಂದಿದ್ದಾರೆ.

ಕಳೆದ ಏಪ್ರಿಲ್​ನಲ್ಲಿ ನಳಿನಿ ಅವರ ಬಿಡುಗಡೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ ತಿರಸ್ಕರಿಸಿತ್ತು. ಆರಂಭದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈಕೆಗೆ ನಂತರ 2000ರಲ್ಲಿ ಜೀವಾವಧಿ ಶಿಕ್ಷೆಗೆ ತಗ್ಗಿಸಲಾಗಿತ್ತು. 25 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ, ಜಗತ್ತಿನಲ್ಲಿಯೇ ಅತಿಹೆಚ್ಚು ವರ್ಷ ಜೈಲಿನಲ್ಲಿರುವ ಮಹಿಳಾ ಖೈದಿ ಎಂಬ ದಾಖಲೆಯಲ್ಲಿ ಸೇರಿದ್ದಾರೆ.

ತಮಿಳುನಾಡು ಸರ್ಕಾರ ಈಗಾಗಲೇ ರಾಜೀವ್​ ಗಾಂಧಿ ಹತ್ಯೆಯ ಆರೋಪಿಗಳಾದ 7 ಜನರನ್ನು ಬಿಡುಗಡೆ ಮಾಡುವ ಸುಳಿವು ಕೊಟ್ಟಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991ರ ಮೇ 21ರಂದು ತಮಿಳುನಾಡಿನ ಪೆರಂಬೂರಿನಲ್ಲಿ ಆತ್ಮಹತ್ಯಾ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದ್ದರು. ಮುರುಗನ್, ಸಂತನ್​, ಪೆರಾರಿವಾಲನ್​, ನಳಿನಿ ಶ್ರೀಹರನ್​, ರಾಬರ್ಟ್​ ಪಾಯಸ್​, ಜಯಕುಮಾರ್​, ರವಿಚಂದ್ರನ್​ ಅವರನ್ನು ಈ ಹತ್ಯೆಯ ಆರೋಪದಲ್ಲಿ ಬಂಧಿಸಲಾಗಿತ್ತು.
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading