Modi Mann Ki Baat: ಈ ಭಾನುವಾರಕ್ಕಾಗಿ ನಾನು ಕಾಯುತ್ತಿದ್ದೆ; ಮೋದಿ ಮನದಾಳದ ಮಾತು

ನಾನು ಪ್ರಧಾನಿಯಾಗಿಲ್ಲ, ಜನ ನನ್ನನ್ನು ಪ್ರ್ರಧಾನಿಯಾಗಿ ಮಾಡಿದ್ದಾರೆ. ಜನರಿಂದ ನನಗೆ ಪ್ರೇರಣೆ ಸಿಗುತ್ತದೆ. ನಾನು ಫಿಟ್ ಇಂಡಿಯಾ ಬಗ್ಗೆ ಮಾತನಾಡುತ್ತೇನೆ- ಪ್ರಧಾನಿ ಮೋದಿ

Latha CG | news18
Updated:June 30, 2019, 11:51 AM IST
Modi Mann Ki Baat: ಈ ಭಾನುವಾರಕ್ಕಾಗಿ ನಾನು ಕಾಯುತ್ತಿದ್ದೆ; ಮೋದಿ ಮನದಾಳದ ಮಾತು
ಪ್ರಧಾನಿ ನರೇಂದ್ರ ಮೋದಿ
Latha CG | news18
Updated: June 30, 2019, 11:51 AM IST
ನವದೆಹಲಿ,(ಜೂ.30):  ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್​ ಕಿ ಬಾತ್’ 2ನೇ ಸರಣಿ ಇಂದು 11 ಗಂಟೆಗೆ ಪ್ರಸಾರವಾಯಿತು. ಲೋಕಸಭೆ ಚುನಾವಣೆ ಹಿನ್ನೆಲೆ ಈ ಕಾರ್ಯಕ್ರಮ ನಡೆದಿರಲಿಲ್ಲ. 2ನೇ ಬಾರಿ ಪ್ರಧಾನಿ ಆದ ಬಳಿಕ ಮೊದಲ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದ್ಧಾರೆ.  ಈ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಅವರು ಜನರೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ಧಾರೆ. ಜನರೊಂದಿಗೆ  ಮಾತನಾಡುವ ಸಂದರ್ಭ ಒದಗಿ ಬಂದಿರುವುದಕ್ಕೆ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

"ನಾನು ಇಷ್ಟು ದಿನ ಮನ್​ ಕಿ ಬಾತ್​ ಕಾರ್ಯಕ್ರಮವನ್ನು ತುಂಬಾ ಮಿಸ್​ ಮಾಡಿಕೊಂಡೆ. ಈ ಭಾನುವಾರ ನನಗೆ ತುಂಬಾ ಸಂತೋಷದ ದಿನ. ಈ ದಿನಕ್ಕಾಗಿ ನಾನು ತುಂಬಾ ದಿನಗಳಿಂದ ಕಾಯುತ್ತಿದ್ದೆ. ಈ ಮನ್​ ಕಿ ಬಾತ್​ ಕಾರ್ಯಕ್ರಮವು ಭಾರತದ 130 ಕೋಟಿ ಜನರ ಶಕ್ತಿಯ ಸ್ಫೂರ್ತಿಯಾಗಿದೆ. ಈ ರೇಡಿಯೋ ಕಾರ್ಯಕ್ರಮ ಹೊಸ ಭಾರತದ ಉತ್ಸಾಹವನ್ನು ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.



ಪ್ರಧಾನಿ ಮೋದಿ ರೇಡಿಯೋ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಭಾನುವಾರಕ್ಕಾಗಿ ನಾನು ಕಾಯುತ್ತಿದ್ದೆ. ನಿಜಕ್ಕೂ ಮನ್ ಕಿ ಬಾತ್ ಕಾರ್ಯಕ್ರಮ ಹೊಸ ಚೈತನ್ಯ ನೀಡಿದೆ. ನೀವು ನನ್ನನ್ನು ಗೆಲ್ಲಿಸಿದ್ದು, ಮತ್ತೊಮ್ಮೆ ಮಾತನಾಡಲು ಅವಕಾಶ ಕೊಟ್ಟಿದೆ. ಲೋಕತಂತ್ರ ಎಂದರೆ ಏನು ಎಂಬುದು ಈಗ ಅರ್ಥವಾಗುತ್ತಿದೆ ಎಂದು ಮೋದಿ ಹೇಳಿದರು.

ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಮನ್​ ಕಿ ಬಾತ್’ ಇದು ಒಂದು ಜೀವಂತ ಕಾರ್ಯಕ್ರಮ. ‘ಮನ್​ ಕಿ ಬಾತ್’ ಮೂಲಕ ಜನರ ಸಂಪರ್ಕ ಸಾಧ್ಯ. ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ರಾಜಕೀಯಗೊಳಿಸಲಾಗಿದೆ.  ಕೇದಾರನಾಥ ದೇಗುಲ ಭೇಟಿ ನನಗೆ ಆಧ್ಯಾತ್ಮಿಕವಾದದ್ದು. ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ, ಪರಂಪರೆಯಾಗಿದೆ ಎಂದು ಹೇಳಿದರು.

ನಾನು ಪ್ರಧಾನಿಯಾಗಿಲ್ಲ, ಜನ ನನ್ನನ್ನು ಪ್ರ್ರಧಾನಿಯಾಗಿ ಮಾಡಿದ್ದಾರೆ. ಜನರಿಂದ ನನಗೆ ಪ್ರೇರಣೆ ಸಿಗುತ್ತದೆ. ನಾನು ಫಿಟ್ ಇಂಡಿಯಾ ಬಗ್ಗೆ ಮಾತನಾಡುತ್ತೇನೆ. ಲೋಕ ಚುನಾವಣೆಯಲ್ಲಿ ಗೆಲುವು ನೀಡಿದ ಎಲ್ಲರಿಗೂ ಧನ್ಯವಾದಗಳು. ಸಂಸತ್​​​ನಲ್ಲಿ ಈಗ ಒಟ್ಟು 78 ಮಹಿಳಾ ಸಂಸದರಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...