Finland Sanna Marin: ನನಗೂ ಖುಷಿಪಡುವ ಹಕ್ಕಿದೆ, ಕರ್ತವ್ಯ ಎಂದಿಗೂ ಕಡೆಗಣಿಸಿಲ್ಲ: ಕಣ್ಣೀರಿಟ್ಟ ಪ್ರಧಾನಿ!

ತಮ್ಮ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಿರುವ ಪಿಎಂ ಮರಿನ್, 'ನಾನು ಓಬ್ಬ ಮನುಷ್ಯ. ನಾನು ಕೂಡ ಕೆಲವೊಮ್ಮೆ ಬಿಡುವಿಲ್ಲದ ಜೀವನದ ನಡುವೆ ಸಂತೋಷ, ಖುಷಿ ಹಾಗೂ ಮಸ್ತಿ ಮಾಡಲು ಇಚ್ಛಿಸುತ್ತೇನೆ. ಇದು ನನ್ನ ವೈಯಕ್ತಿಕ ಬದುಕು, ನನಗೂ ಸಂತೋಷಪಡುವ ಹಕ್ಕು ಇದೆ. ಆದರೂ ನಾನು ಒಂದು ದಿನವೂ ನನ್ನ ಕೆಲಸ ಹಾಗೂ ಕರ್ತವ್ಯವನ್ನು ಕಡೆಗಣಿಸಿಲ್ಲ ಎಂದಿದ್ದಾರೆ.

ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್

ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್

  • Share this:
ಹೆಲ್ಸಿಂಕಿ(ಆ.25):  ಪಾರ್ಟಿ ವಿಡಿಯೋ (Party Video) ಸೋರಿಕೆಯಾದ ನಂತರ ಭಾರೀ ಟೀಕೆ ಎದುರಿಸುತ್ತಿರುವ ಫಿನ್‌ಲ್ಯಾಂಡ್‌ನ 36 ವರ್ಷದ ಪ್ರಧಾನಿ ಸನ್ನಾ ಮರಿನ್ (Finland's prime minister Sanna Marin) ಬುಧವಾರ ತಮ್ಮ ಕೆಲಸದ ದಾಖಲೆ ಮತ್ತು ವೈಯಕ್ತಿಕ ಜೀವನದ ಹಕ್ಕನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಹೆಲ್ಸಿಂಕಿಯ ಉತ್ತರದಲ್ಲಿರುವ ಲಾಹ್ತಿ ನಗರದಲ್ಲಿ ನಡೆದ ತನ್ನ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ (SDP)ಯ ಕಾರ್ಯಕ್ರಮವೊಂದರಲ್ಲಿಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಾ ಮಾತನಾಡಿದ PM ಮರಿನ್, 'ನಾನೊಬ್ಬ ಮನುಷ್ಯ. ನಾನು ಕೂಡ ಕೆಲವೊಮ್ಮೆ ಬಿಡುವಿಲ್ಲದ ಜೀವನದ ನಡುವೆ ಸಂತೋಷ, ಖುಷಿ ಹಾಗೂ ಮಸ್ತಿ ಮಾಡಲು ಇಚ್ಛಿಸುತ್ತೇನೆ. ಇದು ನನ್ನ ವೈಯಕ್ತಿಕ ಬದುಕು, ನನಗೂ ಸಂತೋಷಪಡುಇವ ಹಕ್ಕು ಇದೆ. ಆದರೂ ನಾನು ಒಂದು ದಿನವೂ ನನ್ನ ಕೆಲಸ ಹಾಗೂ ಕರ್ತವ್ಯವನ್ನು ಕಡೆಗಣಿಸಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Sanna Marin: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವಿಡಿಯೋ ವೈರಲ್, ಡ್ರಗ್ಸ್ ಟೆಸ್ಟ್​ಗೆ ಒತ್ತಾಯ!

ಸುದ್ದಿ ಸಂಸ್ಥೆ AFP ಯ ಸುದ್ದಿಯ ಪ್ರಕಾರ, ಫಿನ್‌ಲ್ಯಾಂಡ್‌ನ ಪಿಎಂ ಸನ್ನಾ ಮರಿನ್ ಮಾತನಾಡುತ್ತಾ 'ಕಳೆದ ವಾರ ತುಂಬಾ ಕಷ್ಟಕರವಾಗಿತ್ತು. ಬಿಡುವಿನ ವೇಳೆಯಲ್ಲಿ ನಾವು ಏನು ಮಾಡುತ್ತೇವೆ ಎಂಬುದನ್ನು ಜನ ನೋಡದೇ, ಕೆಲಸದ ಸಮಯದಲ್ಲಿ ಏನು ಮಾಡುತ್ತಾ ಎಂಬುವುದನ್ನು ನೋಡುತ್ತಾರೆಂದು ನಾನು ನಂಬುತ್ತೇನೆ ಎಂದಿದ್ದಾರೆ. ಕಳೆದ ವಾರ ಅವರ ಒಂದು ವಿಡಿಯೋ ಲೀಕ್ ಆಗಿದ್ದು, ಇದು ಪ್ರಪಂಚದಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದರಲ್ಲಿ ಪಿಎಂ ಸನ್ನಾ ಮರಿನ್ ತಮ್ಮ ಸ್ನೇಹಿತರು ಮತ್ತು ಸೆಲೆಬ್ರಿಟಿಗಳೊಂದಿಗೆ ಡ್ಯಾನ್ಸ್ ಮತ್ತು ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ.

ಡ್ರಗ್ಸ್​ ವರದಿ ನೆಗೆಟಿವ್

ಸನ್ನಾ ಮರಿನ್ ಅವರು ವಿಡಿಯೋದಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡಿದ ಕೆಲವರು ಪ್ರಧಾನಿ ಹುದ್ದೆಯಲ್ಲಿದ್ದು ಹೀಗೆ ವರ್ತಿಸುವುದು ಅನುಚಿತ ಎಂದು ಟೀಕಿಸಿದ್ದಾರೆ. ಇತರರು ಸ್ನೇಹಿತರೊಂದಿಗೆ ಖಾಸಗಿ ಕಾರ್ಯಕ್ರಮವನ್ನು ಆನಂದಿಸುವ ಹಕ್ಕನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವರು ವಿಡಿಯೋವನ್ನು ನೋಡಿ ಪಿಎಂ ಮರಿನ್ ಡ್ರಗ್ಸ್‌ ತೆಗೆದುಕೊಂಡಿದ್ದಾರೆಂದು ಆರೋಪಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದು, ಅಂತಿಮವಾಗಿ ಪ್ರಧಾನಿ ಮರಿನ್ ಡ್ರಗ್ಸ್ ಸೇವನೆಯನ್ನು ನಿರಾಕರಿಸಿದ್ದರು. ಎಲ್ಲರ ಅನುಮಾನವನ್ನು ಸುಳ್ಳೆಂದು ಸಾಬೀತುಪಡಿಸಲು ಖುದ್ದು ಡ್ರಗ್ಸ್​ ಪರೀಕ್ಷೆಯನ್ನು ಮಾಡಿಸಿದರು ಹಾಗೂ ಇದರ ರಿಸಲ್ಟ್​ ನೆಗೆಟಿವ್ ಬಂದಿತ್ತು.

ಇದನ್ನೂ ಓದಿ: Sanna Marin: ಫಿನ್​ಲ್ಯಾಂಡ್ ಪ್ರಧಾನಿ ಡ್ರಗ್ ಸೇವಿಸಿ ಹುಚ್ಚು ಹುಚ್ಚಾಗಿ ಕುಣಿದಿಲ್ಲ; ವರದಿ ರಿವೀಲ್

ಇದರ ಹೊರತಾಗಿಯೂ, ಜುಲೈನಲ್ಲಿ ತನ್ನ ಮನೆಯಲ್ಲಿ ತೆಗೆದ ಕೆಲವು ಫೋಟೋಗಳಿಗಾಗಿ ಮರಿನ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಯಿತು. ಇದರಲ್ಲಿ ಇಬ್ಬರು ಮಹಿಳೆಯರು ಆಕ್ಷೇಪಾರ್ಹ ಕೃತ್ಯ ಎಸಗುತ್ತಿದ್ದರು. ಈ ಚಿತ್ರಗಳನ್ನು ಮೊದಲು ಮಾಜಿ ಮಿಸ್ ಫಿನ್‌ಲ್ಯಾಂಡ್ ಸ್ಪರ್ಧಿಯೊಬ್ಬರು ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಫೋಟೋದಲ್ಲಿ ಸಹ ಗೋಚರಿಸುತ್ತದೆ. ಆದಾಗ್ಯೂ, ವೀಡಿಯೋ ಬಳಿಕ ಹುಟ್ಟಿಕೊಮಡ ವಿವಾದದ ಸಮಯದಲ್ಲಿ ಮರಿನ್ ಅವರ ಪಕ್ಷವು ಅವರನ್ನು ಬೆಂಬಲಿಸಿತು ಎನ್ನಲಾಗಿದೆ. ಹೀಗಿದ್ದರೂ ವೈರಲ್ ಆದ ಹೊಸ ಫೋಟೋಗಳು ಸಾಮಾಜಿಕ ಪ್ರಜಾಪ್ರಭುತ್ವವಾದಿಗಳಿಂದ ಟೀಕೆಗೆ ಗುರಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ. ಪತ್ರಿಕೆಯೊಂದು, ಎಸ್‌ಡಿಪಿ ಸಂಸದರೊಂದಿಗೆ ಮಾತನಾಡಿದ ನಂತರ ಸನಾ ಮರಿನ್ ಅತ್ಯಂತ ಜನಪ್ರಿಯವಾಗಿದ್ದರೂ, ಪದೇ ಪದೇ ಅವರ ಹಗರಣಗಳಿಂದ ಪಕ್ಷದೊಳಗೆ ಹತಾಶೆ ಹೆಚ್ಚುತ್ತಿದೆ ಎಂದಿದ್ದರೆಂದು ವರದಿ ಉಲ್ಲೇಖಿಸಿದೆ.

ಪಾರ್ಟಿಯಲ್ಲಿ ಯಾರ‍್ಯಾರು ಭಾಗಿಯಾಗಿದ್ದರು

ವಿಡಿಯೋದಲ್ಲಿ ಕಂಡುಬಂದಿರುವ ಗಣ್ಯ ವ್ಯಕ್ತಿಗಳಲ್ಲಿ ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರಾಪರ್ ಪೆಟ್ರಿ ನೈಗಾರ್ಡ್, ಟಿವಿ ಹೋಸ್ಟ್ ಟಿನ್ನಿ ವಿಕ್ಸ್ಟ್ರೋಮ್, ರೇಡಿಯೊ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಅವರದ್ದೇ ಆದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಇದ್ದಾರೆ. ವಿಶೇಷವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಫಿನ್‌ಲ್ಯಾಂಡ್ NATO ಗೆ ಸೇರಲು ತಟಸ್ಥ ಧೋರಣೆಯನ್ನು ಕೊನೆಗೊಳಿಸುತ್ತಿರುವಾಗ ಹಾಗೂ ರಷ್ಯಾದೊಂದಿಗೆ ಸೆಣಸಾಡುತ್ತಿರುವಾಗ ವಿನೋದ ಪ್ರಿಯ ನಡವಳಿಕೆಯು ನಾಯಕರಿಗೆ ಶೋಭನೀಯವಾದುದಲ್ಲ ಎಂಬ ಟೀಕೆಗೆ ಗುರಿಯಾಗಿದೆ.
Published by:Precilla Olivia Dias
First published: