HOME » NEWS » National-international » I T DEPT SAYS IT SEIZED CASH WORTH RS 12 CRORE IN RAIDS FROM PEOPLE CLOSE TO RAJASTHAN CM GEHLOT SNVS

ರಾಜಸ್ಥಾನ ಮುಖ್ಯಮಂತ್ರಿ ಆಪ್ತರ ಮನೆಗಳ ಮೇಲೆ ಐಟಿ ರೇಡ್; 12 ಕೋಟಿ ಮೊತ್ತದ ನಗದು ಹಣ ವಶಕ್ಕೆ

ಬಂಡಾಯದ ಬಿಸಿ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತರಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಳಿಯಾಗಿದೆ.

news18-kannada
Updated:July 18, 2020, 8:33 AM IST
ರಾಜಸ್ಥಾನ ಮುಖ್ಯಮಂತ್ರಿ ಆಪ್ತರ ಮನೆಗಳ ಮೇಲೆ ಐಟಿ ರೇಡ್; 12 ಕೋಟಿ ಮೊತ್ತದ ನಗದು ಹಣ ವಶಕ್ಕೆ
ಅಶೋಕ್ ಗೆಹ್ಲೋಟ್
  • Share this:
ನವದೆಹಲಿ: ರಾಜಸ್ಥಾನದಲ್ಲಿ ಮುಖ್ಯಮಂತ್ರಿಯ ಗಾದಿ ಅಲುಗಾಡುವಂತೆ ಬಂಡಾಯ ಅಪ್ಪಳಿಸುತ್ತಿರುವಂತೆಯೇ ಸಿಎಂಗೆ ಐಟಿ ಬಿಸಿಯೂ ತಾಕಿದೆ. 200ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ವಿವಿಧ ತಂಡಗಳಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತರ ಸ್ಥಳಗಳ ಮೇಲೆ ರೇಡ್ ಮಾಡಿದ್ಧಾರೆ. ಈ ವೇಳೆ, 12 ಕೋಟಿ ರೂ ಮೊತ್ತದ ನಗದು ಹಣ ಹಾಗೂ ದಾಖಲೆಗಳಿಲ್ಲದ 1.7 ಕೋಟಿ ರೂ ಮೌಲ್ಯದ ಒಡವೆ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಜುಲೈ 13ರಿಂದ ಐಟಿ ದಾಳಿ ನಡೆದಿರುವುದು ತಿಳಿದುಬಂದಿದೆ. ತೆರಿಗೆ ವಂಚನೆ ಆಗಿದೆ ಎಂಬ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ರಾಜಸ್ಥಾನ ಮೂಲದ ಮೂರು ಸಂಸ್ಥೆಗಳಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಐಟಿ ದಾಳಿಯಾಗಿದೆ. ಜೈಪುರದಲ್ಲಿ 20, ಕೋಟಾದಲ್ಲಿ 6, ದೆಹಲಿಯಲ್ಲಿ 8 ಮತ್ತು ಮುಂಬೈನಲ್ಲಿ 9 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿರುವುದು ತಿಳಿದುಬಂದಿದೆ.

ರೇಡ್ ಆದ ಮೂರು ಕಂಪನಿಗಳಲ್ಲಿ ಎರಡು ಕಂಪನಿಗಳು ಸಿಎಂ ಅಶೋಕ್ ಗೆಹ್ಲೋಟ್ ಅವರ ಆಪ್ತರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Petrol Price: ನಿರಂತರವಾಗಿ ಡೀಸೆಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ; 11 ದಿನಗಳಲ್ಲಿ 6 ಬಾರಿ ಬೆಲೆ ಹೆಚ್ಚಳ

ಅಶೋಕ್ ಗೆಹ್ಲೋಟ್ ಅವರ ಮಗನ ವ್ಯವಹಾರ ಪಾಲುದಾರ ರತನ್ ಕಾಂತ್ ಶರ್ಮಾ ಅವರ ಲಾಕರ್​ನಲ್ಲಿ 5 ಕೋಟಿ ರೂ ನಗದು ಹಣ ಸಿಕ್ಕಿದೆ. ಇವಿಷ್ಟೂ ರೇಡ್​ಗಳಿಂದ ಇಲ್ಲಿಯವರೆಗೆ 12 ಕೋಟಿ ರೂ ನಗದು ಹಣ ದೊರಕಿದೆ. ಈ ರೇಡ್​ನಿಂದ ಪತ್ತೆಯಾದ ಹಣವನ್ನ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಸಚಿನ್ ಪೈಲಟ್ ಸೇರಿದಂತೆ 19 ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಹೊತ್ತಲ್ಲೇ ಐಟಿ ದಾಳಿ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜಸ್ಥಾನ ಸರ್ಕಾರದ ಮೇಲೆ ಒತ್ತಡ ಹಾಕಿ ದುರ್ಬಲಗಳಿಸಲು ಕೇಂದ್ರ ಸರ್ಕಾರ ನಡೆಸಿರುವ ಸಂಚು ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ತೆರಿಗೆ ಇಲಾಖೆಯ ನೀತಿ ರೂಪಕ ಸಂಸ್ಥೆಯಾದ ಸಿಬಿಡಿಟಿ ಈ ಆರೋಪಗಳನ್ನ ತಳ್ಳಿಹಾಕಿದೆ. ಈ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವ ಮಾಹಿತಿ ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಜಕಾರಣಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ.

ಐಟಿ ದಾಳಿಯಾದ ಮೂರು ಗ್ರೂಪ್​ಗಳಲ್ಲಿ ಒಂದು ಗ್ರೂಪ್ ಸಂಸ್ಥೆ ಹೋಟೆಲ್, ಜಲವಿದ್ಯುತ್ ಯೋಜನೆ, ಆಟೊಮೊಬೈಲ್ ಕ್ಷೇತ್ರಗಳಲ್ಲಿ ವ್ಯವಹಾರ ಹೊಂದಿದೆ. ಈ ವ್ಯವಹಾರಗಳಿಂದ ಅಕ್ರಮವಾಗಿ ಗಳಿಸಿದ ಹಣವನ್ನು ರಿಯಲ್ ಎಸ್ಟೇಟ್​ನಲ್ಲಿ ಹೂಡಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ತಿಳಿಸಿದೆ.ಇದನ್ನೂ ಓದಿ: ಹೆಚ್ಚುತ್ತಿದೆ ಕೊರೋನಾ ಸೋಂಕು ಮುಕ್ತರ ಸಂಖ್ಯೆ; ವಿಶ್ವಸಂಸ್ಥೆಯಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಹೊಗಳಿದ ಪ್ರಧಾನಿ ಮೋದಿ

ಎರಡನೇ ಕಂಪನಿಯು ಚಿನ್ನ ಮತ್ತು ಬೆಳ್ಳಿ ಆಭರಣಗಳ ವ್ಯವಹಾರ ಹೊಂದಿದೆ. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಲ್ಲಿ ಸಹಭಾಗಿ ಸಂಸ್ಥೆಗಳನ್ನ ಹೊಂದಿದೆ. ಆ ದೇಶಗಳಲ್ಲಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನೂ ಹೊಂದಿದೆ. ಆದರೆ, ಇದು ನಡೆಸುವ ಬೆಳ್ಳಿ ಆಭರಣ ವ್ಯವಹಾರಗಳಲ್ಲಿ ಬಹುತೇಕ ಅಕ್ರಮವೇ ಇದೆ ಎಂಬ ಆಪಾದನೆ ಇದೆ ಎಂದು ತೆರಿಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.

ಇನ್ನು, ಮೂರನೇ ಗ್ರೂಪ್ ಸಂಸ್ಥೆ ಹೋಟೆಲ್ ವ್ಯವಹಾರ ಹೊಂದಿದ್ದು, ಅದರ ಹೂಡಿಕೆಯ ಮೂಲವನ್ನು ಪರಿಶೀಲಿಸಲಾಗುತ್ತಿದೆ. ಈ ವಾರ ನಡೆದ ದಾಳಿಗಳಲ್ಲಿ ಸಿಕ್ಕಿರುವ ದಾಖಲೆಪತ್ರಗಳು, ಡೈರಿಗಳು, ಡಿಜಿಟಲ್ ಡಾಟಾ ಇತ್ಯಾದಿಗಳು ಅಕ್ರಮ ವ್ಯವಹಾರಗಳ ಸುಳಿವನ್ನು ನೀಡಿವೆ ಎಂದು ಅದು ಅಭಿಪ್ರಾಯಪಟ್ಟಿದೆ.
Published by: Vijayasarthy SN
First published: July 18, 2020, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories