ನನಗೆ ವಯಸ್ಸಾಗಿದೆ, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸದೆಯೂ ಇರಬಹುದು; ಸಂಸತ್ತಿನಲ್ಲಿ ದೇವೇಗೌಡರ ಹೇಳಿಕೆ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಅಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಉರುಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.

HR Ramesh | news18
Updated:February 11, 2019, 7:17 PM IST
ನನಗೆ ವಯಸ್ಸಾಗಿದೆ, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸದೆಯೂ ಇರಬಹುದು; ಸಂಸತ್ತಿನಲ್ಲಿ ದೇವೇಗೌಡರ ಹೇಳಿಕೆ
ಎಚ್.ಡಿ.ದೇವೇಗೌಡ
HR Ramesh | news18
Updated: February 11, 2019, 7:17 PM IST
ನವದೆಹಲಿ: ಕೇಂದ್ರ ಮಧ್ಯಂತರ ಬಜೆಟ್​ ಅಧಿವೇಶನದಲ್ಲಿ ಇಂದು ಲೋಕಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ತಾವು ಪ್ರಧಾನಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಯೋಜನೆಗಳು ಹಾಗೂ ಈ ದೇಶಕ್ಕೆ ಮೈತ್ರಿ ಸರ್ಕಾರಗಳು ನೀಡಿದ ಕೊಡುಗೆಗಳನ್ನು ವಿವರಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಪದೆಪದೇ ಮೈತ್ರಿ ಸರ್ಕಾರ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಹೇಳುತ್ತಿರುತ್ತಾರೆ. ಅಟಲ್​ ಬಿಹಾರಿ ವಾಜಪೇಯಿ ಅವರು ಮೊದಲ ಬಾರಿಗೆ ಮೈತ್ರಿ ಸರ್ಕಾರವನ್ನು ರಚಿಸಿದ್ದರು. ನಾನು 320 ದಿನಗಳವರೆಗೆ ಕಡಿಮೆ ಅವಧಿವರೆಗೆ ಪ್ರಧಾನಿಯಾಗಿದ್ದೆ. ಈ ಮೈತ್ರಿಯಲ್ಲಿ ಹಲವು ನಾಯಕರಿದ್ದರು ಮತ್ತು ನಾವು ಹಲವು ಸುಧಾರಣೆ ಕ್ರಮಗಳನ್ನು ತೆಗೆದುಕೊಂಡೆವು ಎಂದು ದೇವೇಗೌಡರು ಹೇಳಿದರು.ನಿಮಗೆ ನೆನಪಿರಬಹುದು ಅಂದು ಮನಮೋಹನ್ ಸಿಂಗ್ ಅವರು ಆರ್ಥಿಕ ಸುಧಾರಣಾ ನೀತಿಗಳನ್ನು ತಂದರು. ನಾವು ಅವುಗಳನ್ನು ಅನುಷ್ಠಾನಕ್ಕೆ ತಂದೆವು. ನನ್ನ ಸರ್ಕಾರದಲ್ಲಿ ಆರ್​ಟಿಐ ಕಾಯ್ದೆಯನ್ನು ಆರಂಭಿಸಲಾಯಿತು. ನನ್ನ ವೈಯಕ್ತಿಕವಾಗಿ ಪ್ರಧಾನಿಯನ್ನು ಒಳಗೊಂಡಂತೆ ಲೋಕಪಾಲ್ ಮಸೂದೆ ಜಾರಿಗೆ ಚಿಂತನೆ ನಡೆಸಿದ್ದೆ ಎಂದರು.

ಅಧಿಕಾರ ವಿಕೇಂದ್ರೀಕರಣ ಮತ್ತು ಹಂಚಿಕೆ, ಟೆಲಿಕಮ್ಯುನಿಕೇಷನ್ ಕ್ರಾಂತಿ ಹಾಗೂ ಮಹಿಳಾ ಮೀಸಲಾತಿ ಕಾಯ್ದೆ ಇವೆಲ್ಲ ಜಾರಿಗೆ ಬಂದಿದ್ದೆ ಮೈತ್ರಿ ಸರ್ಕಾರದಲ್ಲಿ. ಹಲವು ಸರ್ಕಾರಗಳು ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಪ್ರಯತ್ನಿಸಿವೆ. ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಅದು ಇಲ್ಲೂ (ಲೋಕಸಭೆಯಲ್ಲಿ) ಅಂಗೀಕಾರ ಪಡೆಯಬೇಕು ಎಂದು ಹೇಳಿದರು.
Loading...

ಇದನ್ನು ಓದಿ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಯಾರಾಗಲಿದ್ದಾರೆ ಅಭ್ಯರ್ಥಿ- ದೇವೇಗೌಡ ಇಲ್ಲ ಪ್ರಜ್ವಲ್​ ರೇವಣ್ಣ?

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಅಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಉರುಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.

ನನಗೆ ವಯಸ್ಸಾಗಿದೆ. ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸದೆಯೂ ಇರಬಹುದು. ಆದರೆ, ಉದಯೋನ್ಮುಖ ನಾಯಕರಿಗೆ ಮಾರ್ಗದರ್ಶನ ನೀಡುತ್ತೇನೆ ಎಂದು ದೇವೇಗೌಡರು ಹೇಳಿದರು.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...