Ananya Panday Drugs Case| ನಾನು ಯಾರಿಗೂ ಡ್ರಗ್ಸ್​ ಪೂರೈಕೆ ಮಾಡಿಲ್ಲ; ಆರೋಪ ನಿರಾಕರಿಸಿದ ನಟಿ ಅನನ್ಯಾ ಪಾಂಡೆ

Drugs Case: ಮೊಬೈಲ್ ಚಾಟ್‌ನಲ್ಲಿ ನಟಿ ಅನನ್ಯಾ ಪಾಂಡೆ ಹೆಸರು ಉಲ್ಲೇಖಗೊಂಡಿದ್ದು, ಒಮ್ಮೆ ಜನಪ್ರಿಯ ಗೆಟ್ ಟುಗೆದರ್ ಸೇರಿದಂತೆ ಒಟ್ಟು ಮೂರು ಬಾರಿ ಗಾಂಜಾ ಪೂರೈಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಎನ್​ಸಿಬಿ ವಿಚಾರಣಗೆ ಹಾಜರಾಗಿದ್ದ ಅನನ್ಯಾ ಪಾಂಡೆ.

ಎನ್​ಸಿಬಿ ವಿಚಾರಣಗೆ ಹಾಜರಾಗಿದ್ದ ಅನನ್ಯಾ ಪಾಂಡೆ.

 • Share this:
  ಮುಂಬೈ (ಅಕ್ಟೋಬರ್​ 22); ಬಾಲಿವುಡ್​ನ (Bollywood) ಖ್ಯಾತನಾಮರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಿದ್ದ ಆರೋಪದ ಮೇಲೆ ಇತ್ತೀಚೆಗೆ ನಟಿ ಅನನ್ಯಾ ಪಾಂಡೆ (Ananya Pande) ಅವರನ್ನು ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ (Narcotics Control Bureau) ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ, ಅವರ ಲ್ಯಾಪ್​ಟಾಪ್ ಮತ್ತು ಮೊಬೈಲ್​ ಸಹ ವಶಕ್ಕೆ ಪಡೆಯಲಾಗಿತ್ತು.  ಆದರೆ, ಪೊಲೀಸರ ವಿಚಾರಣೆ ವೇಳೆ ನಟಿ ಅನನ್ಯಾ ಪಾಂಡೆ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಾಲಿವುಡ್​ ಖ್ಯಾತನಾಮರಿಗೆ ಡ್ರಗ್ಸ್ ಪೂರೈಕೆ ಅಥವಾ ಡ್ರಗ್ಸ್ (Drugs Case) ಬಳಸಿದ ಆರೋಪವನ್ನು ನಟಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

  ಬಂಧಿತರ ಫೋನಲ್ಲಿತ್ತು ಅನನ್ಯಾ ಚಾಟ್:

  ಡ್ರಗ್ಸ್​ ಪ್ರಕರಣದಲ್ಲಿ ಬಂಧಿಸಲಾಗಿರುವ ಕೆಲವರ ಫೋನಿನಲ್ಲಿ ಪತ್ತೆಯಾದ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ನಟಿಯನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದೆ. ಗುರುವಾರ ಸಂಜೆಯೂ ವಿಚಾರಣೆ ನಡೆಸಿದ್ದ ಎನ್‌ಸಿಬಿ, ಇಂದು ನಟಿ ಅನನ್ಯಾ ಪಾಂಡೆ ಅವರನ್ನು ಮತ್ತೆ ವಿಚಾರಣೆಗೆ ಕರೆಸಿತ್ತು.

  ಅಕ್ಟೋಬರ್‌ 8 ರಿಂದ ಜೈಲಿನಲ್ಲಿರುವ ಆರ್ಯನ್ ಖಾನ್ ಅವರ ವಾಟ್ಸಾಪ್‌ ಚಾಟ್‌ಗಳನ್ನು ಇಟ್ಟುಕೊಂಡು ನಟಿಯನ್ನು ಪ್ರಶ್ನೆ ಮಾಡಲಾಗಿದೆ ಎಂದು ವರದಿಯಾಗಿದೆ. ಚಾಟ್‌ಗಳಲ್ಲಿ ಆರ್ಯನ್ ಖಾನ್‌ಗೆ ಗಾಂಜಾ ಪೂರೈಸಲು ಸಹಾಯ ಮಾಡಿರುವುದು ಸೂಚಿಸುತ್ತದೆ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

  ಚಾಟ್​ನಲ್ಲಿ ಏನಿದೆ?

  "2018-19ರಲ್ಲಿ ಆರ್ಯನ್ ಖಾನ್‌ಗೆ ಡ್ರಗ್ ಡೀಲರ್‌ಗಳ ಮೊಬೈಲ್ ಸಂಖ್ಯೆಯನ್ನು ಒದಗಿಸುವ ಮೂಲಕ ಮೂರು ಬಾರಿ ಡ್ರಗ್ಸ್ ಪೂರೈಸಲು ನಟಿ ಸಹಾಯ ಮಾಡಿದ್ದಾರೆ ಎಂಬುದು ಆರ್ಯನ್ ಅವರ ಮೊಬೈಲ್ ಫೋನ್‌ನ ಚಾಟ್‌ಗಳು ತಿಳಿಸಿವೆ” ಎಂದು ಎನ್‌ಸಿಬಿ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದೆ

  ಮೊಬೈಲ್ ಚಾಟ್‌ನಲ್ಲಿ ನಟಿ ಅನನ್ಯಾ ಪಾಂಡೆ ಹೆಸರು ಉಲ್ಲೇಖಗೊಂಡಿದ್ದು, ಒಮ್ಮೆ ಜನಪ್ರಿಯ ಗೆಟ್ ಟುಗೆದರ್ ಸೇರಿದಂತೆ ಒಟ್ಟು ಮೂರು ಬಾರಿ ಗಾಂಜಾ ಪೂರೈಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

  ಎನ್​ಸಿಬಿ ಅಧಿಕಾರಿಗಳು ನೀಡಿದ ಮಾಹಿತಿ ಏನು?

  "ಚಾಟ್ ಸಂಭಾಷಣೆಯಲ್ಲಿ ನಟಿ ಡ್ರಗ್ಸ್ ಪೂರೈಕೆ ಸಂಬಂಧಿತ ಮಾತುಕತೆಗಳನ್ನು ನಿರಾಕರಿಸಿದ್ದಾರೆ. ತಾನು ಎಂದಿಗೂ ಡ್ರಗ್ಸ್ ಸೇವಿಸಿಲ್ಲ, ಸರಬರಾಜು ಮಾಡಿಲ್ಲ ಎಂದು NCB ಅಧಿಕಾರಿಗಳಿಗೆ ಹೇಳಿದ್ದಾರೆ" ಎಂದು ಮೂಲಗಳು ತಿಳಿಸಿವೆ.

  "ನಟಿಯ ಎರಡೂ ಫೋನ್‌ಗಳನ್ನು ನಾವು ವಶಪಡಿಸಿಕೊಂಡಿದ್ದೇವೆ, ಅದರಲ್ಲಿ ಹಳೆಯ ಹ್ಯಾಂಡ್‌ಸೆಟ್ ಮತ್ತು ಕೆಲವು ತಿಂಗಳ ಹಿಂದೆ ಅವರು ಖರೀದಿಸಿದ ಹೊಸ ಫೋನ್ ಕೂಡ ಸೇರಿದೆ" ಎಂದು ಎನ್‌ಸಿಬಿ ಮೂಲಗಳು ಎಎನ್‌ಐಗೆ ತಿಳಿಸಿವೆ.

  ಇದನ್ನೂ ಓದಿ: Bollywood Drugs: ಅನನ್ಯಾ ಪಾಂಡೆಗೆ ಮಾರಕವಾಗುತ್ತಾ ಮಾದಕ ಲಿಂಕ್?​: ನಟಿಯ ಲ್ಯಾಪ್​ಟಾಪ್,​ ಮೊಬೈಲ್​ NCB ವಶಕ್ಕೆ

  ನಟಿಯ ವಿಚಾರಣೆ:

  ಮುಂಬೈ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ 22 ವರ್ಷದ ಬಾಲಿವುಡ್ ನಟಿ ಅನನ್ಯ ಪಾಂಡೆಯವರ ಮುಂಬೈನ ಬಾಂದ್ರಾದಲ್ಲಿರುವ ಮನೆಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಗುರುವಾರ ದಾಳಿ ನಡೆಸಿತ್ತು. ದಾಳಿಯಲ್ಲಿ ನಟಿಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಎನ್‌ಸಿಬಿ ವಶಪಡಿಸಿಕೊಂಡಿದೆ.

  ಅನನ್ಯ ಪಾಂಡೆ ಮತ್ತು ಆರ್ಯನ್ ಖಾನ್ ಕಾಮನ್ ಫ್ರೆಂಡ್ಸ್ ಸರ್ಕಲ್‌ ಹೊಂದಿದ್ದಾರೆ. ಅನನ್ಯ ಮತ್ತು ಆರ್ಯನ್ ಸಹೋದರಿ ಸುಹಾನಾ ಉತ್ತಮ ಸ್ನೇಹಿತರಾಗಿದ್ದಾರೆ. ಅನನ್ಯ ಪಾಂಡೆ 2019 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಈಕೆ ಬಾಲಿವುಡ್ ನಟ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಅವರ ಪುತ್ರಿ.

  ಇದನ್ನೂ ಓದಿ: BJP Hate Speech| 'ಮತಾಂತರಿಗಳ ತಲೆ ತೆಗೆಯಿರಿ': ಛತ್ತೀಸ್​ಗಢದ ಬಿಜೆಪಿ ನಾಯಕರ ವೇದಿಕೆಯಲ್ಲಿ ಕೋಮು ದ್ವೇಷ ಭಾಷಣ!

  ಈ ತಿಂಗಳ ಆರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್‌ ಮಗ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಬಂಧಿಸಿದೆ. ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದು, ಡ್ರಗ್ಸ್​ ಪೆಡ್ಲರ್​ಗಳ ಬಗ್ಗೆ ಶೀಘ್ರದಲ್ಲಿ ಇನ್ನಷ್ಟು ಮಾಹಿತಿಗಳು ಹೊರಬರಲಿವೆ ಎನ್ನಲಾಗುತ್ತಿದೆ.
  Published by:MAshok Kumar
  First published: