• Home
  • »
  • News
  • »
  • national-international
  • »
  • Cancer: ನಂಗೆ ಕ್ಯಾನ್ಸರ್ ಇದೆ ಅಂತ ಗೊತ್ತು, ಪ್ಲೀಸ್ ಅಪ್ಪ-ಅಮ್ಮಗೆ ಹೇಳ್ಬೇಡಿ! 6ರ ಬಾಲಕನ ಮಾತಿಗೆ ವೈದ್ಯರು ಭಾವುಕ

Cancer: ನಂಗೆ ಕ್ಯಾನ್ಸರ್ ಇದೆ ಅಂತ ಗೊತ್ತು, ಪ್ಲೀಸ್ ಅಪ್ಪ-ಅಮ್ಮಗೆ ಹೇಳ್ಬೇಡಿ! 6ರ ಬಾಲಕನ ಮಾತಿಗೆ ವೈದ್ಯರು ಭಾವುಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ದಿನದಂತೆ, ಇಂದು ಕೂಡ ಆಸ್ಪತ್ರೆಯಲ್ಲಿ ಬಿಡುವಿಲ್ಲದ ದಿನವಾಗಿತ್ತು. ಕಿಕ್ಕಿರಿದು ತುಂಬಿರುವ ಒಪಿಡಿ. ಇದೇ ವೇಳೆ ಯುವ ದಂಪತಿ ಆಸ್ಪತ್ರೆಗೆ ಪ್ರವೇಶಿಸಿ ನಮ್ಮ ಮಗ ಮನು ಹೊರಗೆ ನಿಂತಿದ್ದಾನೆ ಎಂದು ಹೇಳಿದರು. ಅವನು ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ. ಈ ಬಗ್ಗೆ ಮನುವಿಗೆ ಹೇಳಬೇಡಿ ಎಂದು ದಂಪತಿ ಮನವಿ ಮಾಡಿದರು. ಅವರ ಮನುವಿಗೆ ಏನನ್ನೂ ಹೇಳಲಾಗಲಿಲ್ಲ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಹೈದರಾಬಾದ್: ಕಾನ್ಸರ್ (Cancer) ಎಂಬ ಮಾರಣಾಂತಿಕ ಕಾಯಿಲೆಯಿಂದ 6 ವರ್ಷದ ಬಾಲಕ (Boy) ಬಳಲುತ್ತಿದ್ದನು. ತನಗೆ ಕ್ಯಾನ್ಸರ್​ ಇರುವ ವಿಚಾರ ತಿಳಿದು ದಯವಿಟ್ಟು ನನ್ನ ಪೋಷಕರಿಗೆ (Parents) ಈ ವಿಚಾರ ಹೇಳಬೇಡಿ ಎಂದು ವೈದ್ಯರಲ್ಲಿ (Doctor) ಮನವಿ ಮಾಡಿದ್ದನ್ನು ನೋಡಿ ವೈದ್ಯರು ಕೂಡ ಭಾವುಕರಾಗಿದ್ದಾರೆ. ಅಲ್ಲದೇ ಈ ಮನಕಲಕುವಂತಹ ಸ್ಟೋರಿಯನ್ನು ವೈದ್ಯರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಈ ಕಥೆ ಕೇಳಿ ನೆಟ್ಟಿಗರು ಕೂಡ ಕಣ್ಣೀರಿಟ್ಟಿದ್ದಾರೆ. ಹೈದರಾಬಾದ್‌ನ (Hydrabad) ಅಪೋಲೋ ಆಸ್ಪತ್ರೆಯ (Apollo Hospital) ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಅವರು, 6 ವರ್ಷದ ಬಾಲಕ ಮನು ತನ್ನ ಅನಾರೋಗ್ಯದ ಬಗ್ಗೆ ಪೋಷಕರಿಗೆ ತಿಳಿಸಬೇಡಿ ಎಂದು ಮನವಿ ಮಾಡಿದ ಪರಿಯನ್ನು ಟ್ವೀಟ್​ನಲ್ಲಿ ತಿಳಿಸಿದ್ದಾರೆ.


ನಮ್ಮ ಮಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ ಅಂತ ಅವನಿಗೆ ಹೇಳ್ಬೇಡಿ


ಪ್ರತಿ ದಿನದಂತೆ, ಇಂದು ಕೂಡ ಆಸ್ಪತ್ರೆಯಲ್ಲಿ ಬಿಡುವಿಲ್ಲದ ದಿನವಾಗಿತ್ತು. ಕಿಕ್ಕಿರಿದು ತುಂಬಿರುವ ಒಪಿಡಿ. ಇದೇ ವೇಳೆ ಯುವ ದಂಪತಿ ಆಸ್ಪತ್ರೆಗೆ ಪ್ರವೇಶಿಸಿ ನಮ್ಮ ಮಗ ಮನು ಹೊರಗೆ ನಿಂತಿದ್ದಾನೆ ಎಂದು ಹೇಳಿದರು. ಅವನು ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ. ಈ ಬಗ್ಗೆ ಮನುವಿಗೆ ಹೇಳಬೇಡಿ ಎಂದು ದಂಪತಿ ಮನವಿ ಮಾಡಿದರು. ಅವರ ಮನುವಿಗೆ ಏನನ್ನೂ ಹೇಳಲಾಗಲಿಲ್ಲ.


ಪುಟ್ಟ ಹುಡುಗನ ಮುಖದಲ್ಲಿ ನಗು, ಆತ್ಮವಿಶ್ವಾಸ ನೋಡಿ ವೈದ್ಯರು ಶಾಕ್


ವೈದ್ಯರು ಪೋಷಕರ ಮನವಿಯನ್ನು ಒಪ್ಪಿಕೊಂಡು ಮನುವನ್ನು ನೋಡುತ್ತಾರೆ. ಆಗ ಪುಟ್ಟ ಬಾಲಕ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡಿರುತ್ತಾನೆ. ಪುಟ್ಟ ಹುಡುಗನ ಮುಖದಲ್ಲಿ ನಗು, ಆತ್ಮವಿಶ್ವಾಸ ಉಕ್ಕಿ ಹರಿಯುತ್ತಿರುತ್ತದೆ. ಮನು ಗ್ಲಿಯೊಬ್ಲಾಸ್ಟೊಮಾ ಮಲ್ಟಿಫಾರ್ಮ್ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದನು. ಗ್ರೇಡ್ 4. ಕ್ಯಾನ್ಸರ್ ಮೆದುಳಿನ ಎಡಭಾಗಕ್ಕೆ ಹರಡಿದೆ, ಇದರ ಪರಿಣಾಮವಾಗಿ ಬಲಗೈ ಮತ್ತು ಕಾಲಿನ ಪಾರ್ಶ್ವವಾಯು ಉಂಟಾಗುತ್ತದೆ. ಹೀಗಾಗಿ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮಾಡಲಾಗುತ್ತದೆ. ಮೆದುಳಿನ ಕ್ಯಾನ್ಸರ್ ಸಹ ಆಗಾಗ್ಗೆ ರೋಗಗ್ರಸ್ತವಾಗುವಿಕೆಗಳನ್ನು ಉಂಟುಮಾಡುತ್ತದೆ.


ಡಾಕ್ಟರ್, ನನಗೆ ಏನಾಗಿದೆ ಎಂದು ನನಗೆ ತಿಳಿದಿದೆ


ವೈದ್ಯರು ಚಿಕಿತ್ಸೆಗೆ ಸಂಬಂಧಿಸಿದ ಎಲ್ಲವನ್ನೂ ಬಾಲಕನ ಪೋಷಕರೊಂದಿಗೆ ಚರ್ಚಿಸಿದರು ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಅದರ ನಂತರ, ಮನು ವೈದ್ಯರೊಂದಿಗೆ ಒಬ್ಬಂಟಿಯಾಗಿ ಮಾತನಾಡಲು ಬಯಸುತ್ತೇನೆ ಎಂದು ಹೇಳಿದ್ದಾನೆ. ಹೀಗಾಗಿ ಪೋಷಕರು ಕೊಠಡಿಯಿಂದ ಹೊರ ಬರುತ್ತಾನೆ. ನಂತರ ತಕ್ಷಣ ಮನು ವೈದ್ಯರಿಗೆ ಮನವಿ ಮಾಡಿಕೊಡುತ್ತಾ ಹೇಳುತ್ತಾನೆ, “ಡಾಕ್ಟರ್, ನನಗೆ ಏನಾಗಿದೆ ಎಂದು ನನಗೆ ತಿಳಿದಿದೆ. ಐಪ್ಯಾಡ್‌ನಲ್ಲಿ ನನ್ನ ಕಾಯಿಲೆಯ ಬಗ್ಗೆ ಎಲ್ಲವನ್ನೂ ಓದಿದೆ. ನಾನು ಇನ್ನೂ ಆರು ತಿಂಗಳು ಮಾತ್ರ ಬದುಕುತ್ತೇನೆ ಎಂದು ತಿಳಿದಿದೆ. ಆದರೆ ನಾನು ನನ್ನ ಪೋಷಕರಿಗೆ ಏನು ಹೇಳಲಿಲ್ಲ. ಇದರಿಂದ ಅವರು ಆತಂಕ ಪಡುತ್ತಾರೆ. ದಯವಿಟ್ಟು ನನಗೆ ಕ್ಯಾನ್ಸರ್ ಇದೆ ಎಂದು ನನ್ನ ಪೋಷಕರಿಗೆ ಹೇಳಬೇಡಿ ಎಂದು ಹೇಳುತ್ತಾನೆ.


ಪುಟ್ಟ ಬಾಲಕನ ಬಾಯಲ್ಲಿ ದೊಡ್ಡ ಮಾತು ಕೇಳಿ ವೈದ್ಯರು ತಬ್ಬಿಬ್ಬು


ಪುಟ್ಟ ಬಾಲಕನ ಬಾಯಲ್ಲಿ ಇಂತಹ ದೊಡ್ಡ ಮಾತನ್ನು ಕೇಳಿ ಒಂದು ಕ್ಷಣ ತಬ್ಬಿಬ್ಬಾದೆ. ಏನು ಹೇಳಲಿ ಎಂಬುದಕ್ಕೆ ಪದಗಳೇ ಸಿಗಲಿಲ್ಲ. ನಾನು ಮನುವಿನ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನ ದೈಹಿಕ ಸ್ಥಿತಿಯ ಬಗ್ಗೆ ಪೋಷಕರಿಗೆ ತಿಳಿಸಿ. ಮನುವಿಗೆ ಎಲ್ಲವೂ ಗೊತ್ತಿದೆ ಎಂದು ತಂದೆ-ತಾಯಂದಿರು ಅಳಲು ತೋಡಿಕೊಂಡೆ ಎಂದು ಕ್ಯಾಪ್ಷನ್​ನಲ್ಲಿ ಬರೆದುಕೊಂಡಿದ್ದಾರೆ.


8 ತಿಂಗಳ ಕಾಲ ಮಗನೊಂದಿಗೆ ಉತ್ತಮಸಮಯ ಕಳೆದವು


ಹೀಗೆ 9 ತಿಂಗಳು ಕಳೆದವು. ಮನುವಿನ ಪೋಷಕರು ವೈದ್ಯರನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದಿದ್ದರು. ವೈದ್ಯ ಬಾಬು ಬಳಿ ಮನು 1 ತಿಂಗಳ ಹಿಂದೆ ನಮ್ಮನ್ನು ಅಗಲಿದ ಎಂದು ತಿಳಿಸಿದರು. ಆದರೆ ಆ ದಿನ ನಿಮ್ಮನ್ನು ಭೇಟಿಯಾದ ನಂತರ ಮುಂದಿನ 8 ತಿಂಗಳ ಕಾಲ ನಾವೆಲ್ಲರೂ ಒಟ್ಟಿಗೆ ಉತ್ತಮ ಸಮಯವನ್ನು ಕಳೆದೇವು.


ಇದನ್ನೂ ಓದಿ: Viral Video: ಶಾಪಿಂಗ್​ ಮಾಡುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದ ವ್ಯಕ್ತಿ! ಅಲ್ಲೇ ಇದ್ದ ವೈದ್ಯರು ಏನ್​ ಮಾಡಿದ್ರು ಗೊತ್ತಾ?


ಮನು ಡಿಸ್ನಿಲ್ಯಾಂಡ್‌ಗೆ ಹೋಗಬೇಕೆಂಬ ಆಸೆ ಹೊಂದಿದ್ದ, ಹಾಗಾಗಿ ಅವನನ್ನು ಕರೆದುಕೊಂಡು ಹೋಗಿದ್ದೆವು. ಕೆಲಸದಿಂದ ಬ್ರೇಕ್ ತೆಗೆದುಕೊಂಡು, ಮೂವರೂ ಒಟ್ಟಿಗೆ ಸಮಯವನ್ನು ಕಳೆದಿದ್ದೇವೆ. ಆ ಸುಂದರವಾದ ಎಂಟು ತಿಂಗಳು ಕಳೆಯಲು ಸಹಾಯ ಮಾಡಿದ ನಿಮಗೆ ಧನ್ಯವಾದ ಹೇಳಲು ನಾವು ಇಂದು ನಿಮ್ಮ ಬಳಿಗೆ ಬಂದಿದ್ದೇನೆ ಎಂದು ಹೇಳಿರುವುದಾಗಿ ತಿಳಿಸಿದರು.

Published by:Monika N
First published: