'ನನಗೆ ಹೆಂಡತಿ, ಮಗಳು, ಅಳಿಯ ಮತ್ತು ಸೋದರ ಸಂಬಂಧಿಗಳು ಇದ್ದಾರೆ, ಮೋದಿಗೆ ಒಬ್ಬರೂ ಇಲ್ಲ'; ಶರದ್ ಪವಾರ್

ಒಂದು ಕುಟುಂಬವನ್ನು ಹೇಗೆ ನಡೆಸಬೇಕು ಎಂಬುದು ಅವರಿಗೆ (ಮೋದಿ) ಗೊತ್ತಿದೆಯೇ? ಅಲ್ಲದೇ, ಬೇರೆಯವರ ಮನೆಯನ್ನು ಅವರು ಏಕೆ ಇಣುಕಿ ನೋಡಬೇಕು. ಇದಕ್ಕಿಂತಲೂ ಇನ್ನೂ ಹೆಚ್ಚಿಗೆ ಹೇಳಬಲ್ಲೆ. ಆದರೆ, ಸಣ್ಣ ಮಟ್ಟಕ್ಕೆ ಇಳಿಯಬಾರದು ಎಂದು ಇದನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ ಎಂದು ಶರದ್​ ಪವಾರ್​ ಹೇಳಿದ್ದಾರೆ.  

HR Ramesh | news18
Updated:April 17, 2019, 4:35 PM IST
'ನನಗೆ ಹೆಂಡತಿ, ಮಗಳು, ಅಳಿಯ ಮತ್ತು ಸೋದರ ಸಂಬಂಧಿಗಳು  ಇದ್ದಾರೆ, ಮೋದಿಗೆ ಒಬ್ಬರೂ ಇಲ್ಲ'; ಶರದ್ ಪವಾರ್
ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್
HR Ramesh | news18
Updated: April 17, 2019, 4:35 PM IST
ನವದೆಹಲಿ: ನರೇಂದ್ರ ಮೋದಿ ಅವರ ಕುಟುಂಬವನ್ನು ಇಣುಕಿ ನೋಡಿದರೆ ಅಲ್ಲಿ ಅವರ ಸ್ವಂತದವರು ಎಂಬುವವರು ಯಾರೂ ಇಲ್ಲ ಎಂದು ಬುಧವಾರ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಹೇಳಿದ್ದಾರೆ. ಸೋದರ ಸಂಬಂಧಿಗಳಿಂದ ಮಹಾರಾಷ್ಟ್ರವನ್ನು ಮುಕ್ತವನ್ನಾಗಿ ಮಾಡಬೇಕು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಶರದ್ ಪವಾರ್ ಹೀಗೆ ತಿರುಗೇಟು ನೀಡಿದ್ದಾರೆ.

"ಮೋದಿಜೀ, ಹೇಳುತ್ತಾರೆ ಪವಾರ್ ಸಾಹೇಬರು ಒಳ್ಳೆಯವರು. ಆದರೆ, ಅವರ ಕುಟುಂಬದ್ದು ಸಮಸ್ಯೆ. ಅವರ ಸೋದರ ಸಂಬಂಧಿಗಳು ಅವರ ಅಂಕೆ ಮೀರಿದ್ದಾರೆ ಎಂದು ಹೇಳಿದ್ದರು. ನಾನು ಅವರಿಗೆ ಹೇಳಲು ಬಯಸುತ್ತೇನೆ, ನನ್ನ ಮನೆಯ ವಿಷಯ ಇಟ್ಟುಕೊಂಡು ಇವರು ಏನು ಮಾಡಲು ಹೊರಟಿದ್ದಾರೆ. ಆದರೆ, ನನಗೆ ಆನಂತರ ಅರಿವಾಯಿತು. ನನಗೆ ಹೆಂಡತಿ ಮತ್ತು ಮಗಳು ಇದ್ದಾಳೆ. ನನ್ನ ಅಳಿಯಂದಿರು ಮತ್ತು ಸೋದರ ಸಂಬಂಧಿಗಳು ನಮ್ಮ ಮನೆಗೆ ಬರುತ್ತಾರೆ. ಆದರೆ, ಅವರಿಗೆ ಯಾರೊಬ್ಬರೂ ಇಲ್ಲ," ಎಂದು ಪವಾರ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
 ಒಂದು ಕುಟುಂಬವನ್ನು ಹೇಗೆ ನಡೆಸಬೇಕು ಎಂಬುದು ಅವರಿಗೆ (ಮೋದಿ) ಗೊತ್ತಿದೆಯೇ? ಅಲ್ಲದೇ, ಬೇರೆಯವರ ಮನೆಯನ್ನು ಅವರು ಏಕೆ ಇಣುಕಿ ನೋಡಬೇಕು. ಇದಕ್ಕಿಂತಲೂ ಇನ್ನೂ ಹೆಚ್ಚಿಗೆ ಹೇಳಬಲ್ಲೆ. ಆದರೆ, ಸಣ್ಣ ಮಟ್ಟಕ್ಕೆ ಇಳಿಯಬಾರದು ಎಂದು ಇದನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ ಎಂದು ಶರದ್​ ಪವಾರ್​ ಹೇಳಿದ್ದಾರೆ.





Loading...





ಪವಾರ್​ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಮಾತನಾಡಲು ಶರದ್ ಪವಾರ್ ಸರಿಯಾದ ವ್ಯಕ್ತಿ. ಏಕೆಂದರೆ ಅವರು ನನಗಿಂತಲೂ ಹಿರಿಯರು. ಶರದ್​ ಪವಾರ್ ಕುಟುಂಬ ರಾಜಕಾರಣದಲ್ಲಿ ಮುಳುಗಿದ್ದಾರೆ ಮತ್ತು ಇವರ ಮಾದರಿಯಲ್ಲಿ ದೆಹಲಿಯಲ್ಲಿ ವಿಶೇಷ ಕುಟುಂಬವೂ ಒಂದಿದೆ," ಎಂದು ಗಾಂಧಿ ಕುಟುಂಬವನ್ನು ಇದೇ ವೇಳೆ ಟೀಕಿಸಿದ್ದಾರೆ.




ಕುತೂಹಲದ ವಿಷಯ ಏನೆಂದರೆ, ಮೋದಿ ಅವರ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಎನ್​ಸಿಪಿ ಸಂಸದ ಮತ್ತು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ವಿಜಯ್​ ಸಿನ್ಹಾ ಮೊಹಿತ್ ಪಟೇಲ್​ ಅವರು ಕಾಣಿಸಿಕೊಂಡಿದ್ದರು. ಈ ವೇಳೆ ಸಕ್ರಿಯ ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಕಾರಣಕ್ಕಾಗಿ ಮೋದಿ ಅವರು ಪಟೇಲ್​ ಅವರನ್ನು ಸನ್ಮಾನಿಸಿದ್ದರು.


ಮೊಹಿತ್ ಪಟೇಲ್ ಅವರ ಮಗ ಎನ್​ಸಿಪಿಯ ಮಾಜಿ ಸಂಸದ ರಂಜಿತ್ ಸಿನ್ಹಾ ಕಳೆದ ಮಾರ್ಚ್​ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.


First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626