News18 India World Cup 2019

'ಏನಾಗಿದೆ ಎಂದು ತಿಳಿಯುವುದು ನನ್ನ ಹಕ್ಕು'; ಗೊಗೋಯ್​ಗೆ ಕ್ಲಿನ್​ಚಿಟ್​ ನೀಡಿದ ಸಮಿತಿ ವರದಿ ತನಗೆ ಬೇಕು ಎಂದ ದೂರುದಾರ ಮಹಿಳೆ

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಿಜೆಐಗೆ ಸಮಿತಿ ಕ್ಲಿನ್ ಚಿಟ್​ ನೀಡಿದ ಸಮಿತಿ ಕ್ರಮವನ್ನು ಖಂಡಿಸಿ, 55 ವಕೀಲರು ಮತ್ತು ಮಹಿಳಾ ಕಾರ್ಯಕರ್ತರು ಸುಪ್ರೀಂಕೋರ್ಟ್​ ಎದುರು ಪ್ರತಿಭಟನೆ ನಡೆಸಿದ ನಂತರ ದೂರುದಾರ ಮಹಿಳೆ ಈ ಆಗ್ರಹ ಮಾಡಿದ್ದಾರೆ.

HR Ramesh | news18
Updated:May 7, 2019, 7:29 PM IST
'ಏನಾಗಿದೆ ಎಂದು ತಿಳಿಯುವುದು ನನ್ನ ಹಕ್ಕು'; ಗೊಗೋಯ್​ಗೆ ಕ್ಲಿನ್​ಚಿಟ್​ ನೀಡಿದ ಸಮಿತಿ ವರದಿ ತನಗೆ ಬೇಕು ಎಂದ ದೂರುದಾರ ಮಹಿಳೆ
ರಂಜನ್ ಗೊಗೋಯ್
HR Ramesh | news18
Updated: May 7, 2019, 7:29 PM IST
ನವದೆಹಲಿ: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್ ವಿರುದ್ಧ ಮಹಿಳೆಯೊಬ್ಬರು ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹುರುಳಿಲ್ಲ ಎಂದು  ಸುಪ್ರೀಂಕೋರ್ಟ್ ತನಿಖಾ ಸಮಿತಿ ವರದಿ ನೀಡಿದೆ. ಸಮಿತಿ ನೀಡಿರುವ ವರದಿಯಲ್ಲಿ ಏನಿದೆ ಎಂದು ತಿಳಿಯಬೇಕು. ಹಾಗಾಗಿ ವರದಿ ನೀಡುವಂತೆ ಆರೋಪ ಮಾಡಿದ್ದ ಮಹಿಳೆ ಆಗ್ರಹಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಲು ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ ನ್ಯಾ.ಎಸ್.ಎ.ಬೋಬ್ಡೆ, ನ್ಯಾ.ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ. ಇಂಧೂ ಮಲ್ಹೋತ್ರಾ ಇದ್ದರು. ಸಿಜೆಐ ವಿರುದ್ಧ ಮಾಡಲಾಗಿದ್ದ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿದೆ. ಸಮಿತಿ ನೀಡಿರುವ ವರದಿಯನ್ನು ಸಿಜೆಐ ಗೊಗೋಯ್ ಅವರಿಗೆ ನೀಡಲಾಗಿದೆ.

ಮಹಿಳೆ ಮಾಡಿರುವ ಆರೋಪವನ್ನು ವರದಿಯಲ್ಲಿ ನಿರಾಕರಿಸಲಾಗಿದೆ. ಜೂನಿಯನ್​ ಕೋರ್ಟ್​ನ ಮಾಜಿ ಸಿಬ್ಬಂದಿಯಾಗಿರುವ ಮಹಿಳೆಯೂ, ದೂರನ್ನು ನಿರಾಕರಿಸಲು ಕಾರಣವೇನು, ಯಾವ ಸಾಕ್ಷ್ಯಗಳ ಆಧಾರದ ಮೇಲೆ ದೂರನ್ನು ನಿರಾಕರಿಸಲಾಗಿದೆ ಎಂಬುದು ನನಗೆ ತಿಳಿಯಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಲೈಂಗಿಕ ಕಿರುಕುಳ ಪ್ರಕರಣ ಸಿಜೆಐ ರಂಜನ್​ ಗೊಗೋಯ್​ಗೆ ಕ್ಲೀನ್​ಚಿಟ್; ನ್ಯಾಯಯುತ ತನಿಖೆಗೆ ಮಹಿಳಾ ನ್ಯಾಯವಾದಿಗಳ ಒತ್ತಾಯ

ಇದು ಹೇಗೆ ಎಂಬುದು ನನಗೆ ತಿಳಿಯಬೇಕು. ಯಾವ ಆಧಾರ ಮೇಲೆ ನನ್ನ ದೂರಿನಲ್ಲಿ ಹುರುಳಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ ಎಂಬುದು ನನಗೆ ತಿಳಿಯಬೇಕು ಎಂದು ಮಹಿಳೆ ಸಮಿತಿಗೆ ಪತ್ರ ಬರೆದಿದ್ದಾಳೆ.

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಿಜೆಐಗೆ ಸಮಿತಿ ಕ್ಲಿನ್ ಚಿಟ್​ ನೀಡಿದ ಸಮಿತಿ ಕ್ರಮವನ್ನು ಖಂಡಿಸಿ, 55 ವಕೀಲರು ಮತ್ತು ಮಹಿಳಾ ಕಾರ್ಯಕರ್ತರು ಸುಪ್ರೀಂಕೋರ್ಟ್​ ಎದುರು ಪ್ರತಿಭಟನೆ ನಡೆಸಿದ ನಂತರ ದೂರುದಾರ ಮಹಿಳೆ ಈ ಆಗ್ರಹ ಮಾಡಿದ್ದಾರೆ.
Loading...

ನನಗೆ ಆಶ್ಚರ್ಯವಾಗಿದೆ. ಈ ಪ್ರಕರಣದ ತನಿಖೆಯಲ್ಲಿ ನನ್ನನ್ನು ಹೊರಗಿನವರ ಹಾಗೆ ನೋಡಲಾಗಿದೆ. ಪ್ರಕ್ರಿಯೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ದೂರುದಾರರಿಗೆ ಪ್ರತಿಯನ್ನು ಒದಗಿಸದಿದ್ದರೆ ಅದು ಸಾಮಾಜಿಕ ನ್ಯಾಯವನ್ನು ಉಲ್ಲಂಘಿಸಿದಂತೆ ಎಂದು ಮಹಿಳೆ ಹೇಳಿದ್ದಾರೆ.

First published:May 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...