Punjab Politics: ನಾಳೆ ಗುಡ್ ನ್ಯೂಸ್ ನೀಡುವುದಾಗಿ ತಿಳಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

ದೆಹಲಿಗೆ ಅಧಿಕಾರಿಗಳನ್ನು ಕಳುಹಿಸಿದ್ದು ಮಾತ್ರವಲ್ಲ, ಬೇರೆಡೆ ಎಲ್ಲೇ ಏನೇ  ಒಳ್ಳೆಯದು ಇದ್ದರೆ ಅದನ್ನು ಕಲಿಯಲಾಗುವುದು. ಈ‌ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಗುಜರಾತ್ ಅಥವಾ ತಮಿಳುನಾಡು ಆಗಿರಲಿ ಅಲ್ಲಿಗೂ ಅಧಿಕಾರಿಗಳನ್ನು ಕಳುಹಿಸಲು ಸಿದ್ಧ ಎಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್

ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್

  • Share this:
ನವದೆಹಲಿ, ಏ. 15: ಆಮ್ ಆದ್ಮಿ ಪಕ್ಷದ (AAP) ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಪಂಜಾಬ್‌ನ ಐಎಎಸ್ ಅಧಿಕಾರಿ(IAS Officers)ಗಳ ಜೊತೆ ಸಭೆ ನಡೆಸಿದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು 'ಕೇಜ್ರಿವಾಲ್ ಯಾವ ಉದ್ದೇಶದಿಂದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ? ಎಂಬುದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. 'ತಾವು ಅಧಿಕಾರಿಗಳನ್ನು ದೆಹಲಿಗೆ ಏಕೆ ಕಳುಹಿಸಿದ್ದೆ ಎಂದು ತಿಳಿಯಲು ಏಪ್ರಿಲ್ 16ರವರೆಗೆ ಕಾಯಿರಿ. ಅಂದು ಜನರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಹೇಳಿದ್ದಾರೆ.

ಒಳ್ಳೆಯದು ಎಲ್ಲಿದ್ದರೂ ಕಲಿಯಬೇಕು

ದೆಹಲಿಗೆ ಅಧಿಕಾರಿಗಳನ್ನು ಕಳುಹಿಸಿದ್ದು ಮಾತ್ರವಲ್ಲ, ಬೇರೆಡೆ ಎಲ್ಲೇ ಏನೇ  ಒಳ್ಳೆಯದು ಇದ್ದರೆ ಅದನ್ನು ಕಲಿಯಲಾಗುವುದು. ಈ‌ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಗುಜರಾತ್ ಅಥವಾ ತಮಿಳುನಾಡು ಆಗಿರಲಿ ಅಲ್ಲಿಗೂ ಅಧಿಕಾರಿಗಳನ್ನು ಕಳುಹಿಸಲು ಸಿದ್ಧ. ಇದೇ ರೀತಿ ತಮ್ಮದೇ ಆದೇಶದ ಮೇರೆಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಕೆಲವು ದಿನಗಳ ಹಿಂದೆ ನವದೆಹಲಿಗೆ ತರಬೇತಿಗಾಗಿ ತೆರಳಿದ್ದರು ಎಂದು ಎಂದು ಭಗವಂತ್ ಮಾನ್ ಹೇಳಿದ್ದಾರೆ.

ದೆಹಲಿ ಸರ್ಕಾರದ ಸಾಧನೆಗಳಿಗೆ ಸಾಟಿ ಇಲ್ಲ

ಈ ವಿಷಯದ ಬಗ್ಗೆ ವಿವಾದ ಎಬ್ಬಿಸಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಭಗವಂತ್ ಮಾನ್, ಅಗತ್ಯವಿದ್ದಾಗ ಅವರ ಆಡಳಿತ ಕೌಶಲ್ಯ ಮತ್ತು ಪರಿಣತಿಯನ್ನು ಗೌರವಿಸಲು ತನ್ನ ಅಧಿಕಾರಿಗಳನ್ನು ಕಳುಹಿಸುವುದಾಗಿ ಹೇಳಿದರು.

ಇದನ್ನೂ ಓದಿ:  Hardik Patelಗೆ ನಮ್ಮ ಪಕ್ಷದ ಬಾಗಿಲು ಯಾವಾಗಲೂ ತೆರೆದಿರುತ್ತದೆ - ಗುಜರಾತ್ ಎಎಪಿ ಅಧ್ಯಕ್ಷರಿಂದ ಬಹಿರಂಗ ಆಹ್ವಾನ

ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ದೆಹಲಿ ಸರ್ಕಾರದ ಸುಧಾರಣೆಗಳಿಗೆ ಸಾಟಿಯಿಲ್ಲ. ಅವರಿಂದ ತರಬೇತಿ ಪಡೆಯುವುದರಿಂದ ರಾಜ್ಯಕ್ಕೆ ಯಾವುದೇ ರೀತಿಯಲ್ಲಿ  ಹಾನಿ ಆಗುವುದಿಲ್ಲ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ನಿಯಂತ್ರಿತ ಪಂಜಾಬ್

ಪತ್ರಕರ್ತರ ಕಡೆಯಿಂದ ಪದೇ ಪದೇ ಅಧಿಕಾರಿಗಳನ್ನು ಕಳುಹಿಸಿದ ವಿಷಯವೇ ಪ್ರಸ್ತಾಪವಾದಾಗ 'ದೆಹಲಿ ಸರ್ಕಾರ ಶಿಕ್ಷಣ, ಅಧಿಕಾರ, ಆರೋಗ್ಯದಲ್ಲಿ ತಜ್ಞರು. ಆದುದರಿಂದ ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಏಕೆ ಕಳುಹಿಸಬಾರದು? ಎಂದು ಭಗವಂತ್ ಮನ್ ಪತ್ರಕರ್ತರನ್ನೇ ಪ್ರಶ್ನೆ ಮಾಡಿದರು. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದನ್ನು ಪ್ರತಿಪಕ್ಷಗಳು "ಕೇಜ್ರಿವಾಲ್ ನಿಯಂತ್ರಿತ ಪಂಜಾಬ್" ಎಂದು ಆರೋಪ ಮಾಡಿದ್ದವು.

ಆಪ್ ನಾಯಕರ ಸಮರ್ಥನೆ

ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (PSPCL) ನ ಉನ್ನತ ಅಧಿಕಾರಿಗಳನ್ನು ಸಿಎಂ ಮಾನ್ ಅನುಪಸ್ಥಿತಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿದ್ಯುತ್ ಕಾರ್ಯದರ್ಶಿಯೊಂದಿಗೆ ಭೇಟಿಯಾದ ವರದಿಗಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ, ವಿರೋಧ ಪಕ್ಷಗಳ ನಾಯಕರು ಅರವಿಂದ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಈಗ ದೆಹಲಿ ಹಾಗೂ ಪಂಜಾಬ್ ಆಪ್ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ವಿವರಣೆ ಕೇಳಿದ ಕಾಂಗ್ರೆಸ್

ಹೊಸದಾಗಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ನೇಮಕವಾಗಿರುವ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಪಂಜಾಬ್ ಅಧಿಕಾರಿಗಳನ್ನು "ಸಮನ್ಸ್" ಮಾಡಿದ್ದಕ್ಕಾಗಿ ಅರವಿಂದ ಕೇಜ್ರಿವಾಲ್ ಅವರನ್ನು ಟ್ವಿಟ್ಟರ್‌ ಮೂಲಕ ಟೀಕೆ ಮಾಡಿದ್ದರು.

ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಂದ ವಿವರಣೆಯನ್ನು ಕೇಳಿದ್ದರು. ಪಂಜಾಬ್‌ನ ಹಿತಾಸಕ್ತಿಗಳನ್ನು ಕಾಪಾಡಲು ದೆಹಲಿಯಿಂದ ರಿಮೋಟ್-ಕಂಟ್ರೋಲ್ ಆಗುತ್ತಿಲ್ಲ ಎಂಬುದನ್ನು ಖಚಿತಪಡಿಸಿ ಎಂದು ಶಿರೋಮಣಿ ಅಕಾಲಿ ದಳವು ಭಗವಂತ್ ಮಾನ್ ಅವರನ್ನು ಆಗ್ರಹಿಸಿತ್ತು.

ಇದನ್ನೂ ಓದಿ:  Annamalai: ತಮಿಳುನಾಡಲ್ಲಿ ಹಿಂದಿ ಹೇರಲು ಬಿಡಲ್ಲ ಎಂದ ಅಣ್ಣಾಮಲೈ

ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ಜೊತೆಗೆ ಬಿಜೆಪಿ ಕೂಡ ಕೈಜೋಡಿಸಿತ್ತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಅರವಿಂದ ಕೇಜ್ರಿವಾಲ್ ಅವರನ್ನು "ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯನ್ನಾಗಿ ಪರಿವರ್ತಿಸಿದ್ದಾರೆ" ಎಂದು ಟೀಕಿಸಿದ್ದರು.
Published by:Mahmadrafik K
First published: