Ramnath Kovind| ನನ್ನ ವೇತನ 5 ಲಕ್ಷ ಆದರೆ, ಶೇ.50ಕ್ಕಿಂತ ಹೆಚ್ಚು ತೆರಿಗೆ ಪಾವತಿಸುತ್ತೇನೆ; ರಾಷ್ಟ್ರಪತಿ ರಾಮನಾಥ ಕೋವಿಂದ್

ದೇಶದ ರಾಷ್ಟ್ರಪತಿಯಾಗಿ ನಾನು ತಿಂಗಳಿಗೆ 5 ಲಕ್ಷ ರೂ ವೇತನವನ್ನು ಪಡೆಯುತ್ತೇನೆ. ಅದರಲ್ಲಿ 2.75 ಲಕ್ಷ ರೂ ತೆರಿಗೆ ಪಾವತಿಸುತ್ತೇನೆ. ತಿಂಗಳ ನನ್ನ ಉಳಿತಾಯಕ್ಕಿಂತ ಆದಾಯ ತೆರಿಗೆ ಹೆಚ್ಚಿದೆ ಎಂದು ರಾಮನಾಥ ಕೋವಿಂದ್ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್.

ರಾಷ್ಟ್ರಪತಿ ರಾಮನಾಥ ಕೋವಿಂದ್.

 • Share this:
  ನವ ದೆಹಲಿ (ಜೂನ್ 29); "ದೇಶದ ಅಭಿವೃದ್ಧಿಗಾಗಿ ಎಲ್ಲರೂ ನಿಯಮಿತವಾಗಿ ಆದಾಯ ತೆರಿಗೆ ಮತ್ತು ಆಸ್ತಿ ತೆರಿಗೆ ಪಾವತಿಸಬೇಕು. ದೇಶದ ರಾಷ್ಟ್ರಪತಿಯಾಗಿ ನಾನು ತಿಂಗಳಿಗೆ 5 ಲಕ್ಷ ರೂ ವೇತನವನ್ನು ಪಡೆಯುತ್ತೇನೆ. ಅದರಲ್ಲಿ 2.75 ಲಕ್ಷ ರೂ ತೆರಿಗೆ ಪಾವತಿಸುತ್ತೇನೆ. ತಿಂಗಳ ನನ್ನ ಉಳಿತಾಯಕ್ಕಿಂತ ಆದಾಯ ತೆರಿಗೆ ಹೆಚ್ಚಿದೆ" ಎಂದು ಹೇಳುವ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ದೇಶದ ಪ್ರಗತಿಗಾಗಿ ಎಲ್ಲರೂ ಕಡ್ಡಾಯವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಹೇಳಿದ್ದಾರೆ.

  ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಾನು ಕೂಡ ಆದಾಯ ತೆರಿಗೆಯನ್ನು ಪಾವತಿಸುತ್ತೇನೆ. ನಾನು ಪಾವತಿಸುವ ತೆರಿಗೆ ನನ್ನ ಉಳಿತಾಯಕ್ಕಿಂತಲೂ ಹೆಚ್ಚಿದೆ. ಕೆಲವೊಮ್ಮೆ ಒಂದು ನಿರ್ದಿಷ್ಟ ರೈಲ್ವೇ ನಿಲ್ದಾಣದಲ್ಲಿ ರೈಲು ನಿಲ್ಲದಿದ್ದರೆ, ನಾವು ಕೋಪಗೊಳ್ಳುತ್ತೇವೆ. ಹಾಗೂ ಬಲವಂತವಾಗಿ ನಾವು ಅದನ್ನು ನಿಲ್ಲಿಸುತ್ತೇವೆ. ಕೆಲವೊಮ್ಮೆ ಅದಕ್ಕೆ ಬೆಂಕಿ ಹಚ್ಚುವ ಕೆಲಸವನ್ನೂ ಮಾಡುತ್ತೇವೆ.

  ಹೀಗೆ ಬೆಂಕಿ ಹಚ್ಚಿದರೆ ವ್ಯರ್ಥವಾಗುವುದು ಸರ್ಕಾರಿ ಹಣವಲ್ಲ, ಬದಲಿಗೆ ನಿಮ್ಮದೇ ತೆರಿಗೆ ಹಣ ಎಂಬುದು ನೆನಪಿರಲಿ. ಇದು ಎಲ್ಲರಿಗೂ ತಿಳಿದಿರುವ ಕಾರಣ ನಾನು ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ಧೇನೆ. ರಾಷ್ಟ್ರಪತಿಗಳು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ. ಅದರೆ, ಅವರೂ ಕೂಡ ತೆರಿಗೆ ಪಾವತಿಸಲೇಬೇಕು. ನಾನು ಪ್ರತಿ ತಿಂಗಳು 5 ಲಕ್ಷ ವೇತನ ಪಡೆಯುತ್ತೇನೆ. ಅದಕ್ಕೂ ತೆರಿಗೆ ವಿಧಿಸಲಾಗುತ್ತದೆ. ನಾನು 2.75 ಲಕ್ಷ ರೂ ತೆರಿಗೆ ಪಾವತಿಸುತ್ತೇನೆ" ಎಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಹೇಳಿದ್ದಾರೆ.

  ಇದನ್ನೂ ಓದಿ: Delta Plus| ಡೆಲ್ಟಾ ಪ್ಲಸ್​ ಹೊರತಾಗಿಯೂ 4 ಅಪಾಯಕಾರಿ ರೂಪಾಂತರಿಗಳು ಮನುಕುಲವನ್ನು ಕಾಡಲಿದೆ; ಇಲ್ಲಿದೆ ಮಾಹಿತಿ!

  ಆದರೆ, "ನನ್ನ ವೇತನ ಹಾಗೂ ತೆರಗೆ ಎರಡೂ ಹೆಚ್ಚು. ಆದರೆ, ನನ್ನ ಉಳಿತಾಯ ಅತ್ಯಂತ ಕಡಿಮೆ. ನನ್ನ ಸಂಬಳದಲ್ಲಿ ನನಗೆ ಎಷ್ಟು ಉಳಿದಿದೆ? ನಾನು ಎಷ್ಟು ಉಳಿಸಿದರೂ, ನಮ್ಮ ಅಧಿಕಾರಿಗಳು ಅದಕ್ಕಿಂತ ಹೆಚ್ಚು ಸಂಪಾದಿಸುತ್ತಾರೆ. ಇಲ್ಲಿನ ಶಿಕ್ಷಕರೂ ಕೂಡ ಹೆಚ್ಚು ಸಂಪಾದಿಸುತ್ತಾರೆ. ಆದರೂ ತೆರಿಗೆ ಪಾವತಿ ಮಾಡಬೇಕಾದದ್ದು ಎಲ್ಲರ ಕರ್ತವ್ಯ" ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.

  "ಈ ತೆರಿಗೆಗಳು ಅಭಿವೃದ್ಧಿಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ನಾವು ತೆರಿಗೆ ಪಾವತಿಸದಿದ್ದರೆ, ಅದು ಯಾರ ನಷ್ಟ? ದೇಶದಲ್ಲಿರುವ ಎಲ್ಲರಿಗೂ ನಷ್ಟ" ಎಂದು ಅವರು ಹೇಳಿದ್ದಾರೆ.

  ಇದನ್ನೂ ಓದಿ: Nirmala Sitharaman| ಆರ್ಥಿಕತೆಯ ಚೇತರಿಕೆಗೆ 8 ಪರಿಹಾರ ಕ್ರಮಗಳನ್ನು ಸೂಚಿಸಿದ ಸಚಿವೆ ನಿರ್ಮಲಾ ಸೀತಾರಾಮನ್!

  ಇದೇ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಡಿ ಹೊಗಳಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, "ನನ್ನಂತಹ ಸಾಮಾನ್ಯ ಹಳ್ಳಿ ಹುಡುಗನಿಗೆ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶ ಸಿಗುತ್ತದೆ ಎಂದು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಇದನ್ನು ಸಾಧ್ಯವಾಗಿಸಿತು. ವಿಶ್ವದಲ್ಲೇ ಅತ್ಯುತ್ತಮ ಪ್ರಜಾಪ್ರಭುತ್ವವನ್ನು ಭಾರತ ಹೊಂದಿದೆ. ಸಾಮಾನ್ಯನನ್ನೂ ಎತ್ತರಕ್ಕೆ ಏರಿಸುವ ಸಾಧನವೇ ಪ್ರಜಾಪ್ರಭುತ್ವ" ಎಂದು ಅವರು ಹೇಳಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: