Captain Amarinder Singh: 'ನಾನು ಅವಮಾನಿತನಾಗಿದ್ದೇನೆ ...' ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕ್ಯಾ. ಅಮರೀಂದರ್ ಸಿಂಗ್ ನೋವಿನ ನುಡಿ!

"ಅವರು ತಾವು ನಂಬುವ ವ್ಯಕ್ತಿಯನ್ನು (ಮುಂದಿನ ಸಿಎಂ) ಮಾಡಬಹುದು. ನನ್ನ ಭವಿಷ್ಯದ ಆಯ್ಕೆಗಳು ಇನ್ನೂ ತೆರೆದಿವೆ. ನಾನು ನನ್ನ ಸಹೋದ್ಯೋಗಿಗಳೊಂದಿಗೆ ಭವಿಷ್ಯದ ನನ್ನ ಕಾರ್ಯ ಕ್ರಮದ ಬಗ್ಗೆ ಚರ್ಚಿಸುತ್ತೇನೆ." ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೇಳಿದರು.

ಅಮರೀಂದರ್ ಸಿಂಗ್

ಅಮರೀಂದರ್ ಸಿಂಗ್

  • Share this:
    ಅಮೃತಸರ್: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh Resigned As CM) ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಪಂಜಾಬ್ ರಾಜ್ಯಪಾಲರಾದ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ. ಪಂಜಾಬ್ ರಾಜ್ಯ ಕಾಂಗ್ರೆಸ್​ನಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆ ಇಂದು ಕಾಂಗ್ರೆಸ್ ಸಿಎಲ್​ಪಿ ಸಭೆಯನ್ನು ಕರೆಯಲಾಗಿತ್ತು. ಅಲ್ಲದೇ, ರಾಜ್ಯ ವೀಕ್ಷಕರಾಗಿ ಕಾಂಗ್ರೆಸ್ ಹೈಕಮಾಂಡ್ ಇಬ್ಬರನ್ನು ನೇಮಿಸಿ ಇಂದು ದೆಹಲಿಯಿಂದ ಪಂಜಾಬ್​ಗೆ ಕಳುಹಿಸಿಕೊಟ್ಟಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ದಿಢೀರನೇ ಅಮರೀಂದರ್ ಸಿಂಗ್ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು.

    “ನಾನು ಅವಮಾನಿತನಾಗಿದ್ದೇನೆ ... "ಎಂದು ಸಂಜೆ 4.30 ರ ಸುಮಾರಿಗೆ ಪಂಜಾಬ್ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ನಂತರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

    ಬೇಸರಗೊಂಡ ಅಮರೀಂದರ್ ಸಿಂಗ್ ರಾಜ್ಯಪಾಲರ ಭವನದ ಹೊರಗೆ ನಿಂತು ತನ್ನ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದರು." ಕಳೆದ ಎರಡು ತಿಂಗಳಲ್ಲಿ ನಾನು ಕಾಂಗ್ರೆಸ್ ನಾಯಕತ್ವದಿಂದ ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ ... ಅವರು ಎರಡು ಬಾರಿ ಶಾಸಕರನ್ನು ದೆಹಲಿಗೆ ಕರೆಸಿಕೊಂಡರು ಮತ್ತು ಈಗ ಇಲ್ಲಿ ಚಂಡೀಗಢದಲ್ಲಿ ಸಿಎಲ್‌ಪಿ ಸಭೆಯನ್ನು ಕರೆದರು," ಅವರು ಹೇಳಿದರು. ಮತ್ತು ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಂದು ಬೆಳಿಗ್ಗೆ ತಿಳಿಸಿರುವುದಾಗಿಯೂ ಸಿಂಗ್ ಹೇಳಿದರು.

    "ಸ್ಪಷ್ಟವಾಗಿ ಅವರು (ಕಾಂಗ್ರೆಸ್ ಹೈಕಮಾಂಡ್) ನನ್ನ ಮೇಲೆ ವಿಶ್ವಾಸ ಹೊಂದಲಿಲ್ಲ ಮತ್ತು ನಾನು ನನ್ನ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಭಾವಿಸಲಿಲ್ಲ. ಆದರೆ ಅವರು ಇಡೀ ಪ್ರಕರಣವನ್ನು ನಿರ್ವಹಿಸಿದ ರೀತಿಯಿಂದ ನನಗೆ ಅವಮಾನವಾಯಿತು," ಎಂದು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ನೀಡಿದ ನಂತರ ಅವರು ರಾಜಭವನದ ಗೇಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. "ಅವರು ಯಾರನ್ನು ನಂಬುತ್ತಾರೋ ಅವರನ್ನು ನೇಮಿಸಲಿ" ಎಂದು ಅವರು ಪಕ್ಷದ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡರು.

    "ಅವರು ತಾವು ನಂಬುವ ವ್ಯಕ್ತಿಯನ್ನು (ಮುಂದಿನ ಸಿಎಂ) ಮಾಡಬಹುದು. ನನ್ನ ಭವಿಷ್ಯದ ಆಯ್ಕೆಗಳು ಇನ್ನೂ ತೆರೆದಿವೆ. ನಾನು ನನ್ನ ಸಹೋದ್ಯೋಗಿಗಳೊಂದಿಗೆ ಭವಿಷ್ಯದ ನನ್ನ ಕಾರ್ಯ ಕ್ರಮದ ಬಗ್ಗೆ ಚರ್ಚಿಸುತ್ತೇನೆ." ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೇಳಿದರು.

    ಇದನ್ನು ಓದಿ: Punjab Congress Crisis: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ

    ಮುಖ್ಯಮಂತ್ರಿಯ ವಿರುದ್ಧದ ದೂರುಗಳ ನಡುವೆ ಕಾಂಗ್ರೆಸ್ ಸಿಎಲ್‌ಪಿ ಸಭೆಗೆ ಕರೆ ನೀಡಿದ್ದರೂ ಸಹ ಈ ಪ್ರಕ್ಷುಬ್ಧತೆಯು ಇಂದು ಮುನ್ನೆಲೆಗೆ ಬಂದಿದೆ. ಕ್ಯಾಪ್ಟನ್ ಪಕ್ಷದಲ್ಲಿನ ತನ್ನ ಸ್ನೇಹಿತರಾದ ಕಮಲ್ ನಾಥ್ ಮತ್ತು ಮನೀಶ್ ತಿವಾರಿ ಅವರಿಗೆ "ಈ ರೀತಿಯ ಅವಮಾನದಿಂದ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ" ಎಂದು ಹೇಳಿದ ಕೆಲವು ಗಂಟೆಗಳ ನಂತರ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ವೀಕ್ಷಕರಾದ ದೆಹಲಿಯಿಂದ ಬಂದ ಅಜಯ್ ಮಾಕೆನ್ ಮತ್ತು ಮನೀಶ್ ತಿವಾರಿ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಚಂಡೀಗಢದ Chandigarh ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಅಷ್ಟು ಸುಲಭವಾಗಿ ರಾಜೀನಾಮೆ ನೀಡುವುದಿಲ್ಲ. ಅವರಿಂದ ರಾಜೀನಾಮೆ ಕೊಡುಸುವುದು ದೊಡ್ಡ ಸವಾಲು ಎಂದು ಭಾವಿಸಲಾಗಿತ್ತು. ಆದರೆ, ಆ ಎಲ್ಲ ನಿರೀಕ್ಷೆಗಳು ಅಮರೀಂದರ್ ಸಿಂಗ್ ರಾಜೀನಾಮೆಯೊಂದಿಗೆ ಹುಸಿಯಾಗಿವೆ.
    Published by:HR Ramesh
    First published: