ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿ; ಅಂತಾರಾಷ್ಟ್ರೀಯ ಸಮುದಾಯಕ್ಕೆ ನೊಬೆಲ್ ವಿಜೇತೆ ಮಲಾಲ ಒತ್ತಾಯ!

ಕಾಶ್ಮೀರದ ಸಮಸ್ಯೆ ನಾನು ಮಗುವಾಗಿದ್ದಾಗ, ನನ್ನ ಪೋಷಕರು ಮಗುವಾಗಿದ್ದಾಗಿಂದಲೂ ಬಗೆಹರಿಯದ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಅಲ್ಲಿನ ಜನ ನೆಮ್ಮದಿ ಮತ್ತು ಶಾಂತಿಯಿಂದ ಬದುಕಲು ಅನುವು ಮಾಡಿಕೊಡಬೇಕು ಎಂದು ಮಲಾಲ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.

MAshok Kumar | news18
Updated:August 8, 2019, 5:25 PM IST
ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿ; ಅಂತಾರಾಷ್ಟ್ರೀಯ ಸಮುದಾಯಕ್ಕೆ ನೊಬೆಲ್ ವಿಜೇತೆ ಮಲಾಲ ಒತ್ತಾಯ!
ಮಲಾಲ ಯೂಸಫ್ ಝಾಯಿ
  • News18
  • Last Updated: August 8, 2019, 5:25 PM IST
  • Share this:
ಜಮ್ಮು-ಕಾಶ್ಮೀರದಲ್ಲಿ ಶಾಂತಿಯನ್ನು ಸ್ಥಾಪಿಸಿ ಅಲ್ಲಿನ ಜನ ನೆಮ್ಮದಿಯ ಬದುಕು ನಡೆಸಲು ಅನುವು ಮಾಡಿಕೊಡಿ ಎಂದು ಪಾಕಿಸ್ತಾನದ ನೊಬೆಲ್ ಶಾಂತಿ ಪಾರಿತೋಷಕ ವಿಜೇತೆ ಮಲಾಲ ಯೂಸಫ್ ಝಾಯಿ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಕಲಂ 370ರ ಅಡಿಯಲ್ಲಿ ನೀಡಲಾಗುತ್ತಿದ್ದ ವಿಶೇಷ ಸವಲತ್ತನ್ನು ರದ್ದು ಮಾಡುವ ವಿಧೇಯಕವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿತ್ತು. ಇದೀಗ ಈ ಮಸೂದೆ ಅಂಕಿತ ಬಿದ್ದಂತಾಗಿದೆ. ಆದರೆ, ಈ ಮಸೂದೆಯನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ಕಣಿವೆ ರಾಜ್ಯದಲ್ಲಿ ಹಿಂಸಾಚಾರವೂ ಭುಗಿಲೆದ್ದಿದೆ ಈ ಹಿನ್ನೆಲೆಯಲ್ಲಿ ಕಾಶ್ಮೀರದ ಕುರಿತು ಟ್ವೀಟ್ ಮಾಡಿರುವ ಮಲಾಲ,

“ಕಾಶ್ಮೀರದ ಕುರಿತು ನನಗೆ ಕಾಳಜಿ ಇದೆ. ಏಕೆಂದರೆ ದಕ್ಷಿಣ ಏಷ್ಯಾ ನನ್ನ ಮನೆ. ಕಾಶ್ಮೀರಿಗಳೂ ಸೇರಿದಂತೆ 1.8 ಬಿಲಿಯನ್ ಜನರ ಜೊತೆ ನಾನು ಈ ಮನೆಯಲ್ಲಿ ವಾಸವಿದ್ದೇನೆ. ಮತ್ತು ನಾವೆಲ್ಲರೂ ಶಾಂತಿಯಿಂದ ಬದುಕುತ್ತೇವೆ ಎಂದು ನಂಬಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ : ಕಾಶ್ಮೀರದ ವಿಶೇಷ ಸವಲತ್ತಿಗೆ ಕತ್ತರಿ; ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ರದ್ದುಗೊಳಿಸಿದರೆ ಆಗುವ ಪರಿಣಾಮವೇನು? ಇಲ್ಲಿದೆ ಮಾಹಿತಿ

ಅಲ್ಲದೆ, ಕಾಶ್ಮೀರದ ಮಹಿಳೆಯರು ಹಾಗೂ ಮಕ್ಕಳ ಬಗ್ಗೆಯೂ ಕಾಳಜಿ ವಹಿಸಿರುವ ಮಲಾಲ, “ಕಾಶ್ಮೀರದ ಸಮಸ್ಯೆ ನಾನು ಮಗುವಾಗಿದ್ದಾಗ, ನನ್ನ ಪೋಷಕರು ಮಗುವಾಗಿದ್ದಾಗಿಂದಲೂ ಬಗೆಹರಿಯದ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಅಲ್ಲಿನ ಜನ ನೆಮ್ಮದಿ ಮತ್ತು ಶಾಂತಿಯಿಂದ ಬದುಕಲು ಅನುವು ಮಾಡಿಕೊಡಬೇಕು” ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಮೂಲದ ಮಲಾಲ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕಿಗಾಗಿ ಕಳೆದ 7 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ 2012ರಲ್ಲಿ ತಾಲಿಬಾನ್ ಉಗ್ರರಿಂದ ದಾಳಿಗೊಳಗಾಗಿದ್ದ ಈಕೆಗೆ ಶಾಂತಿಗಾಗಿ ನೋಬೆಲ್ ಪಾರಿತೋಷಕ ನೀಡಿ ಗೌರವಿಸಲಾಗಿತ್ತು.

ಇನ್ನೂ ಕಲಂ 370ನ್ನು ರದ್ದು ಮಾಡಿರುವ ಕೇಂದ್ರದ ಕ್ರಮ ಕಣಿವೆ ರಾಜ್ಯದಲ್ಲಿ ಬದುಕು ಕಟ್ಟಿಕೊಂಡಿರುವ ಸುಮಾರು 7 ಮಿಲಿಯನ್ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಅಲ್ಲದೆ, ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಈ ಕುರಿತು ಪ್ರಸ್ತಾಪಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಕೇಂದ್ರ ಸರ್ಕಾರ ಇಷ್ಟು ಸುಲಭವಾಗಿ 370ನೇ ವಿಧಿ ರದ್ದುಗೊಳಿಸಿದ್ದು ಹೇಗೆ?

First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading