HOME » NEWS » National-international » I AM READY TO REPAY 100 PRCENT MONEY TO BANK MALLYA ONCE AGAIN PROPOSED MAK

’ಶೇ.100ರಷ್ಟು ಹಣ ಮರುಪಾವತಿಗೆ ನಾನು ಸಿದ್ಧ ದಯವಿಟ್ಟು ಸ್ವೀಕರಿಸಿ’; ಮತ್ತೊಮ್ಮೆ ಪ್ರಸ್ತಾವನೆ ಮುಂದಿಟ್ಟ ಮಲ್ಯ

ದಯವಿಟ್ಟು ನನ್ನ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ಹೋಗಿ ಎಂದು ಉದ್ಯಮಿ ವಿಜಯ ಮಲ್ಯ ಈವರೆಗೆ ಹಲವಾರು ಬಾರಿ ಭಾರತ ಸರ್ಕಾರದ ಎದುರು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

MAshok Kumar | news18-kannada
Updated:May 14, 2020, 12:35 PM IST
’ಶೇ.100ರಷ್ಟು ಹಣ ಮರುಪಾವತಿಗೆ ನಾನು ಸಿದ್ಧ ದಯವಿಟ್ಟು ಸ್ವೀಕರಿಸಿ’; ಮತ್ತೊಮ್ಮೆ ಪ್ರಸ್ತಾವನೆ ಮುಂದಿಟ್ಟ ಮಲ್ಯ
ವಿಜಯ್ ಮಲ್ಯ
  • Share this:
ಲಂಡನ್ (ಮೇ 14); ಭಾರತದ ವಿವಿಧ ಬ್ಯಾಂಕುಗಳಲ್ಲಿ ನಾನು ಮಾಡಿರುವ ಶೇ.100 ರಷ್ಟು ಹಣವನ್ನು ಹಿಂದಿರುಗಿಸಲು ನಾನು ಸಿದ್ದನಿದ್ದೇನೆ ದಯವಿಟ್ಟು ಈ ಹಣವನ್ನು ಪಡೆದುಕೊಳ್ಳಿ ಹಾಗೂ ನನ್ನ ಮೇಲಿನ ಪ್ರಕರಣವನ್ನು ಕೈಬಿಡಿ ಎಂದು ಮದ್ಯದ ದೊರೆ ವಿಜಯಮಲ್ಯ ಮತ್ತೊಮ್ಮೆ ಭಾರತದ ಸರ್ಕಾರದ ಎದುರು ಮನವಿ ಸಲ್ಲಿಸಿದ್ದಾರೆ.

ಸುದೀರ್ಘ ಲಾಕ್‌ಡೌನ್‌ನಿಂದಾಗಿ ವಿವಿಧ ಸ್ತರದ ಭಾರತೀಯ ಜನ ಸಮೂಹ ಸಾಕಷ್ಟು ತೊಂದರೆಗೆ ಒಳಗಾಗಿದೆ. ದೇಶದ ಆರ್ಥಿಕತೆ ಕುಸಿದಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರ ನಿನ್ನೆ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು.

ಈ ಕುರಿತು ತನ್ನ ಟ್ವಿಟರ್ ಖಾತೆಯಲ್ಲಿ ಭಾರತ ಸರ್ಕಾರದ ನಡೆಯನ್ನು ಪ್ರಶಂಶಿಸಿರುವ ವಿಜಯ ಮಲ್ಯ, “ತಮ್ಮ ಬಾಕಿ ಹಣವನ್ನು ಮರುಪಾವತಿಸಲು ಪದೇ ಪದೇ ನಾನು ನೀಡುತ್ತಿರುವ ಕರೆಯನ್ನು ನಿರ್ಲಕ್ಷಿಸಲಾಗುತ್ತಿದೆ” ಎಂದು ವಿಷಾಧಿಸಿದ್ದಾರೆ.

“ಕೋವಿಡ್ 19 ಪರಿಹಾರ ಪ್ಯಾಕೇಜ್‌ಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಸರ್ಕಾರ ಬಯಸಿದಷ್ಟು ಕರೆನ್ಸಿಯನ್ನು ಮುದ್ರಿಸಬಹುದು. ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ ಶೇ.100 ರಷ್ಟು ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೆ?" ಎಂದು ಅವರು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

ಅಂದಾಜು 9,000 ಕೋಟಿ ರೂ.ಗಳ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾಗಿ ಭಾರತದಿಂದ ಲಂಡನ್‌ಗೆ ಪಲಾಯನ ಮಾಡಿ ತಲೆ ಮರೆಸಿಕೊಂಡಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮಾಲೀಕ ವಿಜಯ ಮಲ್ಯ, "ದಯವಿಟ್ಟು ನನ್ನ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ಹೋಗಿ" ಎಂದು ಈವರೆಗೆ ಹಲವಾರು ಬಾರಿ ಭಾರತ ಸರ್ಕಾರದ ಎದುರು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಬದಲಾಗಿ ಆರ್ಥಿಕ ಅಪರಾಧಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಅಲ್ಲಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ವಿಜಯ ಮಲ್ಯ ತನ್ನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಲಂಡನ್ ಸುಪ್ರೀಂ ಕೋರ್ಟ್‌‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಕುರಿತು ವ್ಯಾಜ್ಯ ಲಂಡನ್‌ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ವ್ಯಾಜ್ಯ ಮುಗಿಯುವವರೆಗೆ ಮಲ್ಯ ಭಾರತಕ್ಕೆ ಬರುವುದು ದೂರದ ಮಾತಾಗಿದೆ.

ಇದನ್ನೂ ಓದಿ : ಲಾಕ್ ಡೌನ್ ಸಡಿಲಿಕೆ ಹಿನ್ನಲೆ; ಮೇ 15ರಿಂದ ಆರಂಭವಾಗಲಿದೆ ಪಾಸ್‌ಪೋರ್ಟ್‌ ಸೇವೆ
First published: May 14, 2020, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading