HOME » NEWS » National-international » I AM READY TO REPAY 100 PERCENT KINGFISHER AIRLINES DUE VIJAY MALLYA REQUESTED GOVERNMENT AND BANKS SCT

ಕಿಂಗ್​ಫಿಶರ್ ಪಡೆದ ಸಂಪೂರ್ಣ ಸಾಲ ಮರುಪಾವತಿಗೆ ಸಿದ್ಧನಿದ್ದೇನೆ; ಮದ್ಯದ ದೊರೆ ವಿಜಯ್ ಮಲ್ಯ ಪುನರುಚ್ಛಾರ

ಭಾರತದ ಬ್ಯಾಂಕ್​ಗಳಿಂದ 9,000 ಕೋಟಿ ರೂ. ಸಾಲ ಪಡೆದು, ಆ ಹಣವನ್ನು ತೀರಿಸಲಾಗದೆ ಬೇರೆ ದೇಶಕ್ಕೆ ಪರಾರಿಯಾಗಿದ್ದರು ವಿಜಯ್ ಮಲ್ಯ. ಈ ಮೊದಲು ಕೂಡ ತಾನು ಪಡೆದ ಸಾಲವನ್ನು ಮರುಪಾವತಿ ಮಾಡುವ ಭರವಸೆ ನೀಡಿದ್ದರು.

Sushma Chakre | news18-kannada
Updated:March 31, 2020, 11:55 AM IST
ಕಿಂಗ್​ಫಿಶರ್ ಪಡೆದ ಸಂಪೂರ್ಣ ಸಾಲ ಮರುಪಾವತಿಗೆ ಸಿದ್ಧನಿದ್ದೇನೆ; ಮದ್ಯದ ದೊರೆ ವಿಜಯ್ ಮಲ್ಯ ಪುನರುಚ್ಛಾರ
ವಿಜಯ್ ಮಲ್ಯ
  • Share this:
ನವದೆಹಲಿ (ಮಾ. 31): ಭಾರತದ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂ. ಮೋಸ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದ ಆರ್ಥಿಕ ಅಪರಾಧಿ, ಮದ್ಯದ ದೊರೆ ವಿಜಯ್ ಮಲ್ಯ ತಾವು ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಇಂತಹ ಸಂದಿಗ್ಧ ಕಾಲದಲ್ಲಿ ಈ ಹಣ ನಿಮಗೆ ಉಪಯುಕ್ತವಾಗಬಹುದು. ಹೀಗಾಗಿ ತಮ್ಮ ಸಾಲದ ಮೊತ್ತವನ್ನು ಸ್ವೀಕರಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಟ್ವಿಟ್ಟರ್​ನಲ್ಲಿ ಮನವಿ ಮಾಡಿದ್ದಾರೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ಕಂಪನಿಯ ವಿಜಯ್ ಮಲ್ಯ ತಾನು ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ವಾಪಾಸ್ ನೀಡಲು ಸಿದ್ಧನಿದ್ದೇನೆ ಎಂದು ಪುನರುಚ್ಛರಿಸಿದ್ದಾರೆ. ಹಣವನ್ನು ಪಾವತಿಸಲು ಪದೇಪದೆ ಪ್ರಸ್ತಾಪಿಸಿದರೂ ಬ್ಯಾಂಕುಗಳು ಹಣವನ್ನು ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಇಡಿ (ಜಾರಿ ನಿರ್ದೇಶನಾಲಯ) ಕೂಡ ಮುಟ್ಟುಗೋಲು ಹಾಕಿಕೊಂಡಿರುವ ನನ್ನ ಆಸ್ತಿಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿಲ್ಲ. ಈಗಲಾದರೂ ವಿತ್ತ ಸಚಿವರು ನನ್ನ ಮನವಿಯನ್ನು ಸ್ವೀಕರಿಸಿ, ಸಾಲ ಮರುಪಾವತಿಗೆ ಅವಕಾಶ ನೀಡಬೇಕೆಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾವಿನ ಭೀತಿ ಹೆಚ್ಚಿಸಿದ ದೆಹಲಿ ಧಾರ್ಮಿಕ ಸಭೆ; ಕಾರ್ಯಕ್ರಮದಲ್ಲಿದ್ದ 10 ಜನ ಕೊರೋನಾಗೆ ಬಲಿ, 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲುಇಡೀ ಭಾರತದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿದೆ. ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ನನ್ನ ಕಂಪನಿಗಳ ಎಲ್ಲ ಕಾರ್ಯಗಳೂ ಸ್ಥಗಿತಗೊಂಡಿವೆ. ದೇಶದ ಇಂದಿನ ಸ್ಥಿತಿ ಬಗ್ಗೆ ನನಗೆ ಮರುಕವಿದೆ. ಈಗಲಾದರೂ ಸಚಿವೆ ನಿರ್ಮಲಾ ಸೀತಾರಾಮನ್ ನನ್ನ ಮನವಿಯನ್ನು ಆಲಿಸುತ್ತಾರೆ ಎಂಬ ನಂಬಿಕೆ ನನಗಿದೆ. ಕೆಎಫ್‌ಎಯಿಂದ ಸಾಲ ಪಡೆದ ಮೊತ್ತದ ಶೇ. 100ರಷ್ಟು ಹಣವನ್ನು ಮರುಪಾವತಿ ಮಾಡಲು ನಾನು ಸಿದ್ಧನಿದ್ದೇನೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ವಿಜಯ್ ಮಲ್ಯ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಗಾಗಿ ಭಾರತದ ವಿವಿಧ ಬ್ಯಾಂಕುಗಳಿಂದ ವಿಜಯ ಮಲ್ಯ ಸುಮಾರು 9,000 ಕೋಟಿ ರೂ. ಸಾಲ ಪಡೆದಿದ್ದರು. ಅಲ್ಲದೆ, ಆ ಹಣವನ್ನು ತೀರಿಸಲಾಗದೆ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ಭಾರತ ಸರ್ಕಾರ ಅವರನ್ನು ವಾಪಸ್‌ ದೇಶಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿದ ಬೆನ್ನಿಗೆ ವಿಜಯ ಮಲ್ಯ ತಾನು ಸಾಲವಾಗಿ ಪಡೆದ ಸಂಪೂರ್ಣ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡಲು ಸಿದ್ದನಿದ್ದೇನೆ ಎಂದು ಕಳೆದ ಒಂದು ವರ್ಷದಿಂದ ಸತತವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಈ ಮನವಿಯನ್ನು ಈವರೆಗೆ ಸ್ವೀಕರಿಸಿಲ್ಲ. ಇದಕ್ಕೆ ನಿಖರ ಕಾರಣವನ್ನೂ ತಿಳಿಸಿಲ್ಲ.

ಇದನ್ನೂ ಓದಿ: ಕೊರೋನಾ ವೈರಸ್​ಗೆ ಅಮೆರಿಕದಲ್ಲಿ ಒಂದೇ ದಿನ 500 ಸಾವು; ಇಟಲಿ, ಸ್ಪೇನ್​, ಜರ್ಮನಿ ಸ್ಥಿತಿ ಹೀನಾಯ
First published: March 31, 2020, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading