ಆರ್ಥಿಕತೆ ಬಗ್ಗೆ ಮಾತ್ರ ನಾನು ಚಿಂತೆ ಮಾಡುತ್ತೇನೆ; ತಿಹಾರ್​ ಜೈಲಿಗೆ ಹೋಗುವ ಮುನ್ನ ಮತ್ತೊಮ್ಮೆ ಸರ್ಕಾರ ಅಣಕಿಸಿದ ಚಿದಂಬರಂ

ಕಳೆದ ಮಂಗಳವಾರ ದೆಹಲಿ ನ್ಯಾಯಾಲಯ ಸಿಬಿಐ ಕಸ್ಟಡಿ ಅವಧಿಯನ್ನು ವಿಸ್ತರಿಸಿದಾಗ ಕೋರ್ಟ್​ ಹಾಲ್​ನಿಂದ ಹೊರಬಂದ ಚಿದಂಬರಂ ಆರ್ಥಿಕತೆ ಕುಸಿತದ ಬಗ್ಗೆ ಕೇಂದ್ರ ಸರ್ಕಾರವನ್ನು ಅಣಕಿಸಿದ್ದರು.

HR Ramesh | news18-kannada
Updated:September 6, 2019, 9:53 AM IST
ಆರ್ಥಿಕತೆ ಬಗ್ಗೆ ಮಾತ್ರ ನಾನು ಚಿಂತೆ ಮಾಡುತ್ತೇನೆ; ತಿಹಾರ್​ ಜೈಲಿಗೆ ಹೋಗುವ ಮುನ್ನ ಮತ್ತೊಮ್ಮೆ ಸರ್ಕಾರ ಅಣಕಿಸಿದ ಚಿದಂಬರಂ
ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯುತ್ತಿರುವುದು.
  • Share this:
ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಗುರುವಾರ ಸಿಬಿಐ ವಿಶೇಷ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತಿಹಾರ್​ ಜೈಲಿಗೆ ಕಳುಹಿಸಿದೆ. ಕೋರ್ಟ್​ ಆವರಣದಿಂದ ಅವರನ್ನು ಕರೆದೊಯ್ಯುವಾಗ  ಪ್ರತಿಕ್ರಿಯೆ ನೀಡಿದ ಚಿದಂಬರಂ ಅವರು, ನನಗೆ ಚಿಂತೆಯಿರುವುದು ದೇಶದ ಆರ್ಥಿಕತೆ ಬಗ್ಗೆ ಮಾತ್ರ ಎಂದು ಆರ್ಥಿಕತೆ ಕುಸಿತದ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದರು.

ನನಗೆ ಚಿಂತೆ ಇರುವುದು ದೇಶದ ಆರ್ಥಿಕತೆ ಬಗ್ಗೆ ಮಾತ್ರ ಎಂದು ಸಿಬಿಐ ನ್ಯಾಯಾಲಯ ಆದೇಶ ನೀಡಿದ ಬಳಿಕ ಅವರನ್ನು ಕೋರ್ಟ್​ ಹಾಲ್​ನಿಂದ ತಿಹಾರ್​ ಜೈಲಿಗೆ ಕರೆದೊಯ್ಯುವಾಗ ಚಿದಂಬರಂ ಹೇಳುವ ಮೂಲಕ ಕೇಂದ್ರ ಸರ್ಕಾರದ ನೀತಿಗಳಿಂದ ದೇಶದ ಆರ್ಥಿಕತೆ ಕುಸಿದಿರುವುದನ್ನು ಟೀಕೆ ಮಾಡಿದರು.

ಇದನ್ನು ಓದಿ: ಪಿ.ಚಿದಂಬರಂ ನ್ಯಾಯಾಂಗ ಬಂಧನಕ್ಕೆ ಕೋರ್ಟ್​ ಆದೇಶ; ತಿಹಾರ್ ಜೈಲಿಗೆ ಕೇಂದ್ರದ ಮಾಜಿ ಸಚಿವ
 


ಝಡ್​ ಸೆಕ್ಯುರಿಟಿ ಹೊಂದಿರುವ ಚಿದಂಬರಂ ಅವರಿಗೆ ಪ್ರತ್ಯೇಕ ಸೆಲ್​ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಅದರಂತೆ ಸಾಲಿಸಿಟರ್​ ಜನರಲ್​ ತುಷಾರ್​ ಮೇಹ್ತಾ ಅವರು, ಜೈಲಿನಲ್ಲಿ ಚಿದಂಬರಂ ಅವರಿಗೆ ಸಾಕಷ್ಟು ಭದ್ರತೆ ಒದಗಿಸುವ ಭರವಸೆಯನ್ನು ನೀಡಿದರು.


First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading