ನಾನು ಅಸ್ಸಾಂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ; ಮಾಜಿ ಸಿಜೆಐ ರಂಜನ್ ಗೊಗೊಯ್ ಸ್ಪಷ್ಟನೆ

ಮೂಲಗಳ ಪ್ರಕಾರ ನಾನು ಕೇಳಿದಂತೆ, ರಂಜನ್ ಗೊಗೊಯ್ ಅವರ ಹೆಸರು ಬಿಜೆಪಿ ಮುಖ್ಯಮಂತ್ರಿಗಳ ಅಭ್ಯರ್ಥಿ ಪಟ್ಟಿಯಲ್ಲಿ ಇದೆ.  ಮುಂದೆ ಅವರು ಅಸ್ಸಾಂ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಅನುಮಾನ ಇದೆ ಎಂದು ತರುಣ್ ಗೊಗೊಯ್ ಅವರು ಇಂದು ಗುವಾಹಟಿಯಲ್ಲಿ ಸುದ್ದಿಗಾರರಿಗೆ ಹೇಳಿದ್ದರು.

ಸುಪ್ರೀಂಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್

ಸುಪ್ರೀಂಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್

  • Share this:
    ನವದೆಹಲಿ; ಮುಂದಿನ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸುಪ್ರೀಂಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಬಿಜೆಪಿಯ ಸಿಎಂ ಅಭ್ಯರ್ಥಿ ಎಂಬ ಊಹಾಪೋಹಗಳನ್ನು ಸ್ವತಃ ಗೊಗೊಯ್ ಅವರೇ ತಳ್ಳಿ ಹಾಕಿದ್ದಾರೆ. ಈ ಸಂಬಂಧ ಇಂಡಿಯಾ ಟುಡೇ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ರಾಜಕಾರಣಿ ಅಲ್ಲ. ನನಗೆ ಆ ಉದ್ದೇಶವೂ ಇಲ್ಲ. ಅಂತಹ ಸಾಧ್ಯತೆಗಳು ಇಲ್ಲ ಎಂದು ರಾಜ್ಯಸಭೆ ನಾಮನಿರ್ದೇಶಿತ ಸದಸ್ಯರಾಗಿರುವ ರಂಜನ್ ಗೊಗೊಯ್ ಅವರು ಹೇಳಿದ್ದಾರೆ.

    ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವುದಕ್ಕೂ ಮತ್ತು ರಾಜಕೀಯ ಪಕ್ಷದಿಂದ ಚುನಾಯಿತನಾಗುವುದರ ನಡುವಿನ ವ್ಯತ್ಯಾಸವನ್ನು ಜನರು ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರ. ನಾನು ಪ್ರಜ್ಞಾಪೂರ್ವಕವಾಗಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಏಕೆಂದರೆ ಅದು ನನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡು ನನಗೆ ಆಸಕ್ತಿಯ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತದೆ. ಇದು ನನ್ನನ್ನು ರಾಜಕಾರಣಿಯಾಗಿ ಮಾಡುತ್ತದೆಯೇ? ಎಂದು ರಂಜನ್ ಗೊಗೊಯ್ ಪ್ರಶ್ನಿಸಿದ್ದಾರೆ.

    ಇದನ್ನು ಓದಿ: ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಸೋನಿಯಾ ಗಾಂಧಿ?

    ಮುಂದಿನ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ರಂಜನ್ ಗೊಗೊಯ್ ಅವರು ಬಿಜೆಪಿ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ತರುಣ್ ಗೊಗೊಯ್ ಅವರು ಹೇಳಿದ್ದರು.



    ಮೂಲಗಳ ಪ್ರಕಾರ ನಾನು ಕೇಳಿದಂತೆ, ರಂಜನ್ ಗೊಗೊಯ್ ಅವರ ಹೆಸರು ಬಿಜೆಪಿ ಮುಖ್ಯಮಂತ್ರಿಗಳ ಅಭ್ಯರ್ಥಿ ಪಟ್ಟಿಯಲ್ಲಿ ಇದೆ.  ಮುಂದೆ ಅವರು ಅಸ್ಸಾಂ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಅನುಮಾನ ಇದೆ ಎಂದು ತರುಣ್ ಗೊಗೊಯ್ ಅವರು ಇಂದು ಗುವಾಹಟಿಯಲ್ಲಿ ಸುದ್ದಿಗಾರರಿಗೆ ಹೇಳಿದ್ದರು.
    Published by:HR Ramesh
    First published: