ನಾನು ಫುಲ್​ ಟೈಂ ರಾಜಕಾರಣಿಯೂ ಅಲ್ಲ, ರಾಜಕೀಯದ ಬಗ್ಗೆ ಏನನ್ನೂ ಮಾತನಾಡಲ್ಲ: ರಜಿನಿಕಾಂತ್ ಮಾರ್ಮಿಕ ನುಡಿ


Updated:March 14, 2018, 1:33 AM IST
ನಾನು ಫುಲ್​ ಟೈಂ ರಾಜಕಾರಣಿಯೂ ಅಲ್ಲ, ರಾಜಕೀಯದ ಬಗ್ಗೆ ಏನನ್ನೂ ಮಾತನಾಡಲ್ಲ: ರಜಿನಿಕಾಂತ್ ಮಾರ್ಮಿಕ ನುಡಿ

Updated: March 14, 2018, 1:33 AM IST
-ನ್ಯೂಸ್ 18
ನವದೆಹಲಿ(ಮಾ.13): ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಣೆ ಮಾಡಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಹಿಮಾಲಯದ ತಪ್ಪಲಲ್ಲಿ ತಪಸ್ಸು ಮಾಡುತ್ತಿದ್ದಾರೆ.

ಹೃಷಿಕೇಶದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿರುವ ರಜಿನಿಕಾಂತ್​, ನಾನು ಇನ್ನೂ ರಾಜಕೀಯ ಪಕ್ಷ ಘೋಷಣೆ ಮಾಡಿಲ್ಲ.. ನಾನು ಫುಲ್​ ಟೈಂ ರಾಜಕಾರಣಿಯೂ ಅಲ್ಲ.. ಹಾಗಾಗಿ, ನಾನು ರಾಜಕೀಯದ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಈ ಬಗ್ಗೆ ಏನನ್ನೂ ಕೇಳಬೇಡಿ ಎಂದಿದ್ದಾರೆ.

ಎರಡು ವಾರಗಳ ಹಿಮಾಲಯ ವಾಸದಲ್ಲಿರುವ ರಜಿನಿಕಾಂತ್​, ಹೃಷಿಕೇಶದ ದಯಾನಂದ ಸರಸ್ವತಿ ಆಶ್ರಮದಲ್ಲಿ ಮಾತನಾಡಿದ್ದು, ರಾಜಕೀಯದ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ.

ತಮಿಳುನಾಡಿನಲ್ಲಿ ನೂತನ ಪಕ್ಷ ಘೋಷಣೆ ಮಾಡಿರುವ ನಟ ಕಮಲ್​ ಹಾಸನ್'ಗೆ, ಕಾವೇರಿ ವಿಚಾರವಾಗಿ ರಜಿನಿಕಾಂತ್​ ಮೌನವಹಿಸಿರುವ ಬಗ್ಗೆ ಪ್ರಶ್ನಿಸಿದಾಗ, ರಜಿನಿ ಕಾವೇರಿ ವಿಚಾರ ಒಂದೇ ಅಲ್ಲ ಹಲವು ವಿಚಾರಗಳಲ್ಲಿ ಮೌನವಹಿಸಿದ್ದಾರೆ ಎಂದಿದ್ದರು. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ರಜಿನಿಕಾಂತ್​ ಈ ರೀತಿ ಉತ್ತರ ಕೊಟ್ಟಿದ್ದಾರೆ.

ತಮಿಳುನಾಡಿಗೆ ನಾನೇ ನಾಯಕ ಎಂದಿದ್ದ ತಲೈವಾ: ಕೆಲ ದಿನಗಳ ಹಿಂದಷ್ಟೇ ಚೆನ್ನೈನಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನ ಉದ್ದೇಶಿಸಿ ಮಾತನಾಡಿದ ರಜಿನಿಕಾಂತ್, ಜಯಲಲಿತಾ ಇನ್ನಿಲ್ಲ, ಕರುಣಾನಿಧಿ ಅನಾರೋಗ್ಯಪೀಡಿತರಾಗಿದ್ದಾರೆ. ತಮಿಳುನಾಡಿಗೆ ಒಬ್ಬ ನಾಯಕನ ಅಗತ್ಯವಿದೆ. ನಾನು ಬರುತ್ತೇನೆ. ಆ ಸ್ಥಾನ ತುಂಬುತ್ತೇನೆ. ದೇವರು ನನ್ನ ಜೊತೆಗಿದ್ಧಾನೆ ಎಂದು ಹೇಳಿದ್ದರು.

ರಾಜಕೀಯ ಪಯಣ ಸುಲಭವಲ್ಲವೆಂದು ನನಗೆ ತಿಳಿದಿದೆ. ರಾಜಕೀಯದ ತುಂಬಾ ತೊಡಕುಗಳಿರುತ್ತವೆ. ಎಂಜಿಆರ್ ರೀತಿ ಸಾಮಾನ್ಯ ಜನರಿಗಾಗಿ ಉತ್ತಮ ಆಡಳಿತ ನೀಡಬಲ್ಲೆ ಎಂಬ ನಂಬಿಕೆ ನನಗಿದೆ ಎಂದಿದ್ದರು. ಆದರೆ, ಈ ಹೇಳಿಕೆ ನೀಡಿ ವಾರ ಕಳೆಯುವಷ್ಟರಲ್ಲಿ ರಜಿನಿಕಾಂತ್ ಮಾತಲ್ಲಿ ಬದಲಾವಣೆ ಕಂಡುಬಂದಿರುವುದು ಕುತೂಹಲಕ್ಕೆ ಎಡೆಮಾಡಿದೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ