Narendra Modi: ವಿಶ್ವಕ್ಕೆ ಭಾರತೀಯ ಶಿಕ್ಷಕರ ಕೊಡುಗೆ ಅಪಾರ! ಪ್ರಧಾನಿ ಮೋದಿ ಹೆಮ್ಮೆಯ ಮಾತು

ಗುಜರಾತ್​ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.

ಗುಜರಾತ್​ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.

ಗುಜರಾತ್​ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.

  • Share this:

ಗಾಂಧಿನಗರ: ಕಲಿಕೆಯ ಎಲ್ಲಾ ಅಂಶಗಳಲ್ಲಿ ಮತ್ತು ತಂತ್ರಜ್ಞಾನದ (Technology) ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಶಿಕ್ಷಕರ (Teacher) ಪಾತ್ರ ಅತಿ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು. ಹೊಸ ಶಿಕ್ಷಣ ನೀತಿಯಲ್ಲೂ (New Education Policy) ಈ ಅಂಶವಿದ್ದು, ಅದನ್ನು ದೇಶಾದ್ಯಂತ ಜಾರಿಗೆ ತಂದಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಮೋದಿ ಹೇಳಿದರು. ಇದೇ ಸಂದರ್ಭದಲ್ಲಿ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲಾ ಪರೀಕ್ಷಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಯುವಕರ ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದ ಬಗ್ಗೆ ನನಗೆ ಹೆಮ್ಮೆ ಇದೆ. ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಯುವಕರ ಪೋಷಕರು ಮತ್ತು ಶಿಕ್ಷಕರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.


ಗುಜರಾತ್​ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು. ಅವರು, ಗುಜರಾತ್‌ನಲ್ಲಿ ಡ್ರಾಪ್ ಔಟ್ ಪ್ರಮಾಣವು ಶೇಕಡಾ ಮೂರಕ್ಕಿಂತ ಕಡಿಮೆಯಾಗಿದೆ ಎಂದ ಮೋದಿ ಹೊಸ ಶಿಕ್ಷಣ ನೀತಿಗಳನ್ನು ರೂಪಿಸುವಲ್ಲಿ ಶಿಕ್ಷಕರು ಕೇಂದ್ರ ಸರ್ಕಾರಕ್ಕೆ ನೆರವಾಗಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: Cleaning Awareness: ಸ್ವಚ್ಛತಾ ಕಿ ಪಾಠಶಾಲಾ - ನರೌರ್‌ನ ಮುಖ್ಯಾಂಶಗಳು


ತಾನೂ ಜೀವಮಾನದ ವಿದ್ಯಾರ್ಥಿ ಎಂದ ಮೋದಿ


ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ತನ್ನನ್ನು ತಾನು ಜೀವಮಾನವಿಡೀ ವಿದ್ಯಾರ್ಥಿ ಎಂದು ಕರೆದುಕೊಂಡರು. ಪುರುಷೋತ್ತಮ್ ರೂಪಾಲಾ ತನ್ನನ್ನು ತಾನು ಜೀವಮಾನದ ಶಿಕ್ಷಕ ಎಂದು ಪರಿಗಣಿಸುವಂತೆಯೇ, ನಾನು ನನ್ನನ್ನು ಜೀವಿತಾವಧಿಯ ವಿದ್ಯಾರ್ಥಿ ಎಂದು ಪರಿಗಣಿಸುತ್ತೇನೆ ಎಂದು ಹೇಳಿದರು.


ಶಾಲೆಗಳ ಸ್ಥಳ ಮತ್ತು ಅವುಗಳಲ್ಲಿ ಮಾಡಿದ ಸುಧಾರಣೆಗಳ ಕುರಿತು ಮಾತನಾಡಿದ ಪಿಎ ಮೋದಿ, ಶೌಚಾಲಯಗಳ ಕೊರತೆಯಿಂದ ಹೆಣ್ಣುಮಕ್ಕಳು ಶಾಲೆಯನ್ನು ಬಿಡುತ್ತಿದ್ದರು, ಅದರ ವಿರುದ್ಧ ನಾವು ಅಭಿಯಾನವನ್ನು ನಡೆಸಿದ್ದೆವು. ಇದರಿಂದ ಉತ್ತಮ ಫಲಿತಾಂಶವನ್ನು ನೋಡಿದ್ದೇವೆ. ಗುಜರಾತಿನ ಬುಡಕಟ್ಟು ಪ್ರದೇಶದಲ್ಲೂ ವಿಜ್ಞಾನ ಕಲಿಕೆ ಕಡಿಮೆ ಇತ್ತು. ಇದೀಗ ಅಲ್ಲಿನ ಮಕ್ಕಳು ವೈದ್ಯರಾಗಿ ಹೊರಹೊಮ್ಮುತ್ತಿದ್ದಾರೆ ಎಂದರು.
ವಿಶ್ವದಲ್ಲಿ ಭಾರತೀಯ ಶಿಕ್ಷಕರ ಕೊಡುಗೆ ಅಪಾರ


ನನ್ನ ಮೊದಲ ವಿದೇಶ ಪ್ರವಾಸವು ಭೂತಾನ್‌ಗೆ ಆಗಿತ್ತು. ಅಲ್ಲಿರುವ ನನ್ನ ಪೀಳಿಗೆಯ ಜನರು ತಾವೂ ಭಾರತೀಯ ಶಿಕ್ಷಕರಿಂದ ಕಲಿಸಲ್ಪಟ್ಟಿದ್ದೇವೆ ಎಂದು ಅಲ್ಲಿನ ಮುಖ್ಯಸ್ಥರಿಗೆ ಅವರು ಗುರುಗಳು ಹೇಳಿದ್ದಾಗಿ ನನಗೆ ತಿಳಿಸಿದ್ದರು. ಸೌದಿ ಅರೇಬಿಯಾ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಅಲ್ಲಿ ರಾಜನೊಂದಿಗೆ ಕುಳಿತಾಗ ಮಾತನಾಡುವಾಗ, ಅವರೂ ಕೂಡ ತಮ್ಮ ಬಾಲ್ಯದ ಗುರುಗಳು ನಿಮ್ಮ ದೇಶ ಮತ್ತು ಗುಜರಾತ್‌ನವರು ಎಂದು ಹೇಳಿದ್ದರು ಎಂದು ಸ್ಮರಿಸಿದರು.


WHO ಮುಖ್ಯಸ್ಥರಿಗೆ ಗುಜರಾತಿ ಹಸರು ಉಡುಗೊರೆ


ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಗ್ರಾಬ್ರೆಸಿಯಸ್ ಅವರ ಬಗ್ಗೆ ಮಾತನಾಡಿದ ಮೋದಿ, ನಾನು ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದೇನೆ. ಅವರು ಬಾಲ್ಯದಿಂದಲೂ ಭಾರತೀಯ ಶಿಕ್ಷಕರ ಕೊಡುಗೆ ನನ್ನ ಜೀವನವನ್ನು ನಿರ್ಮಿಸಲು ಪ್ರಮುಖ ಪಾತ್ರ ವಹಿಸಿದೆ, ಈ ಮಾತನ್ನು ಎಷ್ಟು ಸಾರಿಯಾದರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.


ಅಲ್ಲದೆ ಅವರು ಜಾಮ್‌ನಗರಕ್ಕೆ ಬಂದಾಗ ಟೆಡ್ರೊಸ್​ ಸಾರ್ವಜನಿಕವಾಗಿ ನನ್ನಿಂದ ಉಡುಗೊರೆಗೆ ಬೇಡಿಕೆಯಿಟ್ಟಿದ್ದಾರೆ. ಅದೇನೆಂದರೆ ಅವರು ತಮಗೆ ಭಾರತೀಯ ಹೆಸರನ್ನು ಹಿಡಬೇಕೆಂದು ಕೇಳಿಕೊಂಡಿದ್ದರು. ನಾನು ತುಳಸಿಭಾಯ್ ಎಂದು ಹೆಸರಿಸಿಟ್ಟಿದ್ದಾಗಿ ತಿಳಿಸಿದ್ದಾರೆ.


ಶಿಕ್ಷಕರಿಗೆ ವಿದ್ಯಾರ್ಥಿಗಳು ಸವಾಲಾಗುತ್ತಿದ್ದಾರೆ


ಹಿಂದಿನ ಶಿಕ್ಷಕರಿಗೆ ಸಂಪನ್ಮೂಲಗಳ ಕೊರತೆ, ಮೂಲಸೌಕರ್ಯಗಳಿತ್ತು. ಜೊತೆಗೆ ವಿದ್ಯಾರ್ಥಿಗಳಿಂದ ಯಾವುದೇ ವಿಶೇಷ ಸವಾಲು ಇರುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ, ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳ ಸಮಸ್ಯೆಯನ್ನು ನಿವಾರಿಸಲಾಗುತ್ತಿದೆ. ಇಂದಿನ ವಿದ್ಯಾರ್ಥಿಗಳ ಆ ಕುತೂಹಲವು ಶಿಕ್ಷಕರಿಗೆ ಸವಾಲಾಗಿ ಪರಿಣಮಿಸುತ್ತಿದೆ. ಏಕೆಂದರೆ ಅವರು ಪುಸ್ತಕದಲ್ಲಿರುವುದನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಹಾಗಾಗಿ ಇಂದು ಶಿಕ್ಷಕರು ಪ್ರತಿದಿನ ಹೊಸತನವನ್ನು ಅನುಭವಿಸುವಂತಾಗಿದೆ ಎಂದು ಹೇಳಿದರು.


ಮಾರ್ಗದರ್ಶಕರಾಗಲು ಕರೆ

top videos


    ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರನ್ನಾಗುವಂತೆ ಪ್ರಧಾನಿ ಮೋದಿ ಶಿಕ್ಷಕರಿಗೆ ಕರೆ ನೀಡಿದರು. ಪ್ರಸ್ತುತ Google ನಿಂದ ಯಾವ ಡೇಟಾವನ್ನು ಪಡೆಯಬಹುದು. ತಂತ್ರಜ್ಞಾನವು ಮಾಹಿತಿಯನ್ನು ಒದಗಿಸಬಹುದು ಆದರೆ ಒಬ್ಬ ಶಿಕ್ಷಕ ಮಾತ್ರ ಸರಿಯಾದ ದೃಷ್ಟಿಕೋನದಲ್ಲಿ ತೋರಿಸುತ್ತಾರೆ. ಯಾವ ಮಾಹಿತಿಯು ಉಪಯುಕ್ತ ಮತ್ತು ಯಾವುದು ಅಲ್ಲ ಎಂಬುದನ್ನು ಗುರುಗಳು ಮಾತ್ರ ವಿದ್ಯಾರ್ಥಿಗಳಿಗೆ ಚೆನ್ನಾಗಿ ಹೇಳಿಕೊಡಬಹುದು ಎಂದು ತಿಳಿಸಿದ್ದಾರೆ.

    First published: