HOME » NEWS » National-international » I AM HINDU STOP USING RELIGION AS COVER FOR FASCISM MEENA HARRIS ZP

ನಾನು ಕೂಡ ಹಿಂದೂ, ನೀವು ಫ್ಯಾಸಿಸಂ ಮರೆಮಾಚಲು ಧರ್ಮವನ್ನು ಬಳಸಬೇಡಿ: ಮೀನಾ ಹ್ಯಾರಿಸ್

Meena Harris: ನಿಮ್ಮ ಹಿಂದೂಫೋಬಿಯಾವನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಹಿಂದೂಗಳನ್ನು ದ್ವೇಷಿಸುತ್ತೀರಿ ಏಕೆಂದರೆ ಅವರು ನಿಮ್ಮನ್ನು ವಿರೋಧಿಸುತ್ತಾರೆ.

news18-kannada
Updated:February 7, 2021, 6:21 PM IST
ನಾನು ಕೂಡ ಹಿಂದೂ, ನೀವು ಫ್ಯಾಸಿಸಂ ಮರೆಮಾಚಲು ಧರ್ಮವನ್ನು ಬಳಸಬೇಡಿ: ಮೀನಾ ಹ್ಯಾರಿಸ್
Meena Harris
  • Share this:
ನವದೆಹಲಿ: ಕೃಷಿ ಕಾಯ್ದೆ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೊಸೆ ಮೀನಾ ಹ್ಯಾರಿಸ್ ಅವರು ಬೆಂಬಲ ಸೂಚಿಸಿದ್ದರು. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಈ ನಡುವೆ ಮೀನಾ ಅವರನ್ನು ಹಿಂದೂ ವಿರೋಧಿ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀನಾ ಹ್ಯಾರಿಸ್, ನಾನು ಕೂಡ ಹಿಂದೂ. ನೀವು ಫ್ಯಾಸಿಸಂ ಅನ್ನು ಮರೆಮಾಚಲು ಹಿಂದೂ ಧರ್ಮವನ್ನು ಬಳಸುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೃಷಿ ಕಾಯ್ದೆ ವಿರುದ್ಧ ಭಾರತದ ನಾನಾ ಭಾಗದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕೆಲ ದಿನಗಳಷ್ಟೇ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದರು. ಹೀಗೆ ಬೆಂಬಲ ಸೂಚಿಸಿದವರಲ್ಲಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೊಸೆ ಮೀನಾ ಹ್ಯಾರಿಸ್ ಕೂಡ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ರೈತರ ಪರ ಟ್ವೀಟ್ ಮಾಡಿದ್ದ ಮೀನಾ ಹ್ಯಾರಿಸ್ ಅವರ ವಿರುದ್ಧ ಅನೇಕರು ವೈಯುಕ್ತಿಕ ನಿಂದನೆ ಮಾಡಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಮೀನಾ ಹ್ಯಾರಿಸ್, ಭಾರತದಲ್ಲಿನ ರೈತ ಆಂದೋಲನಕ್ಕೆ ನನ್ನ ಬೆಂಬಲವಿದೆ. ಸೋಷಿಯಲ್ ಮೀಡಿಯಾ ದಾಳಿಗಳಿಗೆ ತಾನು ತಲೆಬಾಗುವುದಿಲ್ಲ ಎಂದು ಮೀನಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ಟ್ವಿಟರ್​ನಲ್ಲಿ ಮೀನಾ ಅವರನ್ನು ವ್ಯಕ್ತಿಯೊಬ್ಬ 'ಹಿಂದೂಫೋಬಿಕ್' ಎಂದು ಜರಿದಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮೀನಾ ಹ್ಯಾರಿಸ್, 'ನಿಮ್ಮ ಹಿಂದೂಫೋಬಿಯಾವನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಹಿಂದೂಗಳನ್ನು ದ್ವೇಷಿಸುತ್ತೀರಿ ಏಕೆಂದರೆ ಅವರು ನಿಮ್ಮನ್ನು ವಿರೋಧಿಸುತ್ತಾರೆ. ನಾನು ಕೂಡ ಹಿಂದೂ. ಫ್ಯಾಸಿಸಂ ಅನ್ನು ಮರೆಮಾಡಲು ಧರ್ಮವನ್ನು ಬಳಸುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ'ನಾನು ಯಾರಿಗೂ ಹೆದರುವುದಿಲ್ಲ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವು ದಾಳಿಗೆ ಬಲಿಯಾಗಿದೆ. ಭಾರತದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮತ್ತು ರೈತರ ವಿರುದ್ಧದ ಹಿಂಸಾಚಾರದ ವಿರುದ್ಧ ನಾವೆಲ್ಲರೂ ಪ್ರತಿಭಟಿಸಬೇಕು ಎಂದು ಮೀನಾ ಹ್ಯಾರಿಸ್ ತಿಳಿಸಿದ್ದರು.
Published by: zahir
First published: February 7, 2021, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories