ಬಾಕಿ ತೀರಿಸಲು ಬರುತ್ತಿದ್ದೇನೆ, ಪಾಕಿಸ್ತಾನದ ಹಣೆಬರಹ ಬದಲಿಸುವ ಅಗತ್ಯವಿದೆ: ನವಾಜ್ ಷರೀಫ್


Updated:July 13, 2018, 9:13 PM IST
ಬಾಕಿ ತೀರಿಸಲು ಬರುತ್ತಿದ್ದೇನೆ, ಪಾಕಿಸ್ತಾನದ ಹಣೆಬರಹ ಬದಲಿಸುವ ಅಗತ್ಯವಿದೆ: ನವಾಜ್ ಷರೀಫ್
ನವಾಜ್​ ಶರೀಫ್​
  • Share this:
-ನ್ಯೂಸ್ 18

ಇಸ್ಲಾಮಾಬಾದ್(ಜು.13): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಲಾಹೋರ್​ಗೆ ಆಗಮಿಸುತ್ತಿದ್ಧಾರೆ. ಲಂಡನ್ನಿನಿಮದ ಲಾಹೋರ್​ಗೆ ಬರುತ್ತಿರುವ ನವಾಜ್ ಷರೀಫ್, ಮಾರ್ಗಮಧ್ಯೆ ಅಬುಧಬಿಯಲ್ಲಿ ಸಣ್ಣ ವಿರಾಮದಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದು, ಪಾಕಿಸ್ತಾನದ ಹಣೆಬರಹ ಬದಲಿಸುವ ಅಗತ್ಯವಿದೆ.  ಅದಕ್ಕಾಗಿ ವಾಪಸ್ ಬರುತ್ತಿದ್ದೇನೆ. ಪಾಕಿಸ್ತಾನದ ಭವಿಷ್ಯದ ಪೀಳಿಗೆಗಾಗಿ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.ನನಗೆ ಗೊತ್ತಿದೆ. ನನಗೆ 10 ವರ್ಷ ಮತ್ತು ಮಗಳಿಗೆ 7 ವರ್ಷ ಜೈಲುಶಿಕ್ಷೆಯಾಗಿದೆ. ದೇಶದ ಹಣೆಬರಹ ಬದಲಾಗಬೇಕಾದ ಅಗತ್ಯವಿದೆ. ನಾವು ಅದನ್ನ ನಾವು ಮಾಡಬೇಕಾಗಿದೆ. ಹೀಗಾಗಿ, ನಾವು ವಾಪಸ್ ಆಗುತ್ತಿದ್ದೇವೆ.  ಮಾಧ್ಯಮಗಳು ಸಹ ಧೈರ್ಯವಾಗಿ ಇರಬೇಕಾದ ಅಗತ್ಯವಿದೆ. ಸಮಸ್ಯೆಗಳನ್ನ ಎದುಗೊಳ್ಳಲು ಸಿದ್ಧವಾಗಬೇಕಿದೆ ಎಂದು ಹೇಳಿದ್ದಾರೆ.ಈ ಮಧ್ಯೆ, ನವಾಜ್ ಷರೀಫ್ ಬೆಂಬಲಕ್ಕೆ ಲಾಹೋರ್​ನಲ್ಲಿ ಪಿಎಂಎಲ್​(ಎನ್) ಪಕ್ಷದಿಮದ ಬೃಹತ್ ರ್ಯಾಲಿ ಆಯೋಜಿಸಲಾಗಿದೆ.ಈ ಮಧ್ಯೆ, ಬಲೂಚಿಸ್ತಾನದ ಮುಸ್ತಾಂಗಿಯಲ್ಲಿ 2ನೇ ಬಾಂಬ್ ಸ್ಫೋಟಗೊಂಡಿದೆ. ಈ ಮೊದಲು ಅಕ್ರಂ ಖಾನ್ ದುರ್ರಾನಿಯಲ್ಲಿ ಮೊದಲ ಬಾಂಬ್ ಸ್ಫೋಟಗೊಂಡು ನಾಲ್ವರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು.

 

 

 
First published:July 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading