HOME » NEWS » National-international » HYDROGEN BALLOONS EXPLODED IN CHENNAI AT CELEBRATING MODI BIRTHDAY PARTY SESR

ಪ್ರಧಾನಿ ಹುಟ್ಟುಹಬ್ಬ ಸಂಭ್ರಮಾಚರಣೆ ವೇಳೆ ಸ್ಪೋಟಗೊಂಡ ಹೈಡ್ರೋಜನ್ ಬಲೂನ್; ಅನೇಕ ಮಂದಿಗೆ ಗಾಯ

ಇನ್ನು ಜನರು ಗುಂಪುಗೂಡಿ ಸಂಭ್ರಮಾಚರಣೆ ನಡೆಸಲು ಪೊಲೀಸರು ಯಾವುದೇ ಅನುಮತಿ ನೀಡಿರಲಿಲ್ಲ. ಆದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ. 

news18-kannada
Updated:September 19, 2020, 4:15 PM IST
ಪ್ರಧಾನಿ ಹುಟ್ಟುಹಬ್ಬ ಸಂಭ್ರಮಾಚರಣೆ ವೇಳೆ ಸ್ಪೋಟಗೊಂಡ ಹೈಡ್ರೋಜನ್ ಬಲೂನ್; ಅನೇಕ ಮಂದಿಗೆ ಗಾಯ
ಬಲೂನ್​ ಸ್ಪೋಟಗೊಂಡ ಚಿತ್ರ
  • Share this:
ಚೆನ್ನೈ (ಸೆ.18): ಪ್ರಧಾನಿ ಹುಟ್ಟುಹಬ್ಬದಂದು ದೇಶ-ವಿದೇಶಗಳಿಂದ ನರೇಂದ್ರ ಮೋದಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ರಾಜ್ಯಗಳಲ್ಲಿಯೂ ಅವರ ಅಭಿಮಾನಿಗಳು, ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು ಆಚರಿಸಿದ್ದರು. ಈ ಸಂಭ್ರಮಾಚಾರಣೆ ವೇಳೆ ಚೆನ್ನೈನಲ್ಲಿ ಅವಘಡವೊಂದು ಸಂಭವಿಸಿದ್ದು, ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಇಲ್ಲಿನ  ಪಾಡಿ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮೋದಿ ಹುಟ್ಟುಹಬ್ಬ ಆಚರಿಸಲು ನೂರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಈ ಸಂದರ್ಭದಲ್ಲಿ ಬಲೂಲ್​ಗಳನ್ನು ಆಕಾಶಕ್ಕೆ ಆರಿಸಲು ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ಸ್ಪೋಟ ಸಂಭವಿಸಿದ್ದು, 12 ಮಂದಿ  ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣಕ್ಕೆ ಕಿಲ್ಪುಲ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

ವರದಿ ಪ್ರಕಾರ ಕಚೇರಿಯಲ್ಲಿ ಜನ್ಮದಿನ ಆಚರಣೆವೇಳೆ 2000 ಹೈಡ್ರೋಜನ್​ ಬಲೂನ್​ಗಳನ್ನು ಗಾಳಿಯಲ್ಲಿ ತೇಲಿ ಬಿಡಲು ಸಿದ್ಧತೆ ನಡೆಸಲಾಗಿತ್ತು. 50ಕ್ಕೂ ಹೆಚ್ಚು ಬಲೂನ್​ ಹಾರಿಸಲು ಮುಂದಾಗಿದ್ದಾರೆ. ಬಲೂನ್​ ಹಾರಿ ಬಿಡುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

.

ಇನ್ನು ಜನರು ಗುಂಪುಗೂಡಿ ಸಂಭ್ರಮಾಚರಣೆ ನಡೆಸಲು ಪೊಲೀಸರು ಯಾವುದೇ ಅನುಮತಿ ನೀಡಿರಲಿಲ್ಲ. ಆದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ.

ಘಟನೆಯಲ್ಲಿ ಬಿಜೆಪಿ ರೈತ ಘಟಕದ ಉಪಾಧ್ಯಕ್ಷ ಮುತ್ತುರಾಮನ್​ ಕೂಡ ಗಾಯಗೊಂಡಿದ್ದಾರೆ.  ಅನುಮತಿ ಇರದಿದ್ದರೂ ಕಾರ್ಯಕ್ರಮ ನಡೆಸಿದ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Published by: Seema R
First published: September 19, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories