ಕಳೆದ ಒಂದು ವರ್ಷದ ಅವಧಿಯನ್ನು ಗಣನೆಗೆ ತೆಗೆದುಕೊಂಡು ದೇಶದ ಹೆಚ್ಚು ಜನಸಂದಣಿ ಇರುವಂತಹ ಎಂಟು ಮಹಾ ನಗರಗಳನ್ನು ಸ್ಯಾಟಲೈಟ್ ಮೂಲಕ ತೆಗೆದುಕೊಂಡ ಡೇಟಾವನ್ನು ಕ್ರೂಡೀಕರಿಸಿ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯದ ಪ್ರಮಾಣವನ್ನು ಲೆಕ್ಕ ಹಾಕಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಎಲ್ಲಾ ಎಂಟು ನಗರಗಳಾದ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ ಕೋಲ್ಕತ್ತಾ, ಜೈಪುರ್ ಮತ್ತು ಲಕ್ನೋ ಗಳಲ್ಲಿ ವರದಿಯಾಗಿರುವಂತಹ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯದ ಪ್ರಮಾಣದಲ್ಲಿ ದೆಹಲಿ ನಗರವು ಭಾರಿ ಏರಿಕೆಯನ್ನು ಕಂಡಿದ್ದು ಗಮನಿಸಬೇಕಾದಂತಹ ಸಂಗತಿಯಾಗಿದೆ.
ನೈಟ್ರೋಜನ್ಡೈಆಕ್ಸೈಡ್ಎಂದರೇನು:
ನೈಟ್ರೋಜನ್ ಡೈಆಕ್ಸೈಡ್ ಇದು ಒಂದುಅಪಾಯಕಾರಿ ವಾಯು ಮಾಲಿನ್ಯಕಾರಕವಾಗಿದ್ದು, ಇದುಮೋಟಾರು ವಾಹನಗಳು,ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳಲ್ಲಿರುವಂತಹ ಇಂಧನವನ್ನು ಸುಟ್ಟಾಗ ಬಿಡುಗಡೆಯಾಗುತ್ತದೆ.ಇದುಎಲ್ಲಾ ವಯಸ್ಸಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಮಾಲಿನ್ಯದ ಪ್ರಮಾಣ ಹೆಚ್ಚಾಗುವುದರಿಂದ ಶ್ವಾಸಕೋಶಗಳಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಜೊತೆಗೆ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
ದೆಹಲಿಯಲ್ಲಿ125ಪ್ರತಿಶತನೈಟ್ರೋಜನ್ಡೈಆಕ್ಸೈಡ್ಮಾಲಿನ್ಯದಲ್ಲಿಹೆಚ್ಚಳ:
ಗ್ರೀನ್ ಪೀಸ್ ಇಂಡಿಯಾ ವರದಿಯು ದೆಹಲಿಯಲ್ಲಿ ಕಳೆದ ವರ್ಷದ ಏಪ್ರಿಲ್ ತಿಂಗಳಿನಿಂದ ಈ ವರ್ಷದ ಏಪ್ರಿಲ್ ತಿಂಗಳವರೆಗೆ ಅತಿ ಹೆಚ್ಚು ಸುಮಾರು 125 ಪ್ರತಿಶತದಷ್ಟು ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯದಲ್ಲಿ ಹೆಚ್ಚಳವಾಗಿದೆ ಎಂದು ಬಹಿರಂಗ ಪಡಿಸಿದೆ. ದೇಶದ ರಾಜಧಾನಿ ಬಿಟ್ಟು ಉಳಿದಂತಹ ನಗರಗಳಲ್ಲಿಯೂ ಸಹ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯದ ಪ್ರಮಾಣ ಕಳೆದ ಹಲವು ವರ್ಷಗಳಿಗೆ ಹೋಲಿಸಿ ನೋಡಿದರೆ ಗಣನೀಯವಾಗಿ ಏರಿಕೆಯಾಗಿರುವುದನ್ನು ವರದಿಯಿಂದ ತಿಳಿಯಬಹುದಾಗಿದೆ.
ಚೆನ್ನೈ ನಗರದಲ್ಲಿ 94 ಪ್ರತಿಶತ, ಬೆಂಗಳೂರಿನಲ್ಲಿ 90 ಪ್ರತಿಶತ, ಮುಂಬೈ ಯಲ್ಲಿ 52 ಪ್ರತಿಶತ, ಜೈಪುರ್ ನಲ್ಲಿ 47 ಪ್ರತಿಶತ, ಲಕ್ನೋದಲ್ಲಿ 32 ಪ್ರತಿಶತ ಮತ್ತು 11 ಪ್ರತಿಶತ ಕೋಲ್ಕತ್ತಾದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ವರದಿಯಿಂದ ನಾವು ತಿಳಿಯಬಹುದಾಗಿದೆ.
ಈ ವಾಯು ಮಾಲಿನ್ಯವು ಈ ನಗರಗಳಲ್ಲಿ ಎಚ್ಚರಿಕೆಯ ಗಂಟೆಯನ್ನಾಗಿ ಪರಿಗಣಿಸಿ ಸರ್ಕಾರವು ಮತ್ತು ಅನೇಕ ಪರಿಸರ ಪರ ಸಂಘ ಸಂಸ್ಥೆಗಳು ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಕೆಲಸ ಮಾಡಬೇಕಿದೆ ಎಂದು ಗ್ರೀನ್ ಪೀಸ್ ಇಂಡಿಯಾದವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ