• Home
  • »
  • News
  • »
  • national-international
  • »
  • World Green City Award 2022: ಹೈದರಾಬಾದ್‌ಗೆ ವರ್ಲ್ಡ್​ ಗ್ರೀನ್ ಸಿಟಿ ಪ್ರಶಸ್ತಿ ಗರಿ; ಪ್ಯಾರಿಸ್, ಮೆಕ್ಸಿಕೋ ನಗರವನ್ನೇ ಹಿಂದಿಕ್ಕಿದ ಮುತ್ತಿನ ನಗರಿ!

World Green City Award 2022: ಹೈದರಾಬಾದ್‌ಗೆ ವರ್ಲ್ಡ್​ ಗ್ರೀನ್ ಸಿಟಿ ಪ್ರಶಸ್ತಿ ಗರಿ; ಪ್ಯಾರಿಸ್, ಮೆಕ್ಸಿಕೋ ನಗರವನ್ನೇ ಹಿಂದಿಕ್ಕಿದ ಮುತ್ತಿನ ನಗರಿ!

ವರ್ಲ್ಡ್​ ಗ್ರೀನ್ ಸಿಟಿ ಪ್ರಶಸ್ತಿ ಗೆದ್ದ ಹೈದರಾಬಾದ್

ವರ್ಲ್ಡ್​ ಗ್ರೀನ್ ಸಿಟಿ ಪ್ರಶಸ್ತಿ ಗೆದ್ದ ಹೈದರಾಬಾದ್

ಪ್ಯಾರಿಸ್, ಮೆಕ್ಸಿಕೋದಂತಹ ನಗರಗಳನ್ನೇ ಹಿಂದಿಕ್ಕಿ ಹೈದರಾಬಾದ್ ಪ್ರತಿಷ್ಠಿತ 'ವರ್ಲ್ಡ್ ಗ್ರೀನ್ ಸಿಟಿ ಪ್ರಶಸ್ತಿ 2022' ಕ್ಕೆ ಭಾಜನವಾಗಿದೆ. ಈ ಮೂಲಕ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಭಾರತೀಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೇ, ಇನ್ನೂ ಆರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮುಂದೆ ಓದಿ ...
  • News18 Kannada
  • Last Updated :
  • Hyderabad, India
  • Share this:

ಇಂಟರ್​ ನ್ಯಾಷನಲ್ ಅಸೋಸಿಯೇಷನ್ ಆಫ್ ಹಾರ್ಟಿಕಲ್ಚರಲ್ ಪ್ರೊಡ್ಯೂಸರ್ಸ್ (AIPH) ನೀಡುವ ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ಸ್ 2022ರ (World Green City Award 2022) ಪ್ರಶಸ್ತಿಯ ಗರಿ ಹೈದರಾಬಾದ್‌ ಮುಡಿ ಸೇರಿದೆ. ಪ್ಯಾರಿಸ್, ಬೊಗೋಟಾ, ಮೆಕ್ಸಿಕೋ ಸಿಟಿ, ಮಾಂಟ್ರಿಯಲ್ ಮತ್ತು ಬ್ರೆಜಿಲ್‌ನ ಫೋರ್ಟಲೆಜಾವನ್ನು ಹಿಂದಿಕ್ಕಿ ಹೈದರಾಬಾದ್ ನಗರವು (Hyderabad city) ಈ ಪ್ರತಿಷ್ಠಿತ 'ವರ್ಲ್ಡ್ ಗ್ರೀನ್ ಸಿಟಿ ಪ್ರಶಸ್ತಿ 2022' ಕ್ಕೆ ಭಾಜನವಾಗಿದೆ. ಈ ಮೂಲಕ 'ವಿಶ್ವ ಹಸಿರು ನಗರ 2022' ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಭಾರತೀಯ ನಗರ (Indian City) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೇ, ಇನ್ನೂ ಆರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ಹಸಿರು ಹೆಚ್ಚಿಸಿದ್ದಕ್ಕೆ ಒಲಿದ ಪ್ರಶಸ್ತಿ
ದಕ್ಷಿಣ ಕೊರಿಯಾದ ಜೆಜುನಲ್ಲಿ ನಡೆದ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಹಾರ್ಟಿಕಲ್ಚರ್ ಪ್ರೊಡ್ಯೂಸರ್ಸ್ (AIPH) 2022ನಲ್ಲಿ ಹೈದರಾಬಾದ್‌ ಔಟರ್ ರಿಂಗ್ ರೋಡ್ (ORR)ನಲ್ಲಿ ಮತ್ತು ಸುತ್ತಲೂ ಹಚ್ಚ ಹಸಿರನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಹೈದರಾಬಾದ್ ಪ್ರತಿಷ್ಠಿತ AIPH ಗ್ಲೋಬಲ್ ‘ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ಸ್ 2022’ ಅನ್ನು ಪಡೆದುಕೊಂಡಿದೆ. ಜೆಜುನಲ್ಲಿರುವ ಐಯುಸಿಎನ್ ಲೀಡರ್ಸ್ ಫೋರಮ್‌ನಲ್ಲಿ ನಡೆದ ವಿಶೇಷ ಗಾಲಾ ಡಿನ್ನರ್‌ನಲ್ಲಿ ನಡೆದ ಮೀಸಲಾದ ಪ್ರಶಸ್ತಿ ಸಮಾರಂಭದಲ್ಲಿ ಆರು ವಿಭಾಗದ ವಿಜೇತರು ಮತ್ತು ಗ್ರ್ಯಾಂಡ್ ವಿನ್ನರ್‌ಗಳ ಘೋಷಣೆಯನ್ನು ಮಾಡಲಾಯಿತು.


ತೆಲಂಗಾಣದ ʼಹರಿತ ಹರಂʼ ಯೋಜನೆಗೆ ಫಲ
2015-16ರಿಂದ ರಾಜ್ಯವು ಕೈಗೆತ್ತಿಕೊಂಡಿರುವ ಬೃಹತ್-ಪ್ರಮಾಣದ ಮರ ನೆಡುವ ಕಾರ್ಯಕ್ರಮವಾದ ‘ತೆಲಂಗಾಣಕ್ಕೆ ಹರಿತ ಹರಂ’ ಎಂಬ ರಾಜ್ಯದ ಕಾರ್ಯಕ್ರಮವನ್ನು ಪ್ರಶಸ್ತಿಯು ಗುರುತಿಸಿದೆ. "ಈ ಕಾರ್ಯಕ್ರಮವು ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ 24% ರಿಂದ 33% ಕ್ಕೆ ರಾಜ್ಯದ ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ" ಎಂದು ಪ್ರಶಸ್ತಿ ಹೇಳುತ್ತದೆ.


ಇದನ್ನೂ ಓದಿ: Char Dham: ಕೇದಾರನಾಥ-ಬದರಿನಾಥಕ್ಕೆ ಮೋದಿ ಭೇಟಿ: ಈ ಬಾರಿ 'ವಿಶಿಷ್ಟ ದಾಖಲೆ' ಸೃಷ್ಟಿ


"AIPH ಹೈದರಾಬಾದ್ ನಗರದ ಈ ಅದ್ಭುತ ಸಾಧನೆಯನ್ನು ಆಚರಿಸುತ್ತದೆ. ನಗರದ ಹಸಿರೀಕರಣದ ಸ್ಪೂರ್ತಿದಾಯಕ ಕೆಲಸವನ್ನು ಪ್ರದರ್ಶಿಸಲು ನಾವು ಹೆಮ್ಮೆಪಡುತ್ತೇವೆ. ಈ ಜಾಗತಿಕ ಮನ್ನಣೆಯೊಂದಿಗೆ, ನಗರ ವಿನ್ಯಾಸ, ರೂಪ, ಮತ್ತು ಪ್ರಕೃತಿ-ಆಧಾರಿತ ವಿಧಾನಗಳಲ್ಲಿ ಹೈದರಾಬಾದ್ ವಿಶ್ವ ನಾಯಕ ಎಂದು ನಾವು ವಿಶ್ವಾಸದಿಂದ ಹೇಳಬಹುದು" ಎಂದು AIPH ನ ಪ್ರಧಾನ ಕಾರ್ಯದರ್ಶಿ ಟಿಮ್ ಬ್ರಿಯರ್ಕ್ಲಿಫ್ ಹೇಳಿದರು.
ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಅವರು ಸಂಪೂರ್ಣ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ತಂಡ ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರನ್ನು ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.


ಸಿಎಂ ಕೆ. ಚಂದ್ರಶೇಖರ್ ರಾವ್ ಸಂತಸ
ನಗರಕ್ಕೆ ಪ್ರತಿಷ್ಠಿತ "ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಹಾರ್ಟಿಕಲ್ಚರ್ ಪ್ರೊಡ್ಯೂಸರ್ಸ್" (AIPH) ಪ್ರಶಸ್ತಿಗಳು ಲಭಿಸಿರುವುದಕ್ಕೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸಂತಸ ವ್ಯಕ್ತಪಡಿಸಿದರು. ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳು ತೆಲಂಗಾಣ ಮತ್ತು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದರು. ದೇಶಕ್ಕೆ ಹಸಿರು ಫಲ ನೀಡುತ್ತಿದೆ ಎಂಬುದಕ್ಕೆ ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಾಕ್ಷಿಯಾಗಿದೆ ಎಂದರು.


ವಿವಿಧ ವಿಭಾಗಗಳಲ್ಲಿ AIPH ಪ್ರಶಸ್ತಿಗಳನ್ನು ಗೆದ್ದ ಇತರ ನಗರಗಳ ಪಟ್ಟಿ ಇಲ್ಲಿದೆ:


1) ಜೀವವೈವಿಧ್ಯಕ್ಕಾಗಿ ಹಸಿರು
ರೆವರ್ಡೆಸರ್ ಬೊಗೋಟಾ, ಬೊಗೋಟಾ ಡಿಸಿ, ಕೊಲಂಬಿಯಾ
2) ಹವಾಮಾನ ಬದಲಾವಣೆಗಾಗಿ ಹಸಿರು
ಮೆಕ್ಸಿಕೋ ನಗರದ ಪರಿಸರ ಮತ್ತು ಹವಾಮಾನ ಬದಲಾವಣೆ ಕಾರ್ಯಕ್ರಮ, ಮೆಕ್ಸಿಕೋ ನಗರ, ಮೆಕ್ಸಿಕೋ
3) ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹಸಿರು
ಕೊಳೆತ ಭೂಮಿಯನ್ನು ಅರ್ಬನ್ ಮೈಕ್ರೋ ಪಾರ್ಕ್‌ಗಳಾಗಿ ಪರಿವರ್ತಿಸಿದ್ದಕ್ಕೆ
ಬ್ರೆಜಿಲ್‌ನ ಫೋರ್ಟಲೆಜಾ ನಗರ


ಇದನ್ನೂ ಓದಿ:  Elnaz Rekabi: ಹಿಜಾಬ್ ಧರಿಸದೆ ಈವೆಂಟ್‌ಗೆ ಪ್ರವೇಶಿಸಿದ ಇರಾನ್‌ನ ಮಹಿಳಾ ಅಥ್ಲೀಟ್‌, ಸಿಕ್ತು ಭರ್ಜರಿ ಸ್ವಾಗತ!


4) ನೀರಿಗಾಗಿ ಹಸಿರು
ಮಾಂಟ್ರಿಯಲ್ ನಗರ, ಕೆನಡಾ
5) ಸಾಮಾಜಿಕ ಒಗ್ಗಟ್ಟಿಗಾಗಿ ಹಸಿರು
OASIS ಸ್ಕೂಲ್ಯಾರ್ಡ್ ಪ್ರಾಜೆಕ್ಟ್, ಪ್ಯಾರಿಸ್ ನಗರ, ಫ್ರಾನ್ಸ್
6) ಆರ್ಥಿಕ ಚೇತರಿಕೆ ಮತ್ತು ಅಂತರ್ಗತ ಬೆಳವಣಿಗೆಗಾಗಿ ಹಸಿರು
ತೆಲಂಗಾಣ ರಾಜ್ಯ, ಹೈದರಾಬಾದ್

Published by:Ashwini Prabhu
First published: