Tirupati: ಟೆಕ್ಕಿ ಹೆಂಡತಿ ಕೊಂದು ಡೆಲ್ಟಾ ಪ್ಲಸ್​ ಸೋಂಕಿಗೆ ಬಲಿಯಾದಳು ಎಂದು ಕುಟುಂಬಸ್ಥರಿಗೆ ನಂಬಿಸಿದ

ಹೆಂಡತಿಗೆ ಡೆಲ್ಟಾ ವೈರಸ್​ ಸೋಂಕು ಬಂದು ಸತ್ತು ಹೋದಳು. ಆಸ್ಪತ್ರೆ ಸಿಬ್ಬಂದಿಯೇ ಆಕೆಯ ಅಂತ್ಯ ಸಂಸ್ಕಾರ ನಡೆಸಿದರು ಎಂದು ಕುಟುಂಬಸ್ಥರಿಗೆ ನಂಬಿಸಿದ್ದ

ಘಟನಾ ಸ್ಥಳ

ಘಟನಾ ಸ್ಥಳ

 • Share this:
  ಕುತೂಹಲ ಮೂಡಿಸಿದ್ದ ತಿರುಪತಿಯಲ್ಲಿ ಸೂಟ್​ಕೇಸ್​ನಲ್ಲಿ ಪತ್ತೆಯಾದ ಅರೆಬೆಂದ ದೇಹದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೈದ್ರಾಬಾದ್​ನ 27 ವರ್ಷದ ಸಾಫ್ಟ್​ವೇರ್​ ಉದ್ಯೋಗಿ ಭುವನೇಶ್ವರಿ ಸಾವನ್ನಪ್ಪಿದ ಯುವತಿ.  ಆಕೆಯ ಗಂಡನೇ  ಕೊಲೆ ಮಾಡಿ, ದೇಹವನ್ನು ಸೂಟ್​ಕೇಸ್​ನಲ್ಲಿ ಹಾಕಿ ತಿರುಪತಿಯ ಆಸ್ಪತ್ರೆ ಬಳಿ ಸುಟ್ಟು ಹಾಕಿದ್ದಾನೆ. ಕಳೆದ ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಕೊಲೆಯಾದ ಯುವತಿ ಹೈದ್ರಾಬಾದ್​ನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಗೆ 18 ತಿಂಗಳ ಮಗು ಕೂಡ ಇದೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ಆರಂಭ ವಾಗಿದೆ. 

  ಏನಿದು ಘಟನೆ

  ಹೈದ್ರಾಬಾದ್​ನಲ್ಲಿ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭುವನೇಶ್ವರಿ ಕೋವಿಡ್​ ಹಿನ್ನಲೆ ವರ್ಕ್​ ಫ್ರಂ ಹೋಂ ಇದ್ದ ಕಾರಣ ತಿರುಪತಿಯಲ್ಲಿನ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಇದೇ ಕೋವಿಡ್​ನಿಂದಾಗಿ ಆಕೆಯ ಗಂಡ ಮರ್ಮರೆಡ್ಡಿ ಶ್ರೀಕಾಂತ್​ ರೆಡ್ಡಿ ಕೆಲಸ ಕಳೆದು ಕೊಂಡಿದ್ದ. ಕೆಲಸವಿಲ್ಲದೇ ಆತ ಖಿನ್ನತೆಗೆ ಒಳಗಾಗಿದ್ದ. ಅಲ್ಲದೇ, ಮದ್ಯದ ಚಟಕ್ಕೆ ಬಿದ್ದು, ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಿದ್ದ.

  ಜೂನ್​ 23ರಂದು ಕೂಡ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಘಟನೆ ಅಂತ್ಯವಾಗಿದೆ. ಹೆಂಡತಿಯನ್ನು ಕೊಂದ ಶ್ರೀಕಾಂತ್​, ಹೆಂಡತಿಯ ಶವವನ್ನು ಸೂಟ್​ಕೇಸ್​ವೊಂದರಲ್ಲಿ ತುಂಬಿ ಅದನ್ನು ಎಸ್​ವಿಆರ್​ಆರ್​ ಸರ್ಕಾರಿ ಆಸ್ಪತ್ರೆ ಕಾಪೌಂಡ್​ ಆವರಣದಲ್ಲಿ ಇಟ್ಟಿದೆ. ಬಳಿಕ ರಾತ್ರಿ ಸೂಟ್​ಕೇಸ್​ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ.

  ಇದನ್ನು ಓದಿ: ಜುಲೈ 5ರ ಬಳಿಕ ಮತ್ತಷ್ಟು ನಿಯಮ ಸಡಿಲಿಕೆ; ಶೀಘ್ರದಲ್ಲಿಯೇ ದೇವಸ್ಥಾನ ಕೂಡ ಓಪನ್​

  ಕೊಲೆ ಮಾಡಿದ ಬಳಿಕ ಹೆಂಡತಿಗೆ ಡೆಲ್ಟಾ ವೈರಸ್​ ಸೋಂಕು ಬಂದು ಸತ್ತು ಹೋದಳು. ಆಸ್ಪತ್ರೆ ಸಿಬ್ಬಂದಿಯೇ ಆಕೆಯ ಅಂತ್ಯ ಸಂಸ್ಕಾರ ನಡೆಸಿದರು ಎಂದು ಹೆಂಡತಿ ಮನೆ ಹಾಗೂ ತನ್ನ ಕುಟುಂಬಸ್ಥರಿಗೆ ಈತ ತಿಳಿಸಿ ನಂಬಿಸಿದ್ದ.

  ಇದನ್ನು ಓದಿ: ಜು. 19ರಿಂದ ಮುಂಗಾರು ಅಧಿವೇಶನ ಆರಂಭ ಸಾಧ್ಯತೆ

  ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಆಸ್ಪತ್ರೆಯ ಆವರಣದಲ್ಲಿ ಹೆಂಡತಿಯ ಶವವನ್ನು ತುಂಬಿದ ಸೂಟ್​ಕೇಸ್​ ಸಾಗಿಸುತ್ತಿರುವ ದೃಶ್ಯ ಲಭ್ಯವಾಗಿತ್ತು. ಇದೇ ವೇಳೆ ಆತನಿಗೆ ಕ್ಯಾಬ್​ ಡ್ರೈವರ್​ ಕೂಡ ಸಹಾಯ ಮಾಡಿರುವುದು ಪತ್ತೆಯಾಗಿದ್ದು, ಆತನ ವಶಕ್ಕೆ ಪಡೆಯಲಾಗಿದೆ. ಆತನ ತನಿಖೆ ನಡೆಸಿದಾಗ ಕುಟುಂಬಸ್ಥರಿಗೆ ಭುವನೇಶ್ವರಿ ಸಾವಿನ ಬಗ್ಗೆ ಹೇಳಿರುವ ಸುಳ್ಳು ಹೊರ ಬಂದಿದೆ.

  ಪ್ರಕರಣ ಹೊರ ಬರುತ್ತಿದ್ದಂತೆ ಆರೋಪಿ ಶ್ರೀಕಾಂತ್​ ಪರಾರಿಯಾಗಿದ್ದು, ಆತನ ಹುಟುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅರೆಬೆಂದ ಮೃತ ದೇಹವನ್ನು ಫಾರೆನ್ಸಿಕ್​ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿರುಪತಿ ನಗರ ಪೊಲೀಸರು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: