ಕುಟುಂಬವನ್ನು ಬಡತನಕ್ಕೆ ದೂಡಿದ ಲಾಕ್​​ಡೌನ್​; ಶಿಕ್ಷಣ ವೆಚ್ಚ ಚಿಂತಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಲಾಪ್​ಟಾಪ್​ ಮತ್ತು ಇಂಟರ್​ನೆಟ್​ ಇಲ್ಲದ ಕಾರಣ. ಈ ಕಾರಣಕ್ಕಾಗಿ ತಮಗೆ ಓದಿನ ಅಭ್ಯಾಸಕ್ಕೆ ನೆರವಾಗಲು ಲಾಪ್​ಟಾಪ್​ ಸಹಾಯ ನೀಡುವಂತೆ ನಟ ಸೋನ್​ಸೂದ್​ಗೂ ಈಕೆ ಪತ್ರದಲ್ಲಿ ಮನವಿ ಮಾಡಿದ್ದಳು.

ವಿದ್ಯಾರ್ಥಿನಿ ಐಶ್ವರ್ಯಾ

ವಿದ್ಯಾರ್ಥಿನಿ ಐಶ್ವರ್ಯಾ

 • Share this:
  ನವದೆಹಲಿ (ನ.9): ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಕುಟುಂಬಕ್ಕೆ ತನ್ನ ವಿದ್ಯಾಭ್ಯಾಸ ಇನ್ನಷ್ಟು ಹೊರೆಯಾಗಲಿದೆ ಎಂದು ಇಲ್ಲಿನ ಪ್ರತಿಷ್ಠಿತ ಲೇಡಿ ಶ್ರೀರಾಮ್​ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂದ್ರಪ್ರದೇಶದ ಐಶ್ವರ್ಯಾ ಸಾವನ್ನಪ್ಪಿದ ಯುವತಿ. ಆಂಧ್ರಪ್ರದೇಶದ ರಂಗಾರೆಡ್ಡಿಯ ಐಶ್ಚರ್ಯಾ ಮೆರಿಟ್​ ಮೇಲೆ ದೆಹಲಿಯ ಕಾಲೇಜಿನಲ್ಲಿ ಗಣಿತ ಅಧ್ಯಯನ ನಡೆಸುತ್ತಿದ್ದಳು. ಐಎಎಸ್​ ಆಕಾಂಕ್ಷಿಯಾಗಬೇಕು ಎನ್ನುವ ಹೆಬ್ಬಯಕೆಯನ್ನು ಆಕೆ ಹೊಂದಿದ್ದಳು. ಆದರೆ, ಆಕೆಯ ಕನಸಿಗೆ ಲಾಕ್​ಡೌನ್​ ವಿಘ್ನ ತಂದಿದೆ. ಹೈದ್ರಾಬಾದ್​ನಲ್ಲಿ ನೆಲೆಸಿರುವ ಐಶ್ವರ್ಯಾ ತಂದೆ ಮೆಕಾನಿಕ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಯಿ ಚಿಕ್ಕಪುಟ್ಟ ಟೈಲರಿಂಗ್​ ಮಾಡಿಕೊಂಡು ಸಂಸಾರ ತೂಗಿಸುತ್ತಿದ್ದಾರೆ. ಇನ್ನು ಐಶ್ವರ್ಯಾ ತಂಗಿ ಏಳನೇ ತರಗತಿಗೆ ವಿದ್ಯಾಭ್ಯಾಸ ತೊರೆದಿದ್ದಾಳೆ.

  ಪ್ರತಿಭಾನ್ವಿತೆ  ಐಶ್ವರ್ಯಾ ಲಾಕ್​ಡೌನ್​ ಹಿನ್ನಲೆ ಮನೆಗೆ ಮರಳಿದ್ದಳು. ಲಾಕ್ಡೌನ್​ನಿಂದಾಗಿ ಕೆಲಸವಿಲ್ಲದೇ ಆಕೆಯ ಪೋಷಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ವೇಳೆ ತನ್ನ ಭವಿಷ್ಯದ ಬಗ್ಗೆ ಚಿಂತಿಸಿದ ಐಶ್ವರ್ಯಾ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ನ.2ರಂದು ಆತ್ಮಹತ್ಯೆಗೆ ಶರಾಣಗಿದ್ದು, ತನ್ನ ಸಾವಿನ ಕುರಿತು ಡೆತ್​ ನೋಟ್​ ಬರೆದಿದ್ದಾಳೆ.
  ತಮ್ಮ ಕುಟುಂಬ ಈಗಾಗಲೇ ತನ್ನ ಓದಿಗೆ ಸಾಕಷ್ಟು ಹಣ ವ್ಯಯಿಸಿದ್ದು, ನನ್ನ ಓದಿ ಅವರಿಗೆ ಹೊರೆಯಾಗಿದೆ. ಓದಿಲ್ಲದೇ ನಾನು ಇರಲಾರೆ. ಈ ಕುರಿತು ಬಹಳ ಯೋಚಿಸಿದೆ, ಇದಕ್ಕೆ ಪರಿಹಾರ ಆತ್ಮಹತ್ಯೆ ಒಂದೇ ಎಂದು ಈ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದ್ದಾಳೆ.

  ಸ್ಕಾಲರ್​ಶಿಪ್​ ವಿದ್ಯಾರ್ಥಿನಿ

  ಸ್ಟೇಟ್​ ಬೋರ್ಡ್​​ ಪರೀಕ್ಷೆಯಲ್ಲಿಯೂ ಐಶ್ವರ್ಯಾ ಟಾಪರ್​ ಆಗಿದ್ದಳು. 2019ರಲ್ಲಿ 12ನೇ ಕ್ಲಾಸ್​ ಪರೀಕ್ಷೆಯಲ್ಲಿ ಶೇ.98.5ರಷ್ಟು ಅಂಕಗಳಿಸಿದ್ದಳು. ವಿಜ್ಞಾನ ತಂತ್ರಜ್ಞಾನ ಸಚಿವಾಲಯದ ಇನ್ಸಪೈರ್​ ವಿದ್ಯಾರ್ಥಿವೇತನ ಪಡೆಯುವ ಕೆಲವೇ ವಿದ್ಯಾರ್ಥಿಗಳಲ್ಲಿ ಐಶ್ವರ್ಯಾ ಕೂಡ ಒಬ್ಬಳು. ಮಾರ್ಚ್​ನಲ್ಲಿ ಬರಬೇಕಿದ್ದ ಸ್ಕಾಲರ್​ ಶಿಪ್​ ಸಿಗದೆ ಐಶ್ವರ್ಯಾ ಸಂಕಷ್ಟಕ್ಕೆ ಒಳಗಾಗಿದ್ದಳು. ಇನ್ನು ಸೂಸೈಡ್​ನೋಟ್​ನಲ್ಲಿ ಈ ಕುರಿತು ಉಲ್ಲೇಖಿಸಿರುವ ಐಶ್ವರ್ಯಾ ತಮ್ಮ ಮಾರ್ಚ್​ ತಿಂಗಳ ಸ್ಕಾಲರ್ಶಿಪ್​ ಕುಟುಂಬಕ್ಕೆ ನೀಡುವಂತೆ ಮನವಿ ಮಾಡಿದ್ದಾಳೆ.

  ಲಾಪ್​ಟಾಪ್​ಗೆ ಸೋನು ಸೂದ್​ಗೆ ಮನವಿ

  ಲಾಕ್ಡೌನ್​ ಹಿನ್ನಲೆ ಆನ್​ಲೈನ್​ ಶಿಕ್ಷಣಕ್ಕಾಗಿ ಐಶ್ವರ್ಯಾ ಪರಿಪಾಟಲು ಪಟ್ಟಿದ್ದಾಳೆ. ಕಾಲೇಜಿನಲ್ಲಿ ಆನ್​ಲೈನ್​ ಕ್ಲಾಸ್ ಶುರುವಾದರೂ ಐಶ್ವರ್ಯಾ ಹಾಜರಾಗಲು ಸಾಧ್ಯವಾಗಿಲ್ಲ. ಕಾರಣ. ಲಾಪ್​ಟಾಪ್​ ಮತ್ತು ಇಂಟರ್​ನೆಟ್​ ಇಲ್ಲದ ಕಾರಣ. ಈ ಕಾರಣಕ್ಕಾಗಿ ತಮಗೆ ಓದಿನ ಅಭ್ಯಾಸಕ್ಕೆ ನೆರವಾಗಲು ಲಾಪ್​ಟಾಪ್​ ಸಹಾಯ ನೀಡುವಂತೆ ನಟ ಸೋನ್​ಸೂದ್​ಗೂ ಈಕೆ ಪತ್ರದಲ್ಲಿ ಮನವಿ ಮಾಡಿದ್ದಳು.
  Published by:Seema R
  First published: