Hyderabad Rain: ಹೈದರಾಬಾದ್​ನಲ್ಲಿ ಭಾರೀ ಮಳೆಯಿಂದ ಪ್ರವಾಹ ಭೀತಿ; ರಸ್ತೆಗಳಲ್ಲಿ ಕೊಚ್ಚಿಹೋದ ಕಾರು-ಬಸ್, ಜನರು!

Telangana Rain Updates: ಹೈದರಾಬಾದ್​ನ ರಸ್ತೆಗಳಲ್ಲಿ ನಿಂತ ಕಾರು, ಲಾರಿಗಳು ಮಳೆಯ ನೀರಿನಲ್ಲಿ ತೇಲಿಕೊಂಡು ಬರುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಭಾರೀ ಮಳೆಯಿಂದಾಗಿ ತೆಲಂಗಾಣದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

news18-kannada
Updated:October 14, 2020, 3:02 PM IST
Hyderabad Rain: ಹೈದರಾಬಾದ್​ನಲ್ಲಿ ಭಾರೀ ಮಳೆಯಿಂದ ಪ್ರವಾಹ ಭೀತಿ; ರಸ್ತೆಗಳಲ್ಲಿ ಕೊಚ್ಚಿಹೋದ ಕಾರು-ಬಸ್, ಜನರು!
ಹೈದರಾಬಾದ್​ನಲ್ಲಿ ಪ್ರವಾಹ
  • Share this:
ಹೈದರಾಬಾದ್ (ಅ. 14): ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಈಗಾಗಲೇ 12 ಜನರು ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೈದರಾಬಾದ್​ ಸೇರಿದಂತೆ ಬಹುತೇಕ ನಗರಗಳು ಜಲಾವೃತವಾಗಿವೆ. ತೆಲಂಗಾಣದ ಮಳೆಗೆ 2 ತಿಂಗಳ ಮಗು ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್​ನ ರಸ್ತೆಗಳಲ್ಲಿ ನಿಂತ ಕಾರು, ಲಾರಿಗಳು ಮಳೆಯ ನೀರಿನಲ್ಲಿ ತೇಲಿಕೊಂಡು ಬರುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಭಾರೀ ಮಳೆಯಿಂದಾಗಿ ತೆಲಂಗಾಣದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

ತೆಲಂಗಾಣದಲ್ಲಿ ನಿನ್ನೆ ರಾತ್ರಿಯಿಡೀ ಮಳೆಯ ಅಬ್ಬರ ಉಂಟಾಗಿ ತಗ್ಗು ಪ್ರದೇಶದ ಮನೆಗಳು ಮುಳುಗಿವೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ. ಹೈದರಾಬಾದ್​ನ ಬಂದ್ಲಗುಡ ಪ್ರದೇಶದಲ್ಲಿ ಮಗು ಸೇರಿದಂತೆ 9 ಮಂದಿ ಮೃತ ಪಟ್ಟಿದ್ದಾರೆ. ಸತತ ಮಳೆಗೆ ಬಂಡೆಯೊಂದು ನೀರಿನಲ್ಲಿ ಕೊಚ್ಚಿ ಬಂದು ಮನೆಗೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಹೈದರಾಬಾದ್​ನಲ್ಲಿ ಮನೆಯ ಗೋಡೆ ಕುಸಿದು ಬಿದ್ದು ಮೂವರು ಮೃತಪಟ್ಟಿದ್ದಾರೆ.




ಮನೆಗಳೊಳಗೆ ನೀರು ನುಗ್ಗಿರುವುದರಿಂದ ಕೊಚ್ಚೆ ನೀರನ್ನು ಹೊರಹಾಕಲು ಹಿಮಯತ್ಸಾಗರ ಜಲಾಶಯದ ಎರಡು ಗೇಟ್ ಓಪನ್ ಮಾಡಲಾಗಿದೆ. ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ಇಂದು ಜಲಾಶಯದ ಮತ್ತಷ್ಟು ಗೇಟ್ ಗಳನ್ನು ಬಿಡುವ ಸಾಧ್ಯತೆಯಿದೆ. 2010ರಲ್ಲಿ ಇಲ್ಲಿ ಪ್ರವಾಹ ಬಂದು ಇದೇ ರೀತಿ ಗೇಟ್ ತೆರೆಯಲಾಗಿತ್ತು. ತೆಲಂಗಾಣದಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.


ತೆಲಂಗಾಣದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡಬಾರದು ಎಂದು ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ 100 ವರ್ಷಗಳಲ್ಲಿ ಒಂದೇ ದಿನ ಸುರಿದ ಅತ್ಯಧಿಕ ಮಳೆಯಲ್ಲಿ ಹೈದರಾಬಾದ್​ನ ನಿನ್ನೆ ಮಳೆ ಎರಡನೇ ಸ್ಥಾನ ಪಡೆದಿದೆ.



ಮನೆಯೊಳಗೆ ನೀರು ನುಗ್ಗಿದ್ದರಿಂದ ಮನೆಯ ಹೊರಗೆ ಬಂದವರು ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇಡೀ ಹೈದರಾಬಾದ್​ ನಗರವೇ ಜಲಾವೃತವಾಗಿದ್ದು, ಪ್ರವಾಹದಿಂದ ಸಾವಿನ ಆತಂಕ ಹೆಚ್ಚಾಗಿದೆ. ಹೈದರಾಬಾದ್​ನ ರಸ್ತೆಗಳಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿ, ರಾಶಿ ಬಿದ್ದಿವೆ.
Published by: Sushma Chakre
First published: October 14, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading