ಹೈದರಾಬಾದ್ (ಮೇ 22): ನಿರ್ಗತಿಕ ಮಕ್ಕಳಿಬ್ಬರು ಊಟಕ್ಕಾಗಿ ಅಲೆದಾಡುತ್ತಿರುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಮಕ್ಕಳಿಗೆ ಊಟ ನೀಡಿ ಅವರ ಹಸಿವನ್ನು ನೀಗಿಸುವ ಕೆಲಸ ಮಾಡಿದ್ದಾರೆ. ಇವರ ಈ ಕಾಯಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಈ ಘಟನೆ ನಡೆದಿದ್ದು, ಹೈದರಾಬಾದಿನಲ್ಲಿ. ಮಕ್ಕಳಿಗೆ ಹಸಿವನ್ನು ನೀಗಿಸಿದ ಮಾನವೀಯ ಹೃದಯ ವ್ಯಕ್ತಿಯೇ ಪಂಜಾಗುಠ ಸಿರುಪಂಗಿ ಮಹೇಶ್ ಕುಮಾರ್. ಇವರು ಲಾಕ್ಡೌನ್ ಕಾರಣ ಸೋಮಾಜಿಗುಡಾ ಎಂಬ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಇಬ್ಬರು ಮಕ್ಕಳು ಊಟಕ್ಕಾಗಿ ಅದೇ ಪ್ರದೇಶದಲ್ಲಿದ್ದ ಕಸದಬುಟ್ಟಿಯಲ್ಲಿ ಆಹಾರಕ್ಕಾಗಿ ತಡಕಾಡುತ್ತಿರುವುದನ್ನು ಕಂಡರು.
ನಂತರ ಮಕ್ಕಳೊಂದಿಗಿದ್ದ ತಂದೆಯ ಹತ್ತಿರ ಲಾಕ್ಡೌನ್ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿದ್ದೀರಾ ಎಂದು ವಿಚಾರಿಸಿದ್ದಾರೆ. ಆಗ ಅವರು ಮಕ್ಕಳು ಹಸಿವಾಗಿದ್ದ ಕಾರಣ ಅಮೀರ್ಪೇಟೆ ಮತ್ತು ಗ್ರೀನ್ಲ್ಯಾಂಡ್ ಬಳಿ ಭಿಕ್ಷೆ ಬೇಡಿದ್ದಾರೆ. ಆದರೆ ಅವರಿಗೆ ಊಟ ಸಿಗಲಿಲ್ಲ. ಹಾಗಾಗಿ ಊಟಕ್ಕಾಗಿ ಕಸದ ಬುಟ್ಟಿಯನ್ನು ಹುಡುಕಾಡಿದ್ದಾರೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇದರಿಂದ ನೊಂದ ಮಹೇಶ್ ಕುಮಾರ್ ಅವರು ತಮಗಾಗಿ ಬಾಕ್ಸ್ನಲ್ಲಿ ತಂದಿದ್ದ ಊಟವನ್ನು ಮಕ್ಕಳಿಗೆ ನೀಡಿದ್ದಾರೆ. ಮಕ್ಕಳಿಗೆ ಎರಡು ತಟ್ಟೆಗಳಲ್ಲಿ ಅವರು ತಂದಿದ್ದ ಅನ್ನ, ಸಾಂಬಾರು ಹಾಗೂ ಚಿಕನ್ ಫ್ರೈ ಹಾಕಿ ಊಟ ಮಾಡುವಂತೆ ಹೇಳಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಈ ಕಾಯಕ್ಕೆ ಪ್ರಶಂಸನೀಯ ಮಾತುಗಳು ಹರಿದು ಬರುತ್ತಿದೆ.
#ActOfKindness
Panjagutta Traffic Police Constable Mr. Mahesh while performing patrolling duty @Somajiguda noticed two children requesting others for food at the road side, immediately he took out his lunch box & served food to the hungry children. pic.twitter.com/LTNjihUawn
— Telangana State Police (@TelanganaCOPs) May 17, 2021
ಇವರ ಈ ವಿಡಿಯೋ ತೆಲಂಗಾಣ ಸ್ಟೇಟ್ ಪೊಲೀಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಆಗಿದೆ. ಈ ವಿಡಿಯೋವನ್ನು ಇವರ ಜೊತೆಗಿದ್ದ ಸಹೋದ್ಯೋಗಿ ಪೊಲೀಸರು ರೆಕಾರ್ಡ್ ಮಾಡಿ ಇತರರಿಗೆ ಕಳುಹಿಸಿಕೊಟ್ಟಿದ್ದರು. ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹೇಶ್ ಕುಮಾರ್ ಮಾನವೀಯತೆ ಮೆರೆದು ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಮಕ್ಕಳಿಗೆ ಹಸಿವು ಎಷ್ಟರ ಮಟ್ಟಿಗೆ ಬಾಧಿಸಿತ್ತು. ಊಟವನ್ನು ನೋಡಿದಾಕ್ಷಣ ಅವರ ಮೊಗದಲ್ಲಿನ ಸಂತೋಷ ಎದ್ದು ಕಾಣುತ್ತಿತ್ತು. ಇದನ್ನು ಸುಮಾರು 1.65 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಮಮದಿ ಇಷ್ಟಪಟ್ಟಿದ್ದಾರೆ ಮತ್ತು ರೀಟ್ವೀಟ್ ಮಾಡಿದ್ದಾರೆ.
ಮಾನವೀಯತೆ ಇನ್ನು ಕೆಲವೆಡೆ ಜೀವಂತವಾಗಿದೆ ಎಂದು ಮನೋಹರ್ ವೆಣ್ಣಮ್ಪಲ್ಲಿ ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಒಳ್ಳೆಯ ಕಾರ್ಯ. ಇಂದು, ನಾಳೆ, ನಾಡಿದ್ದು, ಆಚೆ ನಾಡಿದ್ದು, ಜೀವನಪೂರ್ತಿ ಊಟದ ಕಥೆ ಏನು ಹೇಗೆ? ಎಂದು ಪ್ರಶ್ನಿಸಿದ್ದಾರೆ.
#ActOfKindness
Panjagutta Traffic Police Constable Mr. Mahesh while performing patrolling duty @Somajiguda noticed two children requesting others for food at the road side, immediately he took out his lunch box & served food to the hungry children. pic.twitter.com/LTNjihUawn
— Telangana State Police (@TelanganaCOPs) May 17, 2021
ಇವರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ. ಇದನ್ನು ಶಾಸಕರು, ಕೈಗಾರಿಕೋದ್ಯಮಿಗಳು ಸೇರಿದಂತೆ ಪ್ರತಿಯೊಬ್ಬರು ಜೊತೆಗೂಡಿ ಒಂದು ಹೊತ್ತಿನ ಊಟಕ್ಕೂ ಪರದಾಡಿ ಹಸಿವಿನಲ್ಲೇ ಮಲಗುವ ಮಕ್ಕಳು, ಕುಟುಂಬದ ಕಡೆ ಗಮನಹರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.
#ActOfKindness
Panjagutta Traffic Police Constable Mr. Mahesh while performing patrolling duty @Somajiguda noticed two children requesting others for food at the road side, immediately he took out his lunch box & served food to the hungry children. pic.twitter.com/LTNjihUawn
— Telangana State Police (@TelanganaCOPs) May 17, 2021
ನಮ್ಮೊಳಗಿನ ಮಾನವೀಯತೆಯ ವ್ಯಕ್ತತೆಗೆ ಇಂತಹ ಉತ್ತಮ ದಾರಿ ಖಂಡಿತ ಸಿಗುವುದಿಲ್ಲ, ಕಣ್ಣುಗಳು ಒದ್ದೆಯಾದವು. ನಿಮಗೆ ದೇವರು ಆಶೀರ್ವದಿಸುತ್ತಾನೆ ಎಂದು ಐಪಿಎಸ್ ಸುಮತಿ ಎಂಬುವವರು ಟ್ವೀಟ್ ಮಾಡಿದ್ದಾರೆ.
#ActOfKindness
Panjagutta Traffic Police Constable Mr. Mahesh while performing patrolling duty @Somajiguda noticed two children requesting others for food at the road side, immediately he took out his lunch box & served food to the hungry children. pic.twitter.com/LTNjihUawn
— Telangana State Police (@TelanganaCOPs) May 17, 2021
ಈ ವಿಡಿಯೋವನ್ನು ನೋಡಿದ ಹೈದರಾಬಾದ್ ಕಮಿಷನರ್ ಅಂಜನಿ ಕುಮಾರ್ ಅವರು ಮಹೇಶ್ ಕುಮಾರ್ ಅವರನ್ನು ಆಹ್ವಾನಿಸಿ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ