ಮಹಿಳಾ ಸುರಕ್ಷತೆ ಬಗ್ಗೆ ಸಲಹೆ ನೀಡಿದ ಹೈದರಾಬಾದ್​ ಪೊಲೀಸರು; ಗಂಡಸರಿಗೆ ಮೊದಲು ಪಾಠ ಹೇಳಿ ಎಂದ ಟ್ವೀಟಿಗರು

ಪುರಷರಿಂದ ನಾವು ಅತ್ಯಾಚಾರಕ್ಕೆ ಒಳಗಾಗುತ್ತಿರುವುದು. ಹಾಗಾಗಿ ಅವರಿಗೆ ಅತ್ಯಾಚಾರ ಮಾಡಬೇಡಿ ಎಂದು ಸಲಹೆ ನೀಡಿ ನಮಗಲ್ಲ. ಪುರಷರ ಅಟ್ಟಹಾಸಕ್ಕೆ ನಾವು ಯಾಕೆ ದಂಡ ಕಟ್ಟಬೇಕು. ಸಮಸ್ಯೆ ಇರುವುದು ಅವರಲ್ಲಿ. ಪುರುಷರಿಗೆ ಹೇಳಿ ಈ ರೀತಿಯ ದುಷ್ಕೃತ್ಯ ನಡೆಸದಂತೆ ಸಲಹೆ ನೀಡಿ ಎಂದು ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Seema.R | news18-kannada
Updated:December 2, 2019, 5:16 PM IST
ಮಹಿಳಾ ಸುರಕ್ಷತೆ ಬಗ್ಗೆ ಸಲಹೆ ನೀಡಿದ ಹೈದರಾಬಾದ್​ ಪೊಲೀಸರು; ಗಂಡಸರಿಗೆ ಮೊದಲು ಪಾಠ ಹೇಳಿ ಎಂದ ಟ್ವೀಟಿಗರು
ಹೈದರಾಬಾದ್​ ಪೊಲೀಸ್​ ಕಮಿಷನರ್​ ಅಂಜನಿ ಕುಮಾರ್​
 • Share this:
ಹೈದ್ರಾಬಾದ್​​ (ಡಿ.2): ತೆಲಂಗಾಣದ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಮಹಿಳಾ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಸಂಸತ್​ನಲ್ಲಿ ಸದಸ್ಯರು ಧ್ವನಿ ಎತ್ತಿದ್ದಾರೆ.

ನಗರದಲ್ಲಿ ನಡೆದ ಈ ಘಟನೆ ಬಳಿಕ ಎಚ್ಚೆತ್ತ ತೆಲಂಗಾಣ ಪೊಲೀಸರು ಈಗ ಮಹಿಳಾ ಸುರಕ್ಷತೆ ಬಗ್ಗೆ ಸಲಹೆ ನೀಡಿದ್ದಾರೆ. ಪ್ರಯಾಣಿಸುವ ವೇಳೆ ಮಹಿಳೆಯರು ಹಾಗೂ ಯುವತಿಯರು ಎಚ್ಚರವಹಿಸುವಂತೆ ಹೇಳಿ ಅವರು ನೀಡಿರುವ ಸಲಹೆಗಳಿಗೆ ಈಗ ವ್ಯಾಪಾಕ ಖಂಡನೆ ವ್ಯಕ್ತವಾಗಿದೆ.ಪ್ರತಿಯೊಬ್ಬ ಮಹಿಳೆ ಹಾಗೂ ಯುವತಿಗೆ ಪ್ರಮುಖವಾದ ಸಂದೇಶ ಎಂಬ ಹೆಸರಿನಲ್ಲಿ ಹೈದ್ರಾಬಾದ್​ ಪೊಲೀಸ್​ ಕಮಿಷನರ್​ ಅಂಜನಿ ಕುಮಾರ್​ ಈ ಸಲಹೆಗಳನ್ನು ಬಿಡುಗಡೆ ಮಾಡಿದ್ದಾರೆ.  • ಮನೆಯಿಂದ ಹೊರಡುವ ಮುನ್ನ ನೀವು ಎಲ್ಲಿಗೆ ಹೋಗುತ್ತಿದ್ದೀರಾ ಎಂಬ ಬಗ್ಗೆ ನಿಮ್ಮ ಕುಟುಂಬ ಅಥವಾ ಹತ್ತಿರದ ಸ್ನೇಹಿತರು/ಬಂದುಗಳಿಗೆ ತಿಳಿಸಿ.

 • ಸಾಧ್ಯವಾದರೆ ಅವರಿಗೆ ನೀವು ತಲುಪಲಿರುವ ಸ್ಥಳವನ್ನು ಕೂಡ ಸಂದೇಶ ರವಾನಿಸಿರಿ ಎಂದಿದ್ದಾರೆ.

 • ಮೂರನೇ ಅಂಶವಾಗಿ ನೀವು ಪ್ರಯಾಣಿಸುವ ಟ್ಯಾಕ್ಸಿ ಅಥವಾ ಆಟೋ ನಂಬರ್​ ಪ್ಲೇಟ್​, ಡ್ರೈವರ್​ಗಳ ಮಾಹಿತಿಯನ್ನು ಕುಟುಂಬಸ್ಥರೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.

 • ಅಪರಿಚಿತ ಸ್ಥಳಕ್ಕೆ ಹೋಗುವ ಮುನ್ನ ಆ ಮಾರ್ಗದ ಬಗ್ಗೆ ತಿಳಿದುಕೊಳ್ಳಿ.

 • ಜನಸಂದಣಿ ಪ್ರದೇಶದಲ್ಲಿ ಕಾಯಿರಿ. ವಿರಳ ಜನಸಂದಣಿ ಪ್ರದೇಶದಲ್ಲಿ ಸಂಚರಿಸಬೇಡಿ. ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲು ಹಿಂಜರಿಯಬೇಡಿ. ಪೊಲೀಸರ ಗಸ್ತು ವಾಹನ, ಮೋಟರ್​ ಸೈಕಲ್​ಗಳು ನಿಮ್ಮ ಸುರಕ್ಷತೆಗಾಗಿಯೇ ಇರುವುದು.

 • ನಿಮ್ಮ ಸುತ್ತಮುತ್ತ ಯಾರು ಕಂಡು ಬರದಿದ್ದರೆ, ಹತ್ತಿರದ ಅಂಗಡಿ, ವಾಣಿಜ್ಯ ಸಂಕೀರ್ಣ ಬಳಿ ಹೋಗಿ. ವಾಹನ ಸಂಚಾರ ಪ್ರದೇಶದಲ್ಲಿ ನಿಮ್ಮನ್ನು ಗಮನಿಸಲು ಸಾಧ್ಯ ಅಂತಹ ಪ್ರದೇಶದಲ್ಲಿರಿ

 • 100ಕ್ಕೆ ಕರೆ ಮಾಡಲು ಸದಾ ಸಿದ್ಧವಿರಿ.

 • ತೆಲಂಗಾಣ ಮೊಬೈಲ್​ ಅಪ್ಲಿಕೇಶನ್ Hawk Eye ಡೌನ್​ಲೋಡ್​ ಮಾಡಿಕೊಳ್ಳಿ.

 • ಅನುಮಾನಸ್ಥದ ಸನ್ನಿವೇಶದಲ್ಲಿ ಪ್ರಯಾಣಿಕರ ಬಳಿ ಸಹಾಯ ಕೇಳಿ.

 • ಯಾವುದೆ ಪ್ರಯಾಣಿಕರು, ದಾರಿಹೋಕರು ಸಿಗದಿದ್ದಾಗ ಕುಟುಂಬಸ್ಥರ ಜೊತೆ  ಪೊಲೀಸರೊಂದಿಗೆ ಮಾತನಾಡುವಂತೆ ಮಾತನಾಡಿ. ಹಾಗೇ ನಿಮಗೆ ಭಯಮೂಡಿಸುವ ವ್ಯಕ್ತಿಯ ಮಾಹಿತಿ ಹಂಚಿಕೊಳ್ಳಿ.

 • ಧೈರ್ಯವಾಗಿ ಜೋರಾಗಿ ಮಾತಾಡಿ. ಅಗತ್ಯ ಬಿದ್ದಾಗ ಜೋರಾಗಿ ಕಿರುಚಿಕೊಳ್ಳಿ.

 • ಅಸಹಾಯಕ ಸ್ಥಿತಿಯಲ್ಲಿ ನೀವು ಸಿಲುಕಿದಾಗ ಜೋರಾಗಿ ಕೂಗಿ ಜನಸಂದಣಿ ಪ್ರದೇಶದತ್ತ ಓಡಿ.

 • ಅಪರಾಧ ತಡೆಗೆ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡೋಣ. ಇದಕ್ಕಾಗಿ ನಿಮ್ಮ ಸ್ಥಳೀಯ ದುಷ್ಟರ ಬಗ್ಗೆ ಮಾಹಿತಿ ನೀಡಿ.


ಈ ರೀತಿಯಾಗಿ ಏನು ಮಾಡಬೇಕು. ಮಾಡಬಾರದು ಎಂಬ ಬಗ್ಗೆ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಮಹಿಳೆಯರ ಸುರಕ್ಷತೆಗೆ ಬದ್ದವಾಗಿರುವುದಾಗಿ ತಿಳಿಸಿದ್ದಾರೆ.

ಇದಕ್ಕೆ ಟ್ವೀಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು. ಪುರಷರಿಂದ ನಾವು ಅತ್ಯಾಚಾರಕ್ಕೆ ಒಳಗಾಗುತ್ತಿರುವುದು. ಹಾಗಾಗಿ ಅವರಿಗೆ ಅತ್ಯಾಚಾರ ಮಾಡಬೇಡಿ ಎಂದು ಸಲಹೆ ನೀಡಿ ನಮಗಲ್ಲ. ಪುರಷರ ಅಟ್ಟಹಾಸಕ್ಕೆ ನಾವು ಯಾಕೆ ದಂಡ ಕಟ್ಟಬೇಕು. ಸಮಸ್ಯೆ ಇರುವುದು ಅವರಲ್ಲಿ. ಪುರುಷರಿಗೆ ಹೇಳಿ ಈ ರೀತಿಯ ದುಷ್ಕೃತ್ಯ ನಡೆಸದಂತೆ ಎಂದು ಸಲಹೆ ನೀಡಿದ್ದಾರೆ.

 ಮಹಿಳೆಯರು ತಮ್ಮ ಸುರಕ್ಷತೆ ಬಗ್ಗೆ ಈಗಾಗಲೇ ಅನೇಕ ಸಲಹೆಗಳನ್ನು ಅನುಸರಿಸುತ್ತಿದ್ದಾರೆ. ಮೊದಲು ಶಾಲೆ ಕುಟುಂಬಗಳಲ್ಲಿ ಈ ರೀತಿಯ ಕೃತ್ಯ ಎಸಗದಂತೆ ಪುರುಷರಿಗೆ ಸಲಹೆ ನೀಡಿ ಎಂದಿದ್ದಾರೆ.
First published: December 2, 2019, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading