ಹೈದರಾಬಾದ್​​ನ ಗೌಸಿಯಾನಗರದಲ್ಲಿ ಭಾರೀ ಮಳೆಗೆ ಕಾಂಪೌಂಡ್​ ಕುಸಿದು 8 ಮಂದಿ ಸಾವು

ಘಟನೆಯಲ್ಲಿ ಮೃತಪಟ್ಟವರನ್ನು ಸಮದ್ ರಬ್ಬಾನಿ(35) ಮತ್ತು ಈತನ ಹೆಂಡತಿ ಸಬಾ ಹಸ್ಮಿ(26), ಫೌಸಿಯಾ ನಾಜ್ ಮತ್ತು ಆಕೆಯ ಇಬ್ಬರು ಮಕ್ಕಳು ಸೈದ್ ಜಾಯಿನ್(3), 19 ದಿನದ ಮಗು ಜೊಹಾಯಿದ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

news18-kannada
Updated:October 14, 2020, 8:08 AM IST
ಹೈದರಾಬಾದ್​​ನ ಗೌಸಿಯಾನಗರದಲ್ಲಿ ಭಾರೀ ಮಳೆಗೆ ಕಾಂಪೌಂಡ್​ ಕುಸಿದು 8 ಮಂದಿ ಸಾವು
ಸಾಂದರ್ಭಿಕ ಚಿತ್ರ
  • Share this:
ಹೈದರಾಬಾದ್(ಅ.14): ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎರಡು ಮನೆಗಳ ಮೇಲೆ ಕಾಂಪೌಂಡ್​ ಕುಸಿದು ಸುಮಾರು 8 ಮಂದಿ ಮೃತಪಟ್ಟಿರುವ ಘಟನೆ ಹೈದರಾಬಾದ್​ನ ಚಂದ್ರಯಾನಗುಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯ ಗೌಸಿಯಾನಗರದಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದೊಡ್ಡ ದುರಂತದಲ್ಲಿ ಒಂದೇ ಕುಟುಂಬದ ಐವರು ಹಾಗೂ ಮೂವರು ಪಕ್ಕದ ಮನೆಯವರು ಸಾವನ್ನಪ್ಪಿದ್ದಾರೆ. ಈ ಕಾಂಪೌಂಡ್ ಕುಸಿದ ಘಟನೆ ಸಂಬಂಧ ಚಂದ್ರಯಾನ್​ಗುಟ್ಟ ಪೊಲೀಸರು ಐಪಿಸಿ ಸೆಕ್ಷನ್ 304 ಮತ್ತು 337-ನಿರ್ಲಕ್ಷ್ಯ ಕಾಯ್ದೆಯಡಿ ಕಾಂಪೌಂಡ್ ಮಾಲೀಕನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಬುಧವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ಚಂದ್ರಯಾನ್​ಗುಟ್ಟ ಪೊಲೀಸರು ಗೌಸಿಯಾನಗರದ ನಿವಾಸಿಯಾದ ಮೊಹಮ್ಮದ್ ನವಾಜ್ ಹಕ್ನಿ ಮತ್ತು ಆತನ ಮಗ ಮೊಹ್ದ್ ಜಹಾಂಗೀರ್ ಎಂಬುವವರಿಂದ ದೂರು ಸ್ವೀಕಾರ ಮಾಡಿದ್ದಾರೆ.

ಅ. 17ರಂದು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ದರ್ಶನಕ್ಕೆ ಇಲ್ಲ ಅವಕಾಶ

ಘಟನೆಯಲ್ಲಿ ಮೃತಪಟ್ಟವರನ್ನು ಸಮದ್ ರಬ್ಬಾನಿ(35) ಮತ್ತು ಈತನ ಹೆಂಡತಿ ಸಬಾ ಹಸ್ಮಿ(26), ಫೌಸಿಯಾ ನಾಜ್ ಮತ್ತು ಆಕೆಯ ಇಬ್ಬರು ಮಕ್ಕಳು ಸೈದ್ ಜಾಯಿನ್(3), 19 ದಿನದ ಮಗು ಜೊಹಾಯಿದ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 31 ವರ್ಷದ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳದ ಮಾಲೀಕ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ, ನಿರ್ಲಕ್ಷ್ಯ ವಹಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ನಿವಾಸಿಗಳು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು, ಶಾಸಕ ಅಕ್ಬರುದ್ದೀನ್ ಓವೈಸಿ ಆಸ್ಪತ್ರೆಗೆ ಭೇಟಿ ನೀಡಿ ಈ ದುರಂತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ್ದಾರೆ.
Published by: Latha CG
First published: October 14, 2020, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading