Asaduddin Owaisi: ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದ ಅಸಾದುದ್ದೀನ್ ಓವೈಸಿ

ನರೇಂದ್ರ ಮೋದಿ ಮತ್ತು ಅಸಾದುದ್ದೀನ್ ಓವೈಸಿ

ನರೇಂದ್ರ ಮೋದಿ ಮತ್ತು ಅಸಾದುದ್ದೀನ್ ಓವೈಸಿ

Lok Sabha election 2024: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಸದ ಓವೈಸಿ ಕಟುವಾಗಿ ಟೀಕಿಸಿದ್ದಾರೆ.

  • Share this:

ಹೈದರಾಬಾದ್: 2024ರಲ್ಲಿ ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಹೇಳಿದ್ದಾರೆ. ದೇಶದಲ್ಲಿ ಸಮಿಶ್ರ ಸರ್ಕಾರ ಅಥವಾ ದುರ್ಬಲ ಪ್ರಧಾನಿ (Weaker Prime Minister) ಬಂದರಾದರೂ ದುರ್ಬಲ ವರ್ಗದವರ ಅಭಿವೃದ್ಧಿ ಆಗಬಹುದು ಓವೈಸಿ ಹೇಳಿದ್ದಾರೆ. ದೇಶಕ್ಕೆ ಸದ್ಯ "ಖಿಚಡಿ" ಸರ್ಕಾರದ ಅಗತ್ಯವಿದೆ.  ಶನಿವಾರ ಮುಂದಿನ ಲೋಕಸಭೆ ಚುನಾವಣೆಯ (Loksabha Election 2024) ಕುರಿತು ಮಾತನಾಡಿದ ಅವರು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಸಂಸದ ಓವೈಸಿ ಕಟುವಾಗಿ ಟೀಕಿಸಿದ್ದಾರೆ. 


ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಮ್ ಆದ್ಮಿ ಪಕ್ಷ (ಎಎಪಿ) ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.  ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳ ವಿವಾದಾತ್ಮಕ ಬಿಡುಗಡೆಯ ಬಗ್ಗೆ ಮೌನ ವಹಿಸಿರುವುದರಿಂದ ಗುಜರಾತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕಿಂತ ಭಿನ್ನವಾಗಿಲ್ಲ ಎಂದು  ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕೆ ನಡೆಸಿದ್ದಾರೆ.


ಗುಜರಾತ್​ನಲ್ಲಿ ಕಣಕ್ಕಿಳಿಯಲು ತಯಾರಿ
ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Rahul Gandhi Marriage: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ಪ್ರಸ್ತಾಪ!


ಶಕ್ತಿಶಾಲಿ ಪ್ರಧಾನಿಯಿಂದ ಬಲಿಷ್ಠರಿಗೆ ಮಾತ್ರ ಸಹಾಯ
ದೇಶಕ್ಕೆ ಈಗ ದುರ್ಬಲ ಪ್ರಧಾನಿಯ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ನಾವು ಒಬ್ಬ ಪ್ರಬಲ ಪ್ರಧಾನಿಯನ್ನು ನೋಡಿದ್ದೇವೆ. ಈಗ ನಮಗೆ ದುರ್ಬಲ ಪ್ರಧಾನಿ ಬೇಕು, ಇದರಿಂದ ಅವರು ದುರ್ಬಲರಿಗೆ ಸಹಾಯ ಮಾಡಬಹುದು. ಒಬ್ಬ ಶಕ್ತಿಶಾಲಿ ಪ್ರಧಾನಿ ಬಲಿಷ್ಠರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.


ತೆಲಂಗಾಂ ಸಿಎಂ ರಾಷ್ಟ್ರ ರಾಜಕಾರಣಕ್ಕೆ?
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಷ್ಟ್ರೀಯ ರಾಜಕಾರಣ ಪ್ರವೇಶಿಸುವ ಸುಳಿವು ನೀಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಯೋಜನೆ ರೂಪಿಸುತ್ತಿರುವ ಅವರು ದಸರಾ ಹಬ್ಬದ ವೇಳೆಗೆ ಈ ಕುರಿತು ಮಹತ್ವದ ಘೋಷಣೆಯನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ  ಸ್ಪರ್ಧಿಸುವ ಬಲವಾದ ಇಚ್ಛೆಯನ್ನೂ ಅವರು ಹೊಂದಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: NEET Exam Results: ನೀಟ್ ಪಾಸ್ ಮಾಡಿದ ಕಾರ್ಮಿಕನ ಮಗ, ತರಕಾರಿ ಮಾರಾಟಗಾರನ ಮಗಳು


ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾನುವಾರ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಅಲ್ಲದೇ ಅಕ್ಟೋಬರ್ 5 ರಂದು ದಸರಾ ಸಂದರ್ಭದಲ್ಲಿರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

top videos


    ಹೊಸ ಪಕ್ಷ ಅಥವಾ ಈಗಿನ ಪಕ್ಷವೇ ಮಾರ್ಪಾಟು?
    ಆದರೆ ಸದ್ಯ ಹುಟ್ಟಿಕೊಂಡಿರುವ ಅನುಮಾನಗಳು ಕೆ.ಚಂದ್ರಶೇಖರ್ ರಾವ್ ಹೊಸ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುತ್ತಾರೆಯೇ ಅಥವಾ ಟಿಆರ್​ಎಸ್ ಅನ್ನು ರಾಷ್ಟ್ರೀಯ ಪಕ್ಷವಾಗಿ ಪರಿವರ್ತಿಸುತ್ತಾರೆಯೇ ಎಂಬ ಪ್ರಶ್ನೆಗಳು ಸಹ ತಲೆಎತ್ತಿವೆ. ಸದ್ಯ ಈಗ ಇರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನೇ ಭಾರತೀಯ ರಾಷ್ಟ್ರ ಸಮಿತಿ ಎಂದು ಬದಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

    First published: