ಹೈದರಾಬಾದ್: ಖಾಸಗಿ ಆಸ್ಪತ್ರೆಗಳಲ್ಲಿ (Private Hospital) ಚಿಕಿತ್ಸೆ ಪಡೆಯುವುದು ಎಷ್ಟು ದುಬಾರಿ ಅನ್ನೋ ವಿಷಯ ಗೊತ್ತೇ ಇದೆ. ಅದರಲ್ಲೂ ಬಡವರು ಕಾಯಿಲೆ ಬಂದು ಖಾಸಗಿ ಆಸ್ಪತ್ರೆಗಳಿಗೆ ಸೇರಿದರೆ ಮುಗಿದೇ ಹೋಯಿತು. ಇರೋ ಬರೋ ಆಸ್ತಿ ಮಾರಿ ಆಸ್ಪತ್ರೆಗಳ ಬಿಲ್ (Hospital Bill) ಕಟ್ಟಬೇಕಾಗುತ್ತದೆ ಎಂದು ಸಾಕಷ್ಟು ಜನರು ಹೇಳೋದನ್ನು ಕೇಳಿದ್ದೇವೆ. ಇದೇ ರೀತಿ ಇತ್ತೀಚೆಗೆ ಹೈದರಾಬಾದ್ನ (Hydrabad) ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬರು (Patient) 10 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಕ್ಕೆ 54 ಲಕ್ಷರೂಪಾಯಿ (54 Lakh) ಬಿಲ್ ಅನ್ನು ಪಡೆದಿದ್ದಾರೆ. ಮಜ್ಲಿಸ್ ಬಚಾವೋ ತೆಹ್ರೀಕ್ (MBT) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್ನಲ್ಲಿ (Tweet) ರೋಗಿಯ ಬಿಲ್ ಮತ್ತು ವಿವರಗಳನ್ನು ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ
ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಸಿಟಿಜನ್ ಸ್ಪೆಷಾಲಿಟಿ ಆಸ್ಪತ್ರೆಯ ಬಿಲ್ ಪ್ರಕಾರ, 44 ವರ್ಷದ ಸೈಯದ್ ರಹಮತ್ ಉದ್ದೀನ್ ಎಂಬವರನ್ನು ಕಾರ್ಡಿಯೋಜೆನಿಕ್ ಆಘಾತ ಮತ್ತು ಇತರ ಸಂಕೀರ್ಣತೆಗಳ ನಡುವೆ ತೀವ್ರವಾದ ಎಡ ಕುಹರದ ಅಪಸಾಮಾನ್ಯ ಕ್ರಿಯೆಯನ್ನು ಅನುಭವಿಸಿದ ನಂತರ ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಆಸ್ಪತ್ರೆಯಲ್ಲಿ ಕೊರೊನರಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು.
.@TelanganaCMO Sir, Very strange that a patient Syed Rahmath Uddin has been charged Rs/ 54.0 lakhs by Citizen Hospital,Nallagandla, Serillingampally for 10 days,family paid Rs/ 20.0 lakhs till now./1@KTRTRS @cyberabadpolice @trsharish @pschandnr_cyb @KTRoffice @VijayGopal_ pic.twitter.com/9tnLbpdaup
— Amjed Ullah Khan MBT (@amjedmbt) January 22, 2023
ಒಟ್ಟಾರೆ 54 ಲಕ್ಷ ರೂ ಬಿಲ್ ವಿಧಿಸಿದ ಆಸ್ಪತ್ರೆ
ರೋಗಿಗೆ ಕನ್ಸಲ್ಟೇಷನ್ ಫೀಸ್ ಹೆಸರಿನಲ್ಲಿ 50,000 ರೂ. ಐಸಿಯು ಮತ್ತು ರೂಮ್ಗಳಿಗೆ 3,00,000 ರೂ. ಆಂಜಿಯೋಪ್ಲಾಸ್ಟಿ ಶುಲ್ಕವಾಗಿ ರೂ 4,00,000, ಔಷಧಗಳು ಮತ್ತು ಬಿಸಾಡುವ ವಸ್ತುಗಳಿಗೆ 11,00,000 ರೂ. ಪರಿಶೀಲನೆಗೆ 3,50,000 ರೂ. ಇತರ ಸಿಲರ್ಗಳಿಗೆ 5,00,00 ರೂ. ಶುಲ್ಕ ವಿಧಿಸಲಾಗಿದೆ. ಕಾರ್ಯವಿಧಾನಗಳು, ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬರೇನ್ ಆಮ್ಲಜನಕೀಕರಣಕ್ಕಾಗಿ ರ 18,00,000 ರೂ. ಮತ್ತು CRRT ರಕ್ತ ಶುದ್ಧೀಕರಣ ಚಿಕಿತ್ಸೆಗಾಗಿ 9,00,000 ರೂ. ಒಟ್ಟಾರೆಯಾಗಿ, 54,00,000 ರೂ. ಮೊತ್ತವನ್ನು ಬಿಲ್ ಮಾಡಲಾಗಿದೆ.
ಇದುವರೆಗೆ ಆಸ್ಪತ್ರೆಗೆ 20 ಲಕ್ಷ ರೂ. ಬಿಲ್ ಪಾವತಿಸಿರುವ ರೋಗಿ ಸಂಬಂಧಿಕರು
ಅಮ್ಜೆದ್ ಉಲ್ಲಾ ಖಾನ್ ಪ್ರಕಾರ, ರೋಗಿಯ ಕುಟುಂಬಸ್ಥರು ಇದುವರೆಗೆ ಆಸ್ಪತ್ರೆಗೆ 20 ಲಕ್ಷ ರೂ. ಪಾವತಿಸಿದ್ದು, ಆಸ್ಪತ್ರೆಯವರು ಇನ್ನೂ 29 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಲು ನಿರಾಕರಿಸಿದ ಆಸ್ಪತ್ರೆ ಅಧಿಕಾರಿ
ಟೈಮ್ಸ್ ನೌಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಐಪಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಶರತ್ ಚಂದ್ರ ಅವರು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬಿಲ್ ಅನ್ನು ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ರೋಗಿಗೆ ನೀಡಲಾಗಿತ್ತು. ರೋಗಿಯು ಅನೇಕ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಹೇಳಳಿದರು. ಬಳಿಕ ಮಾತು ಮುಂದುವರೆಸಲು ನಿರಾಕರಿಸಿದರು.
ಕೊರೊನಾ ವೇಳೆ ಸೋಂಕಿತ ಶವ ನೀಡಲು ಬಿಲ್ ಕಟ್ಟುವಂತೆ ಆಸ್ಪತ್ರೆ ಒತ್ತಾಯ
ಈ ಮುನ್ನ ಕೊರೊನಾ ಸಮಯದಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಗೆಸ್ಟ್ ಲೈನ್ ಸಮೀಪದ ಶ್ರೀ ಸಾಯಿ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಮೃತ ಸೋಂಕಿತನ ಶವ ನೀಡಲು ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ