Hyderabad Gangrape: ಗ್ಯಾಂಗ್​ರೇಪ್ ಆರೋಪಿಗೆ ಸ್ಟಾರ್ ಹೋಟೆಲ್ ಬಿರಿಯಾನಿ!

ಹೈದರಾಬಾದ್‌ನ ಘನತೆಗೆ ಮಸಿ ಬಳಿದ ಜೂಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ರಾಜಕಾರಣಿಗಳ ಪುತ್ರರಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ನೀಡಿರುವ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶಾದ್ಯಂತ ಸುದ್ದಿಯಾದ ಹೈದರಾಬಾದ್ ಗ್ಯಾಂಗ್ ರೇಪ್ (Gang Rape) ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ (Biriyani) ನೀಡಿರುವ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗಂಭೀರ ಅತ್ಯಾಚಾರ ಅಪರಾಧ ಎಸಗಿದ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಾದರೂ ರಾಯಲ್ಟಿ (Royalty) ಪಡೆಯುತ್ತಿದ್ದಾರೆಯೇ? ಹೈದರಾಬಾದ್ (Hyderabad) ಖ್ಯಾತ ಜೂಬಿಲಿ ಹಿಲ್ಸ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಸ್ಟಾರ್ ಹೋಟೆಲ್‌ನಿಂದ (Hotel) ಬಿರಿಯಾನಿ ಸಿಗುತ್ತಿದೆಯೇ? ಅಂದರೆ ಸೋಷಿಯಲ್ ಮೀಡಿಯಾದಲ್ಲಿ (Social Media) ಸೆನ್ಸೇಷನ್ ಆಗಿರುವ ಫೋಟೋಗಳನ್ನು ನೋಡಿದರೆ ಈ ಪ್ರಶ್ನೆಗೆ ಉತ್ತರ ಹೌದು. ಆದರೂ ಪೊಲೀಸರು ಬಿರಿಯಾನಿ ನೀಡಿ ರಾಜಾತಿಥ್ಯ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಟಿಆರ್‌ಎಸ್ (TRS), ಅದರ ಮಿತ್ರಪಕ್ಷ ಎಂಐಎಂ ಪ್ರಮುಖ ನಾಯಕರು ಮತ್ತು ಪ್ರಮುಖ ನಾಯಕರ ಪುತ್ರರು ಆರೋಪಿಯಾಗಿರುವ ಹೈದರಾಬಾದ್ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಬಿರಿಯಾನಿ ವಿತರಣೆ ತೀವ್ರ ಟೀಕೆಗೆ ಗುರಿಯಾಗಿದೆ.

ಎರಡು ವರ್ಷಗಳ ಹಿಂದೆ ದಿಶಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ಚಾರ್ಲಪಲ್ಲಿ ಜೈಲಿನಲ್ಲಿ ಮೊದಲ ದಿನವೇ ಮಟನ್ ಬಿರಿಯಾನಿ ನೀಡಿದ ಸಂದರ್ಭದಲ್ಲಿ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರು ಮತ್ತು ಕಾರಾಗೃಹದ ಅಧಿಕಾರಿಗಳು ಟೀಕಿಸಿದರು.

ಅಪ್ರಾಪ್ತ ಆರೋಪಿಗಳಿಗೆ ಬಿರಿಯಾನಿ ಭೋಜನ

ಇನ್ನು ಜುಬಿಲಿಹಿಲ್ಸ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಅಪ್ರಾಪ್ತ ಆರೋಪಿಗಳಿಗೂ ಸ್ಟಾರ್ ಹೋಟೆಲ್‌ನಿಂದ ಬಿರಿಯಾನಿ ತರಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಅಪ್ರಾಪ್ತ ಆರೋಪಿಗಳೆಲ್ಲ ವಿಐಪಿಗಳ ಮಕ್ಕಳು..! ಪ್ರಕರಣದ ತನಿಖೆ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿರುವಾಗಲೇ.. ಆರೋಪಿಗೆ ಸ್ಟಾರ್ ಹೋಟೆಲ್ ನಿಂದ ಬಿರಿಯಾನಿ ಪಾರ್ಸೆಲ್ ಬಂದಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Buffalo: ಎಮ್ಮೆಗಾಗಿ ಜಿದ್ದಾಜಿದ್ದಿ: ಅಸಲಿ ಮಾಲೀಕನನ್ನು ಪತ್ತೆಹಚ್ಚಲು ಹೀಗೆಲ್ಲಾ ಮಾಡೋದಾ?

ಸಾಮೂಹಿಕ ಅತ್ಯಾಚಾರಕ್ಕೆ ಬಳಸಿದ ಎರಡು ಕಾರುಗಳ ಮಧ್ಯದಿಂದ ಸಹಾಯಕರು ಬಿರಿಯಾನಿ ಪೊಟ್ಟಣಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಜುಬಿಲಿಹಿಲ್ಸ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ, ಪೊಲೀಸರು ಭಾನುವಾರ ಸೀನ್ ರೀ-ಕನ್ಸ್ಟ್ರಕ್ಷನ್ ಮೂಲಕ ತಮ್ಮ ವಶದಲ್ಲಿರುವ ಅಪ್ರಾಪ್ತ ಶಂಕಿತರೊಂದಿಗೆ ಸಾಮೂಹಿಕ ಅತ್ಯಾಚಾರ ಘಟನೆಗಳ ಸೀನ್ ರಿಕ್ರಿಯೇಟ್ ದಾಖಲಿಸಿದ್ದಾರೆ. ನಂತರ ಆರೋಪಿಗಳನ್ನು ಠಾಣೆಗೆ ಕರೆತರಲಾಯಿತು.

ಪೊಲೀಸರು ಹೇಳಿದ್ದೇನು?

ಕಸ್ಟಡಿಯಲ್ಲಿರುವ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಬಿರಿಯಾನಿ ನೀಡಿದ್ದಕ್ಕೆ ತೀವ್ರ ಟೀಕೆಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, "ಬಿರಿಯಾನಿ ನಮ್ಮ ಸಿಬ್ಬಂದಿಗಾಗಿ ತರಲಾಗಿದೆ" ಎಂದು ಪ್ರತಿಕ್ರಿಯಿಸಿದರು. ಆದರೆ ಇನ್ನೊಬ್ಬ ಅಧಿಕಾರಿ ಆರೋಪಿಗಾಗಿ ಕರೆತರಲಾಗಿದೆ ಎಂದು ಒಪ್ಪಿಕೊಂಡರು ಎಂದು ಆಂಧ್ರ ಜ್ಯೋತಿ ವರದಿ ಮಾಡಿದೆ. ಆರೋಪಿಗಳಿಗೆ ಮಾಮೂಲಿ ಊಟ ಬೇಡ ಎಂಬ ಕಾರಣಕ್ಕೆ ಬಿರಿಯಾನಿ ತರಬೇಕಾಯಿತು, ಆರೋಗ್ಯ ಕಾಪಾಡುವುದು ಪೊಲೀಸರ ಜವಾಬ್ದಾರಿ, ಬಿರಿಯಾನಿ ಹಾಕುವುದು ರಾಯಲ್ ಅಲ್ಲ ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Covid Tragedy: ಗಂಡನನ್ನು ಕಸಿದುಕೊಂಡ ಕೊರೊನಾ, ಪತಿಯ ಚಿತಾಭಸ್ಮವನ್ನು ಈ ಪತ್ನಿ ಏನು ಮಾಡಿದ್ದಾರೆ ನೋಡಿ

ಅಪ್ರಾಪ್ತರ ತನಿಖೆಯಲ್ಲಿ ಹಲವು ಅಂಶಗಳು ಪತ್ತೆಯಾಗಿವೆ. ಸಾದುದ್ದೀನ್ ಘಟನೆಯ ಅನುಕ್ರಮವನ್ನು ವಿವರಿಸಿದರು. ಪೊಲೀಸರು ಅಪ್ರಾಪ್ತ ಆರೋಪಿಗಳೊಂದಿಗೆ ಘಟನೆ ಮರುನಿರ್ಮಾಣ ಮಾಡಿದರು. ಇಡೀ ಘಟನೆ ಮೂರೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದಿದೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಅಪ್ರಾಪ್ತರನ್ನು ಸೀನ್‌ ರೀ-ಕನ್‌ಸ್ಟ್ರಕ್ಷನ್‌ಗೆ ಬಸ್‌ನಲ್ಲಿ ಕರೆದೊಯ್ದಿದೆ. ನಂತರ ಆರೋಪಿಗಳನ್ನು ಜುವೆನೈಲ್ ಹೋಮ್‌ಗೆ ಸ್ಥಳಾಂತರಿಸಲಾಯಿತು.

ಹೈದರಾಬಾದ್​ನಲ್ಲಿ ಸದ್ಯ ಈ ಪ್ರಕರಣ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹೈದರಾಬಾದ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ.
Published by:Divya D
First published: