ಅತ್ಯಾಚಾರಿಗಳನ್ನು ಹತ್ಯೆಗೈದ ಪೊಲೀಸರ ಮೇಲೆ ಹೂ ಎರಚಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ ತೆಲಂಗಾಣ ಜನ

ಪೊಲೀಸ್ ಕಾರ್ಯಾಚರಣೆಗೆ ಮೆಚ್ಚಿ ಸಾರ್ವಜನಿಕರು ಹೀಗೆ ಹೂ ಎರಚಿ ಸಾರ್ವಜನಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿರುವುದು, ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಭಾರತದ ಇತಿಹಾಸದಲ್ಲೇ ತೀರಾ ಅಪರೂಪದ ಘಟನೆ ಎಂದು ಬಣ್ಣಿಸಲಾಗುತ್ತಿದೆ.

MAshok Kumar | news18-kannada
Updated:December 6, 2019, 12:03 PM IST
ಅತ್ಯಾಚಾರಿಗಳನ್ನು ಹತ್ಯೆಗೈದ ಪೊಲೀಸರ ಮೇಲೆ ಹೂ ಎರಚಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ ತೆಲಂಗಾಣ ಜನ
ಅತ್ಯಾಚಾರಿಗಳ ಎನ್​ಕೌಂಟರ್ ನಡೆದ ಸ್ಥಳದಲ್ಲಿ ಪೊಲೀಸರ ಮೇಲೆ ಹೂ ಎರಚಿ ಧನ್ಯವಾದಗಳನ್ನು ಅರ್ಪಿಸಿರುವ ಸಾರ್ವಜನಿಕರು.
  • Share this:
ಹೈದರಾಬಾದ್ (ಡಿಸೆಂಬರ್ 06); ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕೂ ಜನ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಇಂದು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಇದೀಗ ದೇಶದೆಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಅತ್ಯಾಚಾರಿಗಳ ಹತ್ಯೆಯನ್ನು ಸ್ವಾಗತಿಸಿರುವ ತೆಲಂಗಾಣ ಜನ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ, ಘಟನೆ ನಡೆದ ಸ್ಥಳದಲ್ಲಿ ಪೊಲೀಸರ ಮೇಲೆ ಹೂ ಎರಚಿ ಅಭಿನಂದನೆ ಸಲ್ಲಿಸಿರುವ ಅಪರೂಪದ ಘಟನೆಗೆ ತೆಲಂಗಾಣ ಸಾಕ್ಷಿಯಾಗಿದೆ.

ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹಿರಿಯ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನವರ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಕರೆದುಕೊಂಡು ಘಟನೆ ನಡೆದ ಸ್ಥಳದ ಮಹಜರ್​ಗೆ ತೆರಳಿತ್ತು. ಆದರೆ, ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಹೀಗಾಗಿ ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿ ಆರೋಪಿಗಳ ಹತ್ಯೆ ಮಾಡಿದ್ದಾರೆ.ಹೀಗಾಗಿ ಇಂದು ಬೆಳಗ್ಗೆಯಿಂದ ಅತ್ಯಾಚಾರಿಗಳ ಹತ್ಯೆ ನಡೆದ ಸ್ಥಳವನ್ನು ಸುತ್ತುವರೆದಿರುವ ಪೊಲೀಸರು ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಆದರೆ, ಎನ್​ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ, ಎನ್​ಕೌಂಟರ್ ಮಾಡಿ ಅತ್ಯಾಚಾರಿಗಳ ಹತ್ಯೆ ಮಾಡಿರುವ ಪೊಲೀಸರ ಮೇಲೆ ಹೂ ಎರಚಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.ಪೊಲೀಸ್ ಕಾರ್ಯಾಚರಣೆಗೆ ಮೆಚ್ಚಿ ಸಾರ್ವಜನಿಕರು ಹೀಗೆ ಹೂ ಎರಚಿ ಸಾರ್ವಜನಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿರುವುದು, ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಭಾರತದ ಇತಿಹಾಸದಲ್ಲೇ ತೀರಾ ಅಪರೂಪದ ಘಟನೆ ಎಂದು ಬಣ್ಣಿಸಲಾಗುತ್ತಿದೆ.

ಇದನ್ನೂ ಓದಿ : ವಾರಂಗಲ್ ಮಾದರಿಯಲ್ಲೇ ನಡೆದೋಯ್ತು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗ ವಿಶ್ವನಾಥ್ ಸಜ್ಜನವರ್ ಖದರ್!
First published: December 6, 2019, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading