Hyderabad Child Rape Case| 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ!

ರೈಲಿನಲ್ಲಿ ಪರಾರಿಯಾಗುವ ವೇಳೆ ಪೊಲೀಸರು ತನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ವಿಚಾರ ತಿಳಿದು ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿ ರೈಲಿನಿಂದ ಹಾರಿದ್ದಾನೆ ಎಂದು ಹೇಳಲಾಗಿದೆ.

ಆರೋಪಿ ರಾಜು.

ಆರೋಪಿ ರಾಜು.

 • Share this:
  ಹೈದರಾಬಾದ್​ (ಸೆಪ್ಟೆಂಬರ್​ 16); ಸೆಪ್ಟೆಂಬರ್‌ 9 ರ ಗುರುವಾರದಂದು ಹೈದರಾಬಾದ್‌ನ (Hyderabad) ಸೈದಾಬಾದ್‌ನಲ್ಲಿ 6 ವರ್ಷದ ಬಾಲಕಿಯನ್ನು ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ (Rape and Murder) ಮಾಡಿ ಕೊಂದು ಪರಾರಿಯಾಗಿದ್ದ ಘಟನೆ ದೇಶದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಆತನನ್ನು ಎನ್​ಕೌಂಟರ್​ (Encounter) ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ನಡುವೆ ಆತನ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಆದರೆ, ಅತ್ಯಾಚಾರ ಆರೋಪಿ ಇಂದು ತೆಲಂಗಾಣದ (Telangana) ಸ್ಟೇಷನ್ ಘನಪುರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

  ಬಗ್ಗೆ ಮಾತನಾಡಿರುವ ಹೈದರಾಬಾದ್ ಪೂರ್ವ ವಲಯದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ರಮೇಶ್, "ಆರೋಪಿ ಸಾವನ್ನಪ್ಪಿರುವುದು ನಿಜ. ನಾನು ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯೊಂದಿಗೆ ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕು. ರೈಲಿನಲ್ಲಿ ಪರಾರಿಯಾಗುವ ವೇಳೆ ಪೊಲೀಸರು ತನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ವಿಚಾರ ತಿಳಿದು ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿ ರೈಲಿನಿಂದ ಹಾರಿದ್ದಾನೆ ಎಂದು ಹೇಳಲಾಗಿದೆ. ಆದರೆ, ಈ ಎಲ್ಲಾ ವಿವರಗಳನ್ನು ಮತ್ತಷ್ಟು ಖಚಿತಪಡಿಸಿಕೊಂಡ ನಂತರ ಮಾಧ್ಯಮದ ಜೊತೆಗೆ ಇನ್ನಷ್ಟು ಮಾಧ್ಯಮಗಳನ್ನು ಹಂಚಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

  ಆರೋಪಿ 30 ವರ್ಷದ ರಾಜು ಘಟನೆ ವರದಿಯಾದಾಗಿನಿಂದ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಲು ಪೊಲೀಸರು ಒಂಬತ್ತು ವಿಶೇಷ ತಂಡಗಳನ್ನು ರಚಿಸಿದ್ದರು. ಸೆಪ್ಟೆಂಬರ್ 14 ರಂದು, ಹೈದರಾಬಾದ್ ಪೊಲೀಸರು ಸಾರ್ವಜನಿಕರಿಗೆ ಆರೋಪಿಯ ದೈಹಿಕ ನೋಟದ ವಿವರಗಳೊಂದಿಗೆ ನೋಟಿಸ್ ನೀಡಿದ್ದರು ಮತ್ತು ಆತನ ಬಗ್ಗೆ ಮಾಹಿತಿ ಇರುವ ಯಾರಾದರೂ ಪೊಲೀಸರ ಮುಂದೆ ಬರುವಂತೆ ಮನವಿ ಮಾಡಿದರು, ಜೊತೆಗೆ ವಿಶ್ವಾಸಾರ್ಹ ಮಾಹಿತಿಗಾಗಿ 10 ಲಕ್ಷ ಬಹುಮಾನವನ್ನೂ ಘೋಷಿಸಿದ್ದರು.

  ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಎಂಬ ಮೂರು ಪೊಲೀಸ್ ಕಮಿಷನರೇಟ್‌ಗಳ ವ್ಯಾಪ್ತಿಯಲ್ಲಿ ನೂರಾರು ಪೊಲೀಸರನ್ನು ಒಳಗೊಂಡ ಹಲವಾರು ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿದ್ದವು. 10 ಲಕ್ಷ ಬಹುಮಾನವನ್ನು ಘೋಷಿಸಿದ ಒಂದು ದಿನದ ನಂತರ, ಪೋಲಿಸರು ಆತನ ಚಿತ್ರಗಳೊಂದಿಗೆ ಬೇಕಾಗಿರುವ ಪೋಸ್ಟರ್‌ಗಳನ್ನು ಸೆಪ್ಟೆಂಬರ್ 15 ರಂದು ಬಿಡುಗಡೆ ಮಾಡಿದ್ದರು. ಪೋಲಿಸ್ ಸಿಬ್ಬಂದಿ ಗೋಡೆಗಳು, ಬಸ್ಸುಗಳು ಮತ್ತು ಆಟೋ-ರಿಕ್ಷಾಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ಕಂಡುಬಂತು.

  ಇದನ್ನೂ ಓದಿ: ಹೈದರಾಬಾದ್; 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಪರಾರಿ; ಎನ್​ಕೌಂಟರ್​ಗೆ ಒತ್ತಾಯ

  ಆರೋಪಿಯನ್ನು ಹಿಡಿಯಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ, ಪೊಲೀಸ್ ಮಹಾನಿರ್ದೇಶಕ ಎಂ.ಮಹೇಂದರ್ ರೆಡ್ಡಿ ವೈಯಕ್ತಿಕವಾಗಿ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಅವರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಆಯುಕ್ತರ ಕಾರ್ಯಪಡೆ ಮತ್ತು ವಿಶೇಷ ಕಾರ್ಯಾಚರಣೆ ತಂಡದ (ಎಸ್‌ಒಟಿ) ಸಿಬ್ಬಂದಿಯನ್ನು ಬೃಹತ್ ಶೋಧ ಕಾರ್ಯಾಚರಣೆ ಗಾಗಿ ಬಳಸಿಕೊಳ್ಳಲಾಗಿತ್ತು. ಆದರೆ, ಇದೀಗ ಪೊಲೀಸರಿಂದ ತೀವ್ರ ಹುಟುಕಾಟಕ್ಕೆ ಒಳಗಾಗಿದ್ದ ವ್ಯಕ್ತಿ ಸಾವನ್ನಪ್ಪುವ ಮೂಲಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಲ್ಲದೆ, ಇನ್ನಷ್ಟು ಮಾಹಿತಿಗಳು ಶೀಘ್ರದಲ್ಲೇ ಹೊರ ಬೀಳುವ ಸಾಧ್ಯತೆಯೂ ಇದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: