ಗ್ರಾಹಕರೊಂದಿಗೆ ಸೆಕ್ಸ್​ಗೆ ನಿರಾಕರಣೆ: ಬಾರ್ ಡ್ಯಾನ್ಸರ್ ಬಟ್ಟೆಬಿಚ್ಚಿಸಿದ ದುರುಳರು

ಬಾರ್​ ಮ್ಯಾನೇಜ್​ಮೆಂಟ್​ ಬೇಡಿಕೆಯನ್ನು ಡ್ಯಾನ್ಸರ್​ ನಿರಾಕರಿಸಿದ ಕಾರಣ, ಒಬ್ಬ ವ್ಯಕ್ತಿ ಹಾಗೂ ನಾಲ್ವರು ಮಹಿಳೆಯರು ಸೇರಿ ಆಕೆಯ ಬಟ್ಟೆ ಬಿಚ್ಚಿ, ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.

Latha CG | news18
Updated:June 17, 2019, 5:10 PM IST
ಗ್ರಾಹಕರೊಂದಿಗೆ ಸೆಕ್ಸ್​ಗೆ ನಿರಾಕರಣೆ: ಬಾರ್ ಡ್ಯಾನ್ಸರ್ ಬಟ್ಟೆಬಿಚ್ಚಿಸಿದ ದುರುಳರು
ಸಾಂದರ್ಭಿಕ ಚಿತ್ರ
Latha CG | news18
Updated: June 17, 2019, 5:10 PM IST
ಹೈದರಾಬಾದ್​,(ಜೂ. 17): ಬಾರ್​ ಒಂದರಲ್ಲಿ ಡ್ಯಾನ್ಸರ್​ ಆಗಿರುವ ಮಹಿಳೆಯೊಬ್ಬಳು ಗ್ರಾಹಕರೊಂದಿಗೆ ಲೈಂಗಿಕ ಸಂಭೋಗ ನಡೆಸಲು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿರುವ ಅಮಾನವೀಯ ಘಟನೆ ಹೈದರಾಬಾದ್​ನ ಬೇಗುಂಪೇಟ್​ ಪ್ರದೇಶದಲ್ಲಿ ನಡೆದಿದೆ.

ಸಂತ್ರಸ್ತೆ ಕೆಲವು ತಿಂಗಳ ಹಿಂದೆ ಬೇಗಂಪೇಟೆ ಪ್ರದೇಶದ ಪಬ್​ವೊಂದರಲ್ಲಿ ಡ್ಯಾನ್ಸರ್​ ಆಗಿ ಕೆಲಸಕ್ಕೆ ಸೇರಿದ್ದಳು. ಕೆಲವು ದಿನಗಳ ಬಳಿಕ ಆ ಬಾರ್​ನ ಮ್ಯಾನೇಜರ್​ ತಮ್ಮ ಬಾರ್​ಗೆ ಬರುವ ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕೆಂದು ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ಪಂಜುಗುಟ್ಟ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಟೆಂಪೋ ಚಾಲಕನನ್ನು ನಡುರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು; ಮೂವರು ಸಿಬ್ಬಂದಿ ಅಮಾನತು

ಬಾರ್​ ಮ್ಯಾನೇಜ್​ಮೆಂಟ್​ ಬೇಡಿಕೆಯನ್ನು ಡ್ಯಾನ್ಸರ್​ ನಿರಾಕರಿಸಿದ ಕಾರಣ, ಒಬ್ಬ ವ್ಯಕ್ತಿ ಹಾಗೂ ನಾಲ್ವರು ಮಹಿಳೆಯರು ಸೇರಿ ಆಕೆಯ ಬಟ್ಟೆ ಬಿಚ್ಚಿ, ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಂಜುಗುಟ್ಟ ಪೊಲೀಸರು ನಾಲ್ವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...