ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಕೊಂದು ಸಾವಿರಾರು ತುಂಡುಗಳಾಗಿ ಕತ್ತರಿಸಿದ ಗಂಡ: ಪೊಲೀಸರ ರೋಚಕ ತನಿಖೆ ಓದಲೇಬೇಕು
Crime News: ನಾಲ್ಕು ವರ್ಷಗಳ ಹಿಂದೆ ರೂಬಿ ಮತ್ತು ದೀಪಕ್ ನಿರಾಲ ಮದುವೆಯಾಗಿದ್ದರು. ಕಾಣೆಯಾಗಿ ಮೂರು ವಾರಗಳ ನಂತರ ಭೀಕರ ಸತ್ಯ ಹೊರಬಂದಿದ್ದು, ಹೆಂಡತಿಯನ್ನು ಕೊಲೆ ಮಾಡಿ ಸಾವಿರಾರು ತುಂಡುಗಳಾಗಿ ಕತ್ತರಿಸಿ ನಿರಾಲ ಹೂತುಹಾಕಿದ್ದರು ಎಂಬುದು ಬೆಳಕಿಗೆ ಬಂದಿದೆ
ಮೀರತ್: ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಲಖನೌ ಮೂಲದ ಬ್ಯುಸಿನೆಸ್ಮನ್ ಒಬ್ಬರ ಮಗಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಪ್ರೀತಿಸಿ ಮದುವೆಯಾದ ನಂತರ ಸರ್ಧಾನ ನಗರದಲ್ಲಿ ಗಂಡನ ಜೊತೆ ವಾಸವಿದ್ದರು. ಗಂಡನ ಮನೆಯಿಂದ ಮೂರು ವಾರಗಳ ಹಿಂದೆ ರೂಬಿ ಕಾಣೆಯಾಗಿದ್ದರು. ರೂಬಿಯ ಗಂಡ ದೀಪಕ್ ನಿರಾಲ ವೃತ್ತಿಯಲ್ಲಿ ಕವಿಯಾಗಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾದ ಕಾರಣ ಅವರ ಮೇಲೆ ಯಾರಿಗೂ ಸಂಶಯ ಇರಲಿಲ್ಲ. ನಾಲ್ಕು ವರ್ಷಗಳ ಹಿಂದೆ ರೂಬಿ ಮತ್ತು ದೀಪಕ್ ನಿರಾಲ ಮದುವೆಯಾಗಿದ್ದರು. ಕಾಣೆಯಾಗಿ ಮೂರು ವಾರಗಳ ನಂತರ ಭೀಕರ ಸತ್ಯ ಹೊರಬಂದಿದ್ದು, ಹೆಂಡತಿಯನ್ನು ಕೊಲೆ ಮಾಡಿ ಸಾವಿರಾರು ತುಂಡುಗಳಾಗಿ ಕತ್ತರಿಸಿ ನಿರಾಲ ಹೂತುಹಾಕಿದ್ದರು ಎಂಬುದು ಬೆಳಕಿಗೆ ಬಂದಿದೆ.
ಮೀರತ್ ಪೊಲೀಸರ ಪ್ರಕಾರ ರೂಬಿಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಲಾಗಿತ್ತು. ಗಂಡ ಹೆಂಡತಿ ನಡುವೆ ದುಡ್ಡಿನ ವಿಚಾರಕ್ಕೆ ಗಲಾಟೆಯಾಗಿತ್ತು, ಈ ಕಾರಣಕ್ಕಾಗಿಯೇ ನಿರಾಲ ರೂಬಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿ ತುಂಡರಿಸಿದ ಮೃತ ಶರೀರವನ್ನು ಕ್ಯಾನಲ್ ಒಳಗೆ ಬಿಸಾಕಿದ್ದ. ಪೊಲೀಸರು ಈಗಾಗಲೇ ಕೊಲೆಗೆ ಬಳಸಲಾದ ಚಾಕು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ದೇಹದ ಭಾಗಗಳನ್ನು ಹುಡುಕುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ನಿರಾಲ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕ್ಕಾಗಿ ದಂಪತಿಗಳ ನಡುವೆ ಕಿತ್ತಾಟ:
ಸರ್ಧಾನ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬ್ರಿಜೇಶ್ ಕುಮಾರ್ ಪ್ರಕರಣದ ಮಾಹಿತಿಯನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದು, ರೂಬಿ ಮತ್ತು ನಿರಾಲ ನಡುವೆ 20 ಲಕ್ಷದ ವಿಚಾರಕ್ಕಾಗಿ ಜಗಳ ನಡೆದಿತ್ತು. ಈ ವಿಚಾರಕ್ಕಾಗಿ ಹಲವು ಬಾರಿ ಇಬ್ಬರೂ ಜಗಳವಾಡಿಕೊಂಡಿದ್ದರು. ಆಗಸ್ಟ್ 22ರ ಮುಂಜಾನೆ ನಿರಾಲ ಟೀ ಮಾಡಿಕೊಡುವಂತೆ ರೂಬಿಗೆ ಕೇಳಿದ್ದ. ಇದಕ್ಕೆ ರೂಬಿ ಸಾಧ್ಯವಿಲ್ಲ ಎಂದು ಹೇಳಿದ್ದಳು. ಇದರಿಂದ ಸಿಟ್ಟಾದ ನಿರಾಲ, ರೂಬಿಯ ತಲೆಗೆ ಗ್ಲಾಸಿನಿಂದ ಹೊಡೆದ. ಆಕೆ ಎಚ್ಚರ ತಪ್ಪಿ ಬಿದ್ದಳು. ಇದರಿಂದ ಭಯಗೊಂಡ ನಿರಾಲ, ಆಕೆಯನ್ನು ಸಾಯಿಸದಿದ್ದರೆ ಪೋಷಕರಿಗೆ ಈ ವಿಚಾರ ತಿಳಿಸಬಹುದು, ಇದರಿಂದ ತೊಂದರೆಯಾಗುತ್ತದೆ ಎಂದೆಣಿಸಿ ಐರನ್ ರಾಡ್ನಿಂದ ತಲೆಗೆ ಹೊಡೆದು ಸಾಯಿಸಿದ್ದಾನೆ. ಇದಾದ ನಂತರ ದೇಹವನ್ನು ಚಾಕುವಿನಿಂದ ಕತ್ತರಿಸಿ, ಭಾಗಗಳನ್ನು ಭಲ್ಸೋನಾ ಬ್ರಿಡ್ಜ್ನ ಕ್ಯಾನಲ್ ಒಳಗೆ ಬಿಸಾಕಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ನಿರಾಲ ತೀರ್ಥಯಾತ್ರೆ:
ಹೆಂಡತಿಯನ್ನು ಸಾಯಿಸಿದ ನಂತರ ನಿರಾಲ, ತೀರ್ಥಯಾತ್ರೆಗೆ ಹೊರಟಿದ್ದಾನೆ. ಹರಿದ್ವಾರ, ಮಸೂರಿ, ರಿಶಿಕೇಷಕ್ಕೆ ಸ್ನೇಹಿತನೊಬ್ಬನ ಜೊತೆ ಆಗಸ್ಟ್ 3 ರಂದೇ ಹೋಗಿದ್ದಾನೆ. ಈ ಮೂಲಕ, ಹೆಂಡತಿ ಕಾಣೆಯಾದಾಗ ತಾನು ನಗರದಲ್ಲೇ ಇರಲಿಲ್ಲ ಎಂಬ ಅಲಿಬಿ ಸೃಷ್ಟಿಸಲು ಯತ್ನಿಸಿದ್ದಾನೆ. ದೃಶ್ಯಂ ಸಿನೆಮಾದಲ್ಲಿ ಹೇಗೆ ಮಾಡಿದ ಕೊಲೆಯನ್ನು ಮುಚ್ಚಿಹಾಕಲು ಅಲಿಬಿಗಳನ್ನು ಸೃಷ್ಟಿಸಿದಂತೆ, ನಿರಾಲ ಕೂಡ ಸೃಷ್ಟಿಸಿದ್ದಾನೆ. ಎಲ್ಲೆಲ್ಲೆ ಭೇಟಿ ನೀಡಿದ್ದಾನೋ ಅದೆಲ್ಲದರ ಟಿಕೆಟ್ಸ್, ಹೋಟೆಲ್ ಬಿಲ್ಸ್ ಎಲ್ಲವನ್ನೂ ಸುರಕ್ಷಿತವಾಗಿ ಇಟ್ಟುಕೊಂಡಿದ್ದಾನೆ. ರಕ್ಷಾಬಂಧನದ ದಿನ ಅತ್ತೆ ಮಾವನ ಮನೆಗೂ ಹೋಗಿಬಂದಿದ್ದಾನೆ. ಆದರೆ ಆಗಸ್ಟ್ ಎರಡನೇ ತಾರೀಕು ಆತ ಊರಿನಲ್ಲೇ ಇರುವುದು ತಿಳಿದುಬಂದಿದೆ. ಇದರಿಂದ ನಿರಾಲ ಮಾಡಿದ್ದ ದೃಶ್ಯ ಪ್ಲಾನ್ ಫ್ಲಾಪ್ ಆಗಿದೆ.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ