ಲವ್​ ಸೆಕ್ಸ್ ದೋಖಾ: ತಡರಾತ್ರಿ ಮನೆಗೆ ಬಂದ ಗಂಡನಿಗೆ ಕೇಳಿದ್ದು ಮತ್ತೊಬ್ಬನ ಜೊತೆ ಇದ್ದ ಹೆಂಡತಿಯ ಚಕ್ಕಂದದ ನಗು!

ಮೈರಾ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿತ್ತು. ಆಕೆಗೆ ಶಕೀರ್ ಹೆಸರಿನ ಬಾಯ್​ಫ್ರೆಂಡ್​ ಇದ್ದ. ಇವರಿಬ್ಬರೂ ತುಂಬ ಆಪ್ತರಾಗಿದ್ದರು. ಆಗಗ ಮನೆಯಲ್ಲಿ ಭೇಟಿಯಾಗುತ್ತಿದ್ದರು. ಇವರಿಬ್ಬರ ನಡುವೆ ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಸಂಪರ್ಕ ಇತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಾಷಿಂಗ್ಟನ್​ : ಅಮೆರಿಕದ ಕೊಲರಾಡೋ ನಗರವನ್ನು ಕತ್ತಲು ಸಂಪೂರ್ಣವಾಗಿ ಆವರಸಿಕೊಂಡಿತ್ತು. ಮನೆಯ ಹೊರಗೆ ಆಗತಾನೇ ಮಳೆ ಜಿಟಿಜಿಟಿ ಹನಿ ಹಾಕುತ್ತಿತ್ತು. ಆತ ಕಾರನ್ನು ನಿಲ್ಲಿಸಿ, ಫ್ಲಾಟ್ ಒಳಗೆ ಬಂದ. ರೂಮ್​ನಿಂದ ಪರ ಪುರುಷನ ಜೊತೆಗೆ ಹೆಂಡತಿಯ ಆನಂದದ ನಗು ಕೇಳುತ್ತಿತ್ತು. ಆಗ ಡ್ರಾವರ್ನಿಂದ ಬಂದೂಕು ತೆಗೆದು ರೂಮ್​ನತ್ತ ಹೆಜ್ಜೆ ಹಾಕಿದ. ಮುಂದೇನಾಯಿತು ಎಂದು ಹೇಳುವ ಮೊದಲು ಈ ಕಥೆ ಇಲ್ಲಿಯವರೆಗೆ ಬಂದಿದ್ದು ಹೇಗೆ ಎಂಬ ಹಿನ್ನೆಲೆ ಹೇಳಿ ಬಿಡುತ್ತೇನೆ.

  ಆತನ ಹೆಸರು ಇಸಾ. ಕಾನ್​ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆತನಿಗಿನ್ನೂ 20ರ ಹರೆಯ. ಆತ ಮೈರಾ ಎಂಬಾಕೆಯ ಜೊತೆ ಉತ್ತಮ ಗೆಳೆತನ ಹೊಂದಿದ್ದ. ಆಪ್ತತೆ ಹೆಚ್ಚಾಗಿ ಗೆಳೆತನ ಪ್ರೀತಿಯಾಗಿ ಬದಲಾಗಿತ್ತು. ಹಾಗಾಗಿ ಮೈರಾಳನ್ನು ಇಸಾ ವರಿಸಿದ್ದ.

  ಮೈರಾ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿತ್ತು. ಆಕೆಗೆ ಶಕೀರ್ ಹೆಸರಿನ ಬಾಯ್​ಫ್ರೆಂಡ್​ ಇದ್ದ. ಇವರಿಬ್ಬರೂ ತುಂಬ ಆಪ್ತರಾಗಿದ್ದರು. ಆಗಗ ಮನೆಯಲ್ಲಿ ಭೇಟಿಯಾಗುತ್ತಿದ್ದರು. ಇವರಿಬ್ಬರ ನಡುವೆ ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಸಂಪರ್ಕ ಇತ್ತು. ಇದರ ಪರಿಣಾಮ ಮೈರಾ ಗರ್ಭಿಣಿಯಾದಳು. ಮಗು ಹುಟ್ಟಿತು. ಈ ವೇಳೆ ಶಕೀರ್​ಗೂ ಮೈರಾಗೂ ಜಗಳವಾಯಿತು. ಆತ ಮಗುವಿನ ಜವಾಬ್ದಾರಿ ಪಡೆಯಲು ಹಿಂಜರಿದ. ಇಬ್ಬರೂ ದೂರವಾದರು.

  ವಿವಾಹಕ್ಕೂ ಮೊದಲು ಇಸಾಗೆ ಮೈರಾ ತನ್ನ ಜೀವನದ ವ್ಯಥೆಯ ಬಗ್ಗೆ ಹೇಳಿಕೊಂಡಿದ್ದಳು. ಅಷ್ಟೇ ಅಲ್ಲ ಶಕೀರ್​ನಿಂದ ನನಗೆ ಮಗುವಾಗಿದೆ. ಆದರೆ ನಾವಿಬ್ಬರೂ ಈಗ ಸಂಪರ್ಕದಲ್ಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಳು. ಮೈರಾಳ ಮೈಮಾಟಕ್ಕೆ ಇಸಾ ಆಕರ್ಷಿತನಾಗಿದ್ದ. ಹಾಗಾಗಿ ದೊಡ್ಡ ಮನಸ್ಸು ಮಾಡಿ ಆಕೆಯನ್ನು ಮದುವೆಯಾದ.

  ಇಸಾ-ಮೈರಾ ದಾಂಪತ್ಯ ಜೀವನ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ ಇಸಾ ಕರ್ತವ್ಯಕ್ಕೆ ಹೋದಾಗ ಮೈರಾಗೆ ಒಂಟಿತನ ಕಾಡುತ್ತಿತ್ತು. ಆಗ ಆಕೆಗೆ ನೆನಪಾಗುತ್ತಿದ್ದುದು ಶಕೀರ್. ಮತ್ತೆ ಆತನ ಜೊತೆ ಸಂಪರ್ಕಕ್ಕೆ ಬಂದಳು. ಮೊದಲಿನಂತೆ ಇಬ್ಬರೂ ಮಾತುಕತೆ ಆರಂಭಿಸಿದರು. ಆಗ ಮೈರಾಗೆ ಎರಡು ದೋಣಿಯ ಮೇಲೆ ಕಾಲಿಟ್ಟ ಅನುಭವವಾಗುತ್ತಿತ್ತು. ಜೀವನ ಕೊಟ್ಟ ಇಸಾ ಜೊತೆ ಹೋಗುವುದೇ ಅಥವಾ ದೈಹಿಕ ಸುಖ ಪಡೆದು ಅರ್ಧ ದಾರಿಯಲ್ಲಿ ಕೈಬಿಟ್ಟ ಶಕೀರನ ಹಿಂದೆ ಸಾಗುವುದೇ ಎನ್ನುವ ಗೊಂದಲದಲ್ಲಿದ್ದಳು ಮೈರಾ.

  ಎಷ್ಟಂದರೂ ಹೆಣ್ಣಿನ ಮನಸ್ಸು ಮೃದು ನೋಡಿ. ಅದರ ಲಾಭ ಪಡೆದಿದ್ದ ಶಕೀರ್. ತಾವು ಕಳೆದ ಸುಮಧುರ ಕ್ಷಣಗಳನ್ನು ಅವಳ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ. ಆಕೆ ಕರಗಿದಳು. ಮತ್ತೆ ಇಬ್ಬರೂ ಮೊದಲಿನಂತಾದರು! ಇಸಾ ಮನೆಗೆ ಬರುವ ಸಮಯವನ್ನು ಕರಾರುವಕ್ಆಗಿ ತಿಳಿದ್ದಳು ಮೈರಾ. ಹಾಗಾಗಿ ಇಸಾ ಇಲ್ಲದ ಸಮಯದಲ್ಲಿ ಶಕೀರ್ ಜೊತೆ ಚಕ್ಕಂದ ಶುರುವಿಟ್ಟುಕೊಂಡಳು. ಶಕೀರ್ ನಿತ್ಯ ಆಕೆಯ ಮನೆಗೆ ಬರುತ್ತಿದ್ದ. ಇಸಾ ಜೊತೆ ದೈಹಿಕ ಸಂಪರ್ಕ ಹೊಂದುತ್ತಿದ್ದ. ಆತನಿಗೆ ಬೇಕಿದ್ದಿದ್ದು ಅಷ್ಟೇ ಆಗಿತ್ತು.

  ಒಂದು ದಿನ ಇಸಾ ಬೇಗ ಮನೆಗೆ ಬಂದ. ಎಷ್ಟೇ ಬೆಲ್ ಮಾಡಿದರೂ ಹೆಂಡತಿ ಬಾಗಿಲು ತೆಗೆಯುತ್ತಿಲ್ಲ. ಸ್ವಲ್ಪ ಸಮಯದ ನಂತರ ಆಕೆ ಡೋರ್ ತೆಗೆದಳು. ಹೆಂಡತಿ ಜೊತೆಗೆ ಶಕೀರ್ ಕೂಡ ಇದ್ದ. ‘ನಮ್ಮನ್ನು ಭೇಟಿ ಮಾಡಲೆಂದು ಶಕೀರ್ ಬಂದಿದ್ದ’ ಎಂದು ಪತ್ನಿ ಸಮಜಾಯಿಶಿ ನೀಡಿದಳು. ಆಗ ಆತನಿಗೆ ಅನುಮಾನ ಕಾಡಲು ಆರಂಭವಾಗಿತ್ತು. ಈ ಬಗ್ಗೆ ಅವಳಲ್ಲಿ ಪದೇ ಪದೇ ಕೆಳುತ್ತಿದ್ದ. ಶಕೀರ್ ಬಗ್ಗೆ ಇಸಾಗೆ ಕೋಪ ಬಂದಿತ್ತು.

  ದಿನ ಕಳೆದಂತೆ ಈ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ಆರಂಭವಾಯಿತು. ಕೊನೆಗೆ ಅದು ವಿಚ್ಛೇದನದವರೆಗೆ ಬಂದು ನಿಂತಿತ್ತು. ಒಂದು ಸಂಜೆ ಇಸಾ ಬಾರ್​ಗೆ ತೆರಳಿದ. ಮನಸ್ಸಿಗೆ ತೃಪ್ತಿ ಆಗುವವರೆಗೂ ಕುಡಿದ. ಮೈರಾ ಜೊತೆ ಕಳೆದ ಕ್ಷಣವನ್ನು ಮೆಲುಕು ಹಾಕುತ್ತಾ ಖುಷಿ ಪಟ್ಟ. ನಂತರ ಕಾರು ಸ್ಟಾರ್ಟ್ ಮಾಡಿ 2 ಗಂಟೆಗೆ ಮನೆಗೆ ತೆರಳಿದ. ಬಾಗಿಲು ಬೀಗ ಹಾಕಿತ್ತು. ತನ್ನ ಬಳಿ ಇದ್ದ ಕೀನಿಂದ ಮನೆಯ ಬಾಗಿಲು ತೆರೆದ. ಈ ವೇಳೆ ಗಂಡು-ಹೆಣ್ಣು ಕಿಲಕಿಲ ಎಂದು ನಗುತ್ತಿರುವ ಧ್ವನಿ ಕೇಳಿತ್ತು. ಇದು ಮೈರಾ-ಶಕೀರ್ ಧ್ವನಿ ಎನ್ನುವುದು ಇಸಾಗೆ ಖಾತ್ರಿಯಾಗಿತ್ತು. ಡ್ರಾನಲ್ಲಿದ್ದ ಬಂದೂಕನ್ನು ಕೈಗೆತ್ತಿಕೊಂಡ. ಆಗ ಇಡೀ ಮನೆಯಲ್ಲಿ ಒಮ್ಮೆ ನಿಶ್ಯಬ್ದ ಆವರಿಸಿತು.

  ಇಸಾ ಬಂದೂಕು ಹಿಡಿದುಕೊಂಡು ಬೆಡ್​ರೂಮ್​ ಬಾಗಿಲು ತೆರೆದ. ಅಲ್ಲಿ ಮೈರಾ ಬೆತ್ತಲಾಗಿ ನಿಂತಿದ್ದಳು. ಆದರೆ, ಶಕೀರ್ ಕಾಣಲಿಲ್ಲ. ಎಲ್ಲ ಕಡೆಗಳಲ್ಲಿ ಹುಡುಕಾಡಿದ. ಆದರೆ ಶಕೀರ್ ಕುರುಹು ಇಲ್ಲ. ಇಸಾನನ್ನು ತಡೆಯಲು ಮೈರಾ ಮುಂದಾದಳು. ಈ ವೇಳೆ ಕಪಾಟಿನಿಂದ ಏನೋ ಶಬ್ದ ಹೊರಬಂತು.

  ಎಲ್ಲ ಸಿನಿಮಾಗಳಲ್ಲಿ ಮಾಡಿದಂತೆ ಶಕೀರ್ ಕಪಾಟಿನಲ್ಲಿ ಅಡಗಿದ್ದ. ಆತನನ್ನು ಹಿಡಿದು ಇಸಾ ಹೊರಗೆಳೆದ. ಹೆಂಡತಿ ಜೊತೆಗೆ ಈತ ಸರಸವಾಡುತ್ತಾನೆ ಎಂಬುದನ್ನು ನೆನೆದು ಇಸಾ ಕೋಪ ನೆತ್ತಿಗೇರಿತ್ತು. ಮೈರಾ ತಡೆಯುವುದರೊಳಗೆ ಬಂದೂಕಿನ ಟ್ರಿಗರ್ ಒತ್ತಿಯಾಗಿತ್ತು. ಪಿಸ್ತೂಲ್​ನಿಂದ ಹಾರಿದ ಗುಂಡು ನೇರವಾಗಿ ಶಕೀರ್ ಹೃದಯಕ್ಕೆ ನಾಟಿತ್ತು. ಆ ಕೋಣೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಶಕೀರನ ಮೃತದೇಹ ಹಿಡಿದು ಮೈರಾ ಅಳಲು ಆರಂಭಿಸಿದಳು. ಒಂದು ಅಧ್ಯಾಯ ಮುಗಿಸಿದ ಖುಷಿಯಲ್ಲಿ ಇಸಾ ಶೂನ್ಯದೆಡೆಗೆ ನೋಡುತ್ತಿದ್ದ.

  (ಲವ್,ಸೆಕ್ಸ್ ಧೋಖಾ ನೈಜ ಕಥೆ ಆಧರಿಸಿದೆ. ಇಲ್ಲಿ ಬರುವ ಊರುಗಳು ಹಾಗೂ ವ್ಯಕ್ತಿಗಳ ಹೆಸರನ್ನು ಮಾತ್ರ ಬದಲಾಯಿಸಲಾಗಿದೆ)
  First published: