Shocking News: ಗಂಡ ಹಣ ಕೊಡದಿದ್ದಕ್ಕೆ ಹೆಂಡತಿ ಸೂಸೈಡ್! ಪತ್ನಿಯ ಉರಿಯುತ್ತಿರುವ ಚಿತೆಗೆ ಹಾರಿದ ಪತಿ!

ಉಮಾ ಅಂತ್ಯಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸಿದ್ದಾರೆ. ಆಗ ಆಕೆಯ ಚಿತೆಗೆ ಬೆಂಕಿ ಇಡುತ್ತಿದ್ದಂತೆ ಬ್ರಿಜೇಶ್ ಕೂಡ ಉರಿಯುತ್ತಿರುವ ಬೆಂಕಿಗೆ ಹಾರಿದ್ದಾನೆ.

ಪತ್ನಿ ಉಮಾ ಜೊತೆ ಪತಿ ಬ್ರಿಜೇಶ್

ಪತ್ನಿ ಉಮಾ ಜೊತೆ ಪತಿ ಬ್ರಿಜೇಶ್

  • Share this:
ಉತ್ತರ ಪ್ರದೇಶ: ಹಿಂದಿನ ಕಾಲದಲ್ಲಿ ಸತಿ ಸಹಗಮನ ಪದ್ಧತಿ ಅಂತ ಒಂದು ಅನಿಷ್ಟ ಪದ್ಧತಿ ಇತ್ತು. ಅಂದರೆ ಗಂಡ (Husband) ಸತ್ತರೆ, ಆತನ ಅಂತ್ಯ ಸಂಸ್ಕಾರದ (Funeral) ಚಿತೆಯ ಬೆಂಕಿಗೆ (Fire) ಹೆಂಡತಿಯೂ (Wife) ಹಾರಬೇಕಿತ್ತು. ಆ ಮೂಲಕ ಸತ್ತರೆ ಹೆಂಡತಿ ಸತಿಯಾಗುತ್ತಾಳೆ, ಸಮಾಜದಲ್ಲಿ ಗೌರವದ ಸ್ಥಾನ ಪಡೆಯುತ್ತಾಳೆ ಎಂಬ ಮೂಢ ನಂಬಿಕೆ ಭಾರತದಲ್ಲಿ (India) ದಟ್ಟವಾಗಿ ಬೆಳೆದಿತ್ತು. ರಾಜಾರಾಂ ಮೋಹನ್‌ ರಾಯ್‌ರಂತಹ (Rajaram Mohan Rai) ಅನೇಕ ಮಹನೀಯರು ಹೋರಾಡಿ, ಸಮಾಜದ (Society) ವಿರೋಧವನ್ನೆಲ್ಲ ಕಟ್ಟಿಕೊಂಡು ಈ ಅನಿಷ್ಠ ಪದ್ಧತಿಗೆ ಮುಕ್ತಿ ನೀಡಿದರು. ಆಗ ಗಂಡ ಸತ್ತರೆ ಹೆಂಡತಿ ಆತನ ಚಿತೆಗೆ ಹಾರುವಂತೆ, ಹೆಂಡತಿ ಸತ್ತರೆ ಗಂಡನೇನೂ ಆಕೆಯ ಚಿತೆಗೆ ಹಾರುತ್ತಿರಲಿಲ್ಲ. ಇದೀಗ ಉತ್ತರ ಪ್ರದೇಶದಲ್ಲೂ (Uttar Pradesh) ಗಂಡನೊಬ್ಬ ತನ್ನ ಹೆಂಡತಿಯ ಚಿತೆಗೆ ಹಾರಿ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದಾನೆ.

 ಉತ್ತರ ಪ್ರದೇಶದಲ್ಲಿ ಭಯಾನಕ ಘಟನೆ

ಉತ್ತರ ಪ್ರದೇಶ ರಾಜ್ಯದ ಮಹೋಬಾ ಜಿಲ್ಲೆಯ ಕುಲ್ಪಹಾಡ್ ಕೊಟ್ವಾಲಿ ಪ್ರದೇಶದ ಜೈತ್‌ಪುರ ಗ್ರಾಮದಲ್ಲಿ ಇಂಥದ್ದೊಂದು ಭಯಾನಕ ಘಟನೆ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ತನ್ನ ಪತ್ನಿಯ ಚಿತೆಗೆ ಹಾರಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ,.

ಆತ್ಮಹತ್ಯೆಗೆ ಶರಣಾದ ಪತಿ ಹಾಗೂ ಪತ್ನಿ ಯಾರು?

ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯನ್ನು ಬ್ರಿಜೇಶ್ ಎಂದು ಗುರುತಿಸಲಾಗಿದೆ. ಜೈತ್‌ಪುರ ಗ್ರಾಮದ ನಿವಾಸಿಯಾದ ಈತ ತನ್ನ ಪತ್ನಿ ಉಮಾ ಎಂಬಾಕೆ ಜೊತೆ ವಾಸಿಸುತ್ತಿದ್ದ. ಪತ್ನಿ ಉಮಾ ನಿನ್ನೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಅಂತ್ಯಸಂಸ್ಕಾರ ಮಾಡುತ್ತಿದ್ದಾಗ ಆಕೆ ಚಿತೆ ಮೇಲೆ ಹಾರಿದ ಬ್ರಿಜೇಶ್, ತಾನೂ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ.

ಇದನ್ನೂ ಓದಿ: Bridge Collapse: 138 ಚಕ್ರದ ಲಾರಿ ಸಂಚರಿಸಿ ಬ್ರಿಟಿಷ್ ಕಾಲದ ಸೇತುವೆ ಕುಸಿತ

 5 ಸಾವಿರ ಹಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಪತ್ನಿ

ಇನ್ನು ಪತಿ ಬ್ರಿಜೇಶ್ ಹಾಗೂ ಪತ್ನಿ ಉಮಾ ನಡುವೆ ಮೊನ್ನೆ ರಾತ್ರಿ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದೆ. ಆಕೆ 5 ಸಾವಿರ ಹಣ ಕೊಡುವಂತೆ ಪತಿಗೆ ಕೇಳಿದ್ದಾಳೆ. ಅದಕ್ಕೆ ಪತ್ನಿಗೆ ಹಣ ಕೊಡಲು ಬ್ರಿಜೇಶ್ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಉಮಾ ಆತ್ಮಹತ್ಯೆಗೆ ಶರಣಾಗಿದ್ದಳು. ರಾತ್ರಿಯೇ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಚಿಕಿತ್ಸೆ ಫಲಿಸದೇ ಮೃತಪಟ್ಟ ಬ್ರಿಜೇಶ್

ಉಮಾ ಅಂತ್ಯಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸಿದ್ದಾರೆ. ಆಗ ಆಕೆಯ ಚಿತೆಗೆ ಬೆಂಕಿ ಇಡುತ್ತಿದ್ದಂತೆ ಬ್ರಿಜೇಶ್ ಕೂಡ ಉರಿಯುತ್ತಿರುವ ಬೆಂಕಿಗೆ ಹಾರಿದ್ದಾನೆ. ಕೂಡಲೇ ಕುಟುಂಬಸ್ಥರು, ಸ್ಥಳೀಯರು ಆತನನ್ನು ರಕ್ಷಿಸುವ ಹೊತ್ತಿಗೆ ಅತನ ದೇಹದ ಕೆಲವು ಭಾಗಗಳು ಸುಟ್ಟಿದ್ದವಂತೆ. ನಂತರ ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಪತ್ನಿ ಆತ್ಮಹತ್ಯೆ ಬಳಿಕ ಪತಿಗೆ ಖಿನ್ನತೆ

ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಶಾಕ್‌ಗೆ ಒಳಗಾದ ಪತಿ ಬ್ರಿಜೇಶ್ ಖಿನ್ನತೆಗೆ ಒಳಗಾಗಿದ್ದಾನೆ. ಆಕೆಯ ನಿಧನದ ನಂತರ ತನಗೆ ಬದುಕಲು ಇಷ್ಟವಿಲ್ಲ ಎಂದು ಬ್ರಿಜೇಶ್ ಈ ರೀತಿ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.

ಇದನ್ನೂ ಓದಿ: JNU Clash: ಹಿಂಸಾತ್ಮಕ ರೂಪ ತಾಳಿದ ವೆಜ್-ನಾನ್​​ವೆಜ್ ಜಗಳ, 15 ವಿದ್ಯಾರ್ಥಿಗಳು ಆಸ್ಪತ್ರೆಗೆ

ಬ್ರಿಜೇಶ್ ವಿರುದ್ಧ ಉಮಾ ಕುಟುಂಬಸ್ಥರ ಆರೋಪ

ಇನ್ನು ವರದಕ್ಷಿಣೆಗಾಗಿ ಉಮಾಳನ್ನು ಆಕೆಯ ಪತಿ ಮತ್ತು ಅತ್ತೆಯವರೇ ಕೊಂದಿದ್ದಾರೆ ಎಂದು ಉಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಆಗಿಲಿ ಅಂತ ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ನಮ್ಮ ಮಗಳ ಆತ್ಮಕ್ಕೆ ಶಾಂತಿ ಕೊಡಿಸಿ, ಅವಳ ಸಾವಿಗೆ ನ್ಯಾಯ ಕೊಡಿಸಿ ಅಂತ ಆಗ್ರಹಿಸಿದ್ದಾರೆ.
Published by:Annappa Achari
First published: