Husband Cuts Wife's Nose: ಆ ಕೆಲಸ ಮಾಡದ ಹೆಂಡತಿಯ ಮೂಗನ್ನು ಕಚ್ಚಿ ತುಂಡರಿಸಿದ ಗಂಡ!

ಗಂಡ-ಹೆಂಡತಿ ಮಧ್ಯೆ ಜಗಳ ಆರಂಭವಾಗಿದೆ. ಈ ವೇಳೆ ಕೋಪಗೊಂಡ ದಿನೇಶ್ ಪತ್ನಿಯ ಮೇಲೆ ಎರಗಿ ಆಕೆಯ ಮೂಗನ್ನು ಬರ್ಬರವಾಗಿ ಕಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಗಾಯಗೊಂಡಿರುವ ಪತ್ನಿ

ಗಾಯಗೊಂಡಿರುವ ಪತ್ನಿ

  • Share this:
ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿರುವ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿ ನ್ಯಾಯಲಯದಲ್ಲಿದ್ದ ಕೇಸ್ ಹಿಂಡೆಯಲು ಒಪ್ಪದಿದ್ದಾಗ ಕೋಪಗೊಂಡ ಪತಿರಾಯ ತಮ್ಮ ಇಬ್ಬರು ಹೆಣ್ಣು ಮಕ್ಕಳ ಎದುರೇ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ಕ್ರೌರ್ಯ ಮೆರೆದಿದ್ದಾರೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ಈ ಘಟನೆ ಅಂಜುಮನ್ ಕಾಲೋನಿಯಲ್ಲಿ ನಡೆದಿದೆ. ಪತ್ನಿ ಟೀನಾ ಮನೆಗೆ ಆಗಮಿಸಿದ ದಿನೇಶ್ ಕೇಸ್ ಹಿಂಪಡೆಯುವಂತೆ ಕೇಳಿದ್ದಾನೆ. ಪತ್ನಿ ಒಪ್ಪದಿದ್ದಾಗ ಇಬ್ಬರ ಮಧ್ಯೆ ಇದೇ ವಿಷಯಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಕೋಪಗೊಂಡ ದಿನೇಶ್ ಪತ್ನಿಯ ಮೇಲೆ ಎರಗಿ ಆಕೆಯ ಮೂಗನ್ನು ಬರ್ಬರವಾಗಿ ಕಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಆಸ್ಪತ್ರೆಗೆ ದಾಖಲಿಸಿದ ನೆರೆಹೊರೆಯವರು

ಮಹಿಳೆ ಮತ್ತು ಮಕ್ಕಳ ಚೀರಾಟ ಕೇಳಿ ದೌಡಾಯಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿ ಟೀನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಟೀನಾ ಮನೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2008ರಲ್ಲಿ ದಿನೇಶ್ ಜೊತೆ ಟೀನಾ ಮದುವೆ  

ರತ್ಲಾಮ್ ಜಿಲ್ಲೆಯ ಅಲೌಟ್ ನಿವಾಸಿಯಾಗಿದ್ದ ಟೀನಾ ಮದುವೆ 2008ರಲ್ಲಿ ಉಜ್ಜೈನಿಯ ದಿನೇಶ್ ಜೊತೆ ನಡೆದಿತ್ತು. ಮದುವೆ ವೇಳೆ ದಿನೇಶ್ ತಾನೂ ಕೂಲಿ ಕೆಲಸ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದನು. ಮದುವೆ ಬಳಿಕ ಟೀನಾಗೆ ತನ್ನ ಪತಿ ನಿರುದ್ಯೋಗಿ ಮತ್ತು ಕುಡುಕ ಎಂಬ ವಿಷಯ ಗೊತ್ತಾಗಿದೆ. ಪ್ರತಿದಿನ ಕುಡಿದು ಬರುತ್ತಿದ್ದ ದಿನೇಶ್ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನು.

ಇದನ್ನೂ ಓದಿ: Divorce: ಹೆಂಡತಿ ದಿನನಿತ್ಯ ಸ್ನಾನ ಮಾಡುವುದಿಲ್ಲ ಎಂದು ಡೈವೋರ್ಸ್ ನೀಡಿದ ಗಂಡ!

ಪತಿಯ ವರ್ತನೆಯಿಂದ ಬೇಸತ್ತ ಟೀನಾ ಎರಡು ಹೆಣ್ಣು ಮಕ್ಕಳ ಜೊತೆ ತವರು ಸೇರಿದ್ದರು. ಇಲ್ಲಿ ಟೀನಾ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 2019ರಲ್ಲಿ ವಿಚ್ಛೇದನ ಕೋರಿ ಮತ್ತು ಪರಿಹಾರ ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದ್ರೆ ದಿನೇಶ್ ಕೇಸ್ ಹಿಂಪಡೆಯುವಂತೆ ಪತ್ನಿ ಟೀನಾ ಮೇಲೆ ಒತ್ತಡ ಹಾಕಲಾರಂಭಿಸಿದ್ದನು.

ಭಾನುವಾರ ಪತ್ನಿ ಮನೆಗೆ ಬಂದ ದಿನೇಶ್ ಇದೇ ವಿಷಯಕ್ಕಾಗಿ ಜಗಳ ಮಾಡಿದ್ದಾನೆ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ಮೂಗು ಕಚ್ಚಿ ಪರಾರಿಯಾಗಿದ್ದಾನೆ. ಪತಿ-ಪತ್ನಿ ಮಧ್ಯೆ ಕೆಲ ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಸದ್ಯ ಮಹಿಳೆಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ದಿನೇಶ್ ನನ್ನು ಬಂಧಿಸಲಾಗಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಹಿರಿಯ ಪೊಲೀಸ್ ಅಧಿಕಾರಿ ನೀರಜ್ ಸಾರ್ವಾನ್ ಮಾಹಿತಿ ನೀಡಿದ್ದಾರೆ

ಸೆ.9ರಂದು ರಾಜಸ್ಥಾನದಲ್ಲಿ ಇಂತಹುವುದೇ ಕೃತ್ಯ

ರಾಜಸ್ಥಾನದ ಜೋಧಪುರದಲ್ಲಿ ಪತಿಯೋರ್ವ ಪತ್ನಿಯ ಮೂಗನ್ನು ಚಾಕುವಿನಿಂದ ಕತ್ತರಿಸಿದ್ದನು. ಪತ್ನಿ ತವರಿಗೆ ಹೊರಟಾಗ ಕೋಪಗೊಂಡ ಪತಿ ಮೂಗು ಕತ್ತರಿಸಿದ್ದನು. ಈ ಸಂಬಂಧ ಜನ್ವಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವರದಿ: ಮಹ್ಮದ್​ ರಫೀಕ್​ ಕೆ
Published by:Kavya V
First published: