• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Divorce: ನೀನು ಗರ್ಭಿಣಿಯಾದರೆ ನಾನು ನಿನಗೆ ವಿಚ್ಛೇದನ ಕೊಡುತ್ತೇನೆ: ಹೀಗೆ ಬೆದರಿಸಿದ ಪತಿಗೆ ಹೆಂಡತಿ ಏನು ಮಾಡಿದಳು ಗೊತ್ತಾ?

Divorce: ನೀನು ಗರ್ಭಿಣಿಯಾದರೆ ನಾನು ನಿನಗೆ ವಿಚ್ಛೇದನ ಕೊಡುತ್ತೇನೆ: ಹೀಗೆ ಬೆದರಿಸಿದ ಪತಿಗೆ ಹೆಂಡತಿ ಏನು ಮಾಡಿದಳು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವಿಚಾರ ಗೊತ್ತಾಗಿದ್ದೇ ಮದುವೆಯಾದ ನಂತರದಲ್ಲಿ. ಹಾಗಾಗಿ ಇದೊಂದು ಬಿಡಿಸಲಾರದ ಗಂಟಿನಂತಾಗಿದೆ ಎಂದು ಮಹಿಳೆ ದೂರಿದ್ದಾರೆ.

  • Share this:

ಅಬು ಧಾಬಿ: ನೀನೆಲ್ಲಾದರು ಗರ್ಭಿಣಿಯಾದರೆ ನಿನಗೆ ವಿಚ್ಛೇದನ ಕೊಡುತ್ತೇನೆ ಎಂದು ಇಲ್ಲಿನ ಮಹಿಳೆಯೊಬ್ಬರಿಗೆ ಆಕೆಯ ಪತಿ ಬೆದರಿಸಿದ್ದರಂತೆ. ಇದರಿಂದ ರೋಸಿ ಹೋದ ಆಕೆ ತಾನೇ ಡಿವೋರ್ಸ್ ಕೇಳಿದ್ದಾರೆ. ತಮ್ಮ ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ತನ್ನ ಪತಿ ಸದಾ ನನ್ನನ್ನು ಈ ವಿಚಾರವಾಗಿ ಬೆದರಿಸುತ್ತಿದ್ದರು. ಇದರಿಂದ ರೋಸಿ ಹೋದ ಮಹಿಳೆ ಇವನ ಸಹವಾಸವೇ ಸಾಕು ಅಂತ ತಾನೇ ಮುಂದೆ ನಿಂತು ಡಿವೋರ್ಸ್​ಗೆ ಅರ್ಜಿ ಹಾಕಿದ್ದಾರೆ. ಹಾಗಂತ ತನ್ನ ಪತಿಗೆ ಮಕ್ಕಳನ್ನು ಪಡೆಯದೇ ಇರಲು ಅಡ್ಡಿಯಾಗುವಂಥಾ ಯಾವ ಸಮಸ್ಯೆಯೂ ಇಲ್ಲ. ಆದರೆ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ಆತ ಸಿದ್ಧನಿಲ್ಲ. ಮತ್ತು ಈ ವಿಚಾರ ಗೊತ್ತಾಗಿದ್ದೇ ಮದುವೆಯಾದ ನಂತರದಲ್ಲಿ. ಹಾಗಾಗಿ ಇದೊಂದು ಬಿಡಿಸಲಾರದ ಗಂಟಿನಂತಾಗಿದೆ ಎಂದು ಮಹಿಳೆ ದೂರಿದ್ದಾರೆ.


ಇವರಿಬ್ಬರ ನಡುವಿನ ಈ ಜಗಳ ಅದ್ಯಾವ ಮಟ್ಟಿಗೆ ಹೋಗಿದೆ ಎಂದರೆ ಪತಿ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ನಾನು ಯಾವಾಗ ಮಕ್ಕಳನ್ನು ಪಡೆಯುವ ಬಗ್ಗೆ ಮಾತಾಡ್ತೀನೋ, ಆಗೆಲ್ಲಾ ನನ್ನ ಮೇಲೆ ಹಲ್ಲೆ ಮಾಡಿ ವಿಚ್ಛೇದನ ಕೊಡುವುದಾಗಿ ಆತ ಹೆದರಿಸುತ್ತಾನೆ. ನನಗೆ ವಿಚ್ಛೇದನ ಕೊಡು ಎಂದಾಗೆಲ್ಲಾ ತವರಿಗೆ ತಂದು ಬಿಟ್ಟುಹೋಗುತ್ತಾರೆ ಎಂದು ಮಹಿಳೆ ದೂರಿದ್ದಾರೆ.


ಪುರುಷನಿಗೆ ಕಾನೂನಾತ್ಮಕವಾಗಿ ಅಥವಾ ಆರೋಗ್ಯ ಸಂಬಂಧವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದಾಗ ಮಗು ಪಡೆಯದಂತೆ ಆತ ಪತ್ನಿಯನ್ನು ತಡೆಯುವಂತಿಲ್ಲ. ಇಂಥಾ ಸಂದರ್ಭದಲ್ಲಿ ಪತ್ನಿ ಹೇಳಿದಂತೆ ಪತಿಗೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟವಿಲ್ಲ ಎಂದಾದರೆ ಆಕೆಗೆ ವಿಚ್ಛೇದನ ನೀಡಬಹುದು ಎಂದು ವಕೀಲರು ತಿಳಿಸಿದ್ದಾರೆ.


ಇದನ್ನೂ ಓದಿ: ಫೋಟೋದಲ್ಲಿ ಮುಖ ಬ್ಲರ್ ಮಾಡಿದ್ದು ನಾನೇ, ಗಂಡನದ್ದೇನೂ ತಪ್ಪಿಲ್ಲ: ಕ್ರಿಕೆಟಿಗ Irfan Pathan ಪತ್ನಿ


ಷರಿಯಾ ಕಾನೂನು ಬಂದಿದ್ದೇ ಮಾನವ ಸಂಕುಲವನ್ನು ಹೆಚ್ಚಿಸುವ ಉದ್ದೇಶದಿಂದ. ಮಹಿಳೆಗೆ ಮಗು ಪಡೆಯದಂತೆ ತಡೆಯುವುದು ಈ ಕಾನೂನಿಗೇ ವಿರುದ್ಧವಾದದ್ದು. ಆಕೆ ಮಾನಸಿಕವಾಗಿ ಅನುಭವಿಸಿರುವ ನಷ್ಟಕ್ಕೆ ಪರಿಹಾರದ ವಿಚಾರವಾಗಿ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ವಕೀಲ ಅಲ್ ಹುರೈಬಿ ತಿಳಿಸಿದ್ದಾರೆ. ಕೌಟುಂಬಿಕ ಸಲಹೆಗಾರ ಅಬ್ದುಲ್ ರಹಮಾನ್ ಅಲ್ ಜಹ್​ರಾನಿ ಹೇಳುವಂತೆ ಮಹಿಳೆಗೆ ಮಗುವನ್ನು ಪಡೆಯಲು ಸಾಧ್ಯವಿದ್ದಾಗಲೂ ಆಕೆಗೆ ಅವಕಾಶ ಸಿಗದಿದ್ದರೆ ಆಗ ಆ ಪತಿ ಪತ್ನಿಯರಲ್ಲಿ ದ್ವೇಷ ಹುಟ್ಟುತ್ತದೆ ಅಥವಾ ಅವರು ಒಬ್ಬರಿಂದೊಬ್ಬರು ಮಾನಸಿಕವಾಗಿ ಬಹಳ ದೂರವಿರುತ್ತಾರೆ.


ಪತ್ನಿಗೆ ಯಾವುದೇ ಪತಿ ಮಗು ಮಾಡಿಕೊಳ್ಳದಂತೆ ತಡೆಯುವಂತಿಲ್ಲ, ಅದು ಕಾನೂನು ರೀತಿ ಅಪರಾಧ ಮಾತ್ರವಲ್ಲ.. ಆಕೆಯ ಹಕ್ಕುಗಳ ಕೊಲೆ ಕೂಡಾ. ಅದೇ ರೀತಿ ಮಹಿಳೆ ತನ್ನಲ್ಲೇನೂ ಸಮಸ್ಯೆ ಇಲ್ಲದಾಗಲೂ ಪತಿಯ ಒತ್ತಡದಿಂದ ಮಕ್ಕಳನ್ನು ಪಡೆಯದೇ ಇರಲೂ ಯಾವುದೇ ಕಾರಣವಿಲ್ಲ. ಆಕೆಯ ಇಚ್ಛೆಗೆ ವಿರುದ್ಧವಾಗಿ ಇಂಥಾ ಘಟನೆ ನಡೆಯುತ್ತಿರುವುದು ಆಶ್ಚರ್ಯಕರ ಎಂದು ಅನೇಕ ತಜ್ಞರು ಹೇಳಿದ್ದಾರೆ. ಮುಸಲ್ಮಾನ ಕುಟುಂಬಗಳಲ್ಲಿ ಅದರಲ್ಲೂ ಅಬು ಧಾಬಿಯಂಥಾ ಸ್ಥಲದಲ್ಲಿ ಇಂಥಾ ಪ್ರಕರಣ ನಡೆದಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.


ನ್ಯೂಸ್ 18 ಕನ್ನಡ ಕಾಳಜಿ: ಕೋವಿಡ್ ಸಾಂಕ್ರಾಮಿಕ ಖಾಯಿಲೆ ಇನ್ನೂ ಕಡಿಮೆಯಾಗಿಲ್ಲ. ಅನೇಕ ಕಡೆ ಕಟ್ಟುನಿಟ್ಟಾದ ಲಾಕ್​ಡೌನ್ ಜಾರಿಯಲ್ಲಿದೆ. ಆದ್ದರಿಂದ ಅತ್ಯಂತ ಅವಶ್ಯಕವಿದ್ದರೆ ಮಾತ್ರವೇ ಮನೆಯಿಂದ ಹೊರಬನ್ನಿ. ಇಲ್ಲದಿದ್ದರೆ ಮನೆಯೊಳಗೆ ನಿಮ್ಮವರೊಂದಿಗೆ ಸುರಕ್ಷಿತವಾಗಿರಿ. ಮನೆಯಿಂದ ಹೊರಗೆ ಹೋಗಲೇಬೇಕಾದ ಪರಿಸ್ಥಿತಿ ಎದುರಾದರೆ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ದೈಹಿಕ ಅಂತ ಇಟ್ಟುಕೊಂಡೇ ಎಲ್ಲರೊಂದಿಗೆ ವ್ಯವಹರಿಸಿ. ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿರಿ. ಸದ್ಯ ಈ ಸೋಂಕಿಗೆ ಇರುವ ಏಕೈಕ ಪರಿಹಾರ ಲಸಿಕೆ.  ನಿಮ್ಮ ಸರದಿ ಬಂದಾಗ ಯಾವುದೇ ಆಲೋಚನೆ ಮಾಡದೇ ಲಸಿಕೆ ಪಡೆಯಿರಿ. ಎರಡು ಡೋಸ್ ಲಸಿಕೆಯನ್ನು ತಪ್ಪದೇ ಪಡೆದರೆ ಆಗ ವೈರಸ್​ನಿಂದ ನೀವು ಬಚಾವಾಗಬಹುದು.

top videos
    First published: